ಮಂಡ್ಯ : ಟ್ರಾಫಿಕ್ ಪೊಲೀಸರ ಯಡವಟ್ಟಿಗೆ 3 ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆಗೆ ಮಂಡ್ಯ ಶಾಸಕ ರವಿ ಗಣಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದು. ಘಟನೆಗೆ ಕಾರಣವಾದ ಪೊಲೀಸರನ್ನು ಕೂಡಲೇ ಅಮಾನತು ಮಾಡಲು ಸೂಚಿಸಿದ್ದೇನೆ ಮತ್ತು ಮಗುವಿನ ಕುಟುಂಬಕ್ಕೆ ಪರಿಹಾರ ಕೊಡಿಸುತ್ತೇನೆ ಎಂದು ಪವರ್ ಟಿವಿ ಮೂಲಕ ಭರವಸೆ ನೀಡಿದರು.
ಪವರ್ ಟಿವಿ ಜೊತೆ ದೆಹಲಿಯಿಂದ ಪೋನ್ ಕಾಲ್ನಲ್ಲಿ ಮಾತನಾಡಿದ ಶಾಸಕ ರವಿ ಗಣಿಗ ನಡೆದ ಘಟನೆ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿದ್ದು. ಘಟನೆಗೆ ಕಾರಣರಾದ ಪೊಲೀಸರನ್ನು ಸಸ್ಪೆಂಡ್ ಮಾಡುವಂತೆ ಎಸ್ಪಿಗೆ ಸೂಚನೆ ನೀಡಿದ್ದೇನೆ. ನಡೆದಿರುವ ದುರ್ಘಟನೆಗೆ ಆ ಕುಟುಂಬದರವ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ:ದೇಶದಲ್ಲಿ 1000ದ ಗಡಿ ದಾಟಿದ ಕೋವಿಡ್ ಪ್ರಕರಣಗಳ ಸಂಖ್ಯೆ: ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ
ವಾಹನ ತಪಾಸಣೆ ನಡೆಸುವ ಪೊಲೀಸರು ಬಚ್ಚಿಟ್ಟುಕೊಂಡು ವಾಹನ ತಡೆಯುತ್ತಿದ್ದಾರೆ. ಇದರಿಂದ ಇಂತಹ ಘಟನೆ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು ” ಈ ಹಿಂದೆಯೇ ನಾನು ಪೊಲೀಸರಿಗೆ ವಾರ್ನ್ ಮಾಡಿದ್ದೇ. ಕಳ್ಳರನ್ನು ಹಿಡಿಯೋ ತರ ವಾಹನಗಳನ್ನು ತಡೆದು ತಪಾಸಣೆ ನಡೆಸಬೇಡಿ ಎಂದು ಹೇಳಿದ್ದೆ. ಆದರೆ ನಾನು ಹೇಳಿದಾಗ ಕೆಲ ದಿನಗಳ ಕಾಲ ಸುಮ್ಮನಿದ್ದರು. ಆದರೆ ನಂತರ ಮತ್ತೆ ಶುರು ಮಾಡಿಕೊಂಡಿದ್ದಾರೆ.
ಪೊಲೀಸರ ಈ ಕೃತ್ಯದಿಂದ ಆಸ್ಪತ್ರೆಗೆ ತೆರಳುತ್ತಿದ್ದ 3 ವರ್ಷದ ಮಗು ಸಾವನ್ನಪ್ಪಿದೆ. ಪೊಲೀಸರು ಈ ರೀತಿ ಮಾಡುವುದನ್ನು ನಿಲ್ಲಿಸಿ ನೋಟಿಸ್ ಕೊಡಬೇಕು, ಸಿಸಿಟಿವಿಗಳಿವೆ ಅವುಗಳ ಮೂಲಕ ಕ್ರಮ ತೆಗೆದುಕೊಳ್ಳಬೇಕು. ದುರ್ಘಟನೆಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ರವಿ ಗಣಿಗ ಹೇಳಿದರು.
ಇದನ್ನೂ ಓದಿ :ಟ್ರಾಫಿಕ್ ಪೊಲೀಸ್ ಯಡವಟ್ಟು; ಬೈಕ್ನಿಂದ ಬಿದ್ದು 3 ವರ್ಷದ ಕಂದಮ್ಮ ಸಾ*ವು
ಮುಂದುವರಿದು ಮಾತನಾಡಿದ ಶಾಸಕ ರವಿಗಣಿಗ ‘ ನಾನೀಗ ಕೋರ್ಟ್ ಕೆಲಸದ ಮೇಲೆ ದೆಹಲಿಯಲ್ಲಿದ್ದೇನೆ. ನಾಳೆ ಮಂಡ್ಯಗೆ ಬಂದ ಕೂಡಲೇ ಮಗುವಿನ ಮನೆಗೆ ಭೇಟಿ ನೀಡುತ್ತೇನೆ. ಮುಖ್ಯಮಂತ್ರಿಗಳ ಬಳಿ ಮಾತನಾಡಿ ಮಗುವಿನ ಕುಟುಂಬಕ್ಕೆ ಪರಿಹಾರ ಕೊಡಿಸುತ್ತೇನೆ ಮತ್ತು ಅದರ ಜೊತೆಗೆ ವೈಯಕ್ತಿಕವಾಗಿ ನಾನು ಪರಿಹಾರ ಕೊಡುತ್ತೇನೆ ಎಂದು ಹೇಳಿದರು.