Site icon PowerTV

‘ಪೊಲೀಸರಿಗೆ ಮೊದಲೇ ವಾರ್ನ್​ ಮಾಡಿದ್ದೇ’; ಮಂಡ್ಯ ದುರ್ಘಟನೆಗೆ ಶಾಸಕ ರವಿ ಗಣಿಗ ತೀವ್ರ ಬೇಸರ

ಮಂಡ್ಯ : ಟ್ರಾಫಿಕ್​ ಪೊಲೀಸರ ಯಡವಟ್ಟಿಗೆ 3 ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆಗೆ ಮಂಡ್ಯ ಶಾಸಕ ರವಿ ಗಣಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದು. ಘಟನೆಗೆ ಕಾರಣವಾದ ಪೊಲೀಸರನ್ನು ಕೂಡಲೇ ಅಮಾನತು ಮಾಡಲು ಸೂಚಿಸಿದ್ದೇನೆ ಮತ್ತು ಮಗುವಿನ ಕುಟುಂಬಕ್ಕೆ ಪರಿಹಾರ ಕೊಡಿಸುತ್ತೇನೆ ಎಂದು ಪವರ್ ಟಿವಿ ಮೂಲಕ ಭರವಸೆ ನೀಡಿದರು.

ಪವರ್​ ಟಿವಿ ಜೊತೆ ದೆಹಲಿಯಿಂದ ಪೋನ್​ ಕಾಲ್​ನಲ್ಲಿ ಮಾತನಾಡಿದ ಶಾಸಕ ರವಿ ಗಣಿಗ ನಡೆದ ಘಟನೆ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿದ್ದು. ಘಟನೆಗೆ ಕಾರಣರಾದ ಪೊಲೀಸರನ್ನು ಸಸ್ಪೆಂಡ್​ ಮಾಡುವಂತೆ ಎಸ್ಪಿಗೆ ಸೂಚನೆ ನೀಡಿದ್ದೇನೆ. ನಡೆದಿರುವ ದುರ್ಘಟನೆಗೆ ಆ ಕುಟುಂಬದರವ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು. ಇದನ್ನೂ ಓದಿ:ದೇಶದಲ್ಲಿ 1000ದ ಗಡಿ ದಾಟಿದ ಕೋವಿಡ್​ ಪ್ರಕರಣಗಳ ಸಂಖ್ಯೆ: ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ

ವಾಹನ ತಪಾಸಣೆ ನಡೆಸುವ ಪೊಲೀಸರು ಬಚ್ಚಿಟ್ಟುಕೊಂಡು ವಾಹನ ತಡೆಯುತ್ತಿದ್ದಾರೆ. ಇದರಿಂದ ಇಂತಹ ಘಟನೆ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು ” ಈ ಹಿಂದೆಯೇ ನಾನು ಪೊಲೀಸರಿಗೆ ವಾರ್ನ್​ ಮಾಡಿದ್ದೇ. ಕಳ್ಳರನ್ನು ಹಿಡಿಯೋ ತರ ವಾಹನಗಳನ್ನು ತಡೆದು ತಪಾಸಣೆ ನಡೆಸಬೇಡಿ ಎಂದು ಹೇಳಿದ್ದೆ. ಆದರೆ ನಾನು ಹೇಳಿದಾಗ ಕೆಲ ದಿನಗಳ ಕಾಲ ಸುಮ್ಮನಿದ್ದರು. ಆದರೆ ನಂತರ ಮತ್ತೆ ಶುರು ಮಾಡಿಕೊಂಡಿದ್ದಾರೆ.

ಪೊಲೀಸರ ಈ ಕೃತ್ಯದಿಂದ ಆಸ್ಪತ್ರೆಗೆ ತೆರಳುತ್ತಿದ್ದ 3 ವರ್ಷದ ಮಗು ಸಾವನ್ನಪ್ಪಿದೆ. ಪೊಲೀಸರು ಈ ರೀತಿ ಮಾಡುವುದನ್ನು ನಿಲ್ಲಿಸಿ ನೋಟಿಸ್​ ಕೊಡಬೇಕು, ಸಿಸಿಟಿವಿಗಳಿವೆ ಅವುಗಳ ಮೂಲಕ ಕ್ರಮ ತೆಗೆದುಕೊಳ್ಳಬೇಕು. ದುರ್ಘಟನೆಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ರವಿ ಗಣಿಗ ಹೇಳಿದರು.

ಇದನ್ನೂ ಓದಿ :ಟ್ರಾಫಿಕ್​ ಪೊಲೀಸ್​ ಯಡವಟ್ಟು; ಬೈಕ್​ನಿಂದ ಬಿದ್ದು 3 ವರ್ಷದ ಕಂದಮ್ಮ ಸಾ*ವು

ಮುಂದುವರಿದು ಮಾತನಾಡಿದ ಶಾಸಕ ರವಿಗಣಿಗ ‘ ನಾನೀಗ ಕೋರ್ಟ್​ ಕೆಲಸದ ಮೇಲೆ ದೆಹಲಿಯಲ್ಲಿದ್ದೇನೆ. ನಾಳೆ ಮಂಡ್ಯಗೆ ಬಂದ ಕೂಡಲೇ ಮಗುವಿನ ಮನೆಗೆ ಭೇಟಿ ನೀಡುತ್ತೇನೆ. ಮುಖ್ಯಮಂತ್ರಿಗಳ ಬಳಿ ಮಾತನಾಡಿ ಮಗುವಿನ ಕುಟುಂಬಕ್ಕೆ ಪರಿಹಾರ ಕೊಡಿಸುತ್ತೇನೆ ಮತ್ತು ಅದರ ಜೊತೆಗೆ ವೈಯಕ್ತಿಕವಾಗಿ ನಾನು ಪರಿಹಾರ ಕೊಡುತ್ತೇನೆ ಎಂದು ಹೇಳಿದರು.

Exit mobile version