ದೆಹಲಿ: ದೇಶದಲ್ಲಿ 1000ಕ್ಕೂ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು. ಕೇರಳದಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಕಳೆದ 2 ವರ್ಷಗಳಿಂದ ಮರೆಯಾಗಿದ್ದ ಕೋವಿಡ್ ಮಹಾಮಾರಿ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು. ದೇಶದ ಅನೇಕ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇದರ ನಡುವೆ ಕೇಂದ್ರ ಆರೋಗ್ಯ ಇಲಾಖೆ ದೇಶದಲ್ಲೆಡೆ 1000ಕ್ಕು ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದ್ದು. ಇಂದು(ಮೇ.26) ಬೆಳಿಗ್ಗೆ 8 ಗಂಟೆ ವೇಳೆಗೆ ದೇಶದಲ್ಲಿ 1009 ಕೋವಿಡ್ ಸಕ್ರಿಯ ಪ್ರಕರಣಗಳಿವೆ ಎಂದು ತನ್ನ ಪೋರ್ಟಲ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ :ಟ್ರಾಫಿಕ್ ಪೊಲೀಸ್ ಯಡವಟ್ಟು; ಬೈಕ್ನಿಂದ ಬಿದ್ದು 3 ವರ್ಷದ ಕಂದಮ್ಮ ಸಾ*ವು
At 08:00 Hours, 26th May, the number of active COVID-19 cases in India stands at 1009: Ministry of Health and Family Welfare pic.twitter.com/ljFIsucOof
— ANI (@ANI) May 26, 2025
ಇನ್ನು 1009 ಕೋವಿಡ್ ಪ್ರಕರಣಗಳ ಪೈಕಿ ಬಹುಪಾಲು ಕೇರಳದಿಂದ ವರದಿಯಾಗಿದ್ದು. ಕೇರಳ ರಾಜ್ಯವೊಂದರಲ್ಲೇ 430 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಜೊತೆಗೆ ಮಹಾರಾಷ್ಟ್ರದಲ್ಲಿ 209, ದೆಹಲಿಯಲ್ಲಿ 104 ಮತ್ತು ಕರ್ನಾಟಕದಲ್ಲಿ 47 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಇದರ ನಡುವೆ ಆಂದ್ರಪ್ರದೇಶ ಸರ್ಕಾರ ತನ್ನ ಪ್ರಜೆಗಳಿಗೆ ಮಾಸ್ಕ್ ಧರಿಸವುದು ಕಡ್ಡಾಯ ಮಾಡಿದೆ. ಇದನ್ನೂ ಓದಿ:ಭೀಕರ ರಸ್ತೆ ಅಪಘಾತ; ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾ*ವು
ಜೊತೆಗೆ ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಯಾವುದೇ ಸಕ್ರಿಯ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.