Site icon PowerTV

ದೇಶದಲ್ಲಿ 1000ದ ಗಡಿ ದಾಟಿದ ಕೋವಿಡ್​ ಪ್ರಕರಣಗಳ ಸಂಖ್ಯೆ: ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ

ದೆಹಲಿ: ದೇಶದಲ್ಲಿ 1000ಕ್ಕೂ ಹೆಚ್ಚು ಸಕ್ರಿಯ ಕೋವಿಡ್​ ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು. ಕೇರಳದಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಕಳೆದ 2 ವರ್ಷಗಳಿಂದ ಮರೆಯಾಗಿದ್ದ ಕೋವಿಡ್​ ಮಹಾಮಾರಿ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು. ದೇಶದ ಅನೇಕ ರಾಜ್ಯಗಳಲ್ಲಿ ಕೋವಿಡ್​ ಪ್ರಕರಣಗಳು ವರದಿಯಾಗುತ್ತಿವೆ. ಇದರ ನಡುವೆ ಕೇಂದ್ರ ಆರೋಗ್ಯ ಇಲಾಖೆ ದೇಶದಲ್ಲೆಡೆ 1000ಕ್ಕು ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದ್ದು. ಇಂದು(ಮೇ.26) ಬೆಳಿಗ್ಗೆ 8 ಗಂಟೆ ವೇಳೆಗೆ ದೇಶದಲ್ಲಿ 1009 ಕೋವಿಡ್​ ಸಕ್ರಿಯ ಪ್ರಕರಣಗಳಿವೆ ಎಂದು ತನ್ನ ಪೋರ್ಟಲ್​ನಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ :ಟ್ರಾಫಿಕ್​ ಪೊಲೀಸ್​ ಯಡವಟ್ಟು; ಬೈಕ್​ನಿಂದ ಬಿದ್ದು 3 ವರ್ಷದ ಕಂದಮ್ಮ ಸಾ*ವು

ಇನ್ನು 1009 ಕೋವಿಡ್​ ಪ್ರಕರಣಗಳ ಪೈಕಿ ಬಹುಪಾಲು ಕೇರಳದಿಂದ ವರದಿಯಾಗಿದ್ದು. ಕೇರಳ ರಾಜ್ಯವೊಂದರಲ್ಲೇ 430 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಜೊತೆಗೆ ಮಹಾರಾಷ್ಟ್ರದಲ್ಲಿ 209, ದೆಹಲಿಯಲ್ಲಿ 104 ಮತ್ತು ಕರ್ನಾಟಕದಲ್ಲಿ 47 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಇದರ ನಡುವೆ ಆಂದ್ರಪ್ರದೇಶ ಸರ್ಕಾರ ತನ್ನ ಪ್ರಜೆಗಳಿಗೆ ಮಾಸ್ಕ್​ ಧರಿಸವುದು ಕಡ್ಡಾಯ ಮಾಡಿದೆ. ಇದನ್ನೂ ಓದಿ:ಭೀಕರ ರಸ್ತೆ ಅಪಘಾತ; ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾ*ವು

ಜೊತೆಗೆ ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಯಾವುದೇ ಸಕ್ರಿಯ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Exit mobile version