Friday, September 5, 2025
HomeUncategorizedಹಾಸನಾಂಬೆ ಸನ್ನಿಧಿಗೆ ಹಣದ ಹೊಳೆ : ಹೊಸ ದಾಖಲೆ ನಿರ್ಮಿಸಿದ ದೇವಾಲಯ

ಹಾಸನಾಂಬೆ ಸನ್ನಿಧಿಗೆ ಹಣದ ಹೊಳೆ : ಹೊಸ ದಾಖಲೆ ನಿರ್ಮಿಸಿದ ದೇವಾಲಯ

ಹಾಸನ : ಹಾಸನದ ಅಧಿದೇವತೆ ಹಾಸಾನಾಂಬೆಯ ದರ್ಶನಕ್ಕೆ ನೆನ್ನೆ ತೆರೆಬಿದ್ದಿದ್ದು. ನೆನ್ನೆ ಮಧ್ಯಾಹ್ನ 12 ಗಂಟೆಗೆ ದೇವಸ್ಥಾನಕ್ಕೆ ಬಾಗಿಲನ್ನು ಹಾಕಿದ್ದು. ಇನ್ನು ಮುಂದಿನ ವರ್ಷ ದೇವಿ ಮತ್ತೆ ತನ್ನ ಭಕ್ತರಿಗೆ ದರ್ಶನ ಭಾಗ್ಯನ ಕರುಣಿಸಲಿದ್ದಾರೆ.

ಇಂದು ದೇವಾಲಯದ ಹುಂಡಿಯನ್ನು ಎಣಿಕೆ ಮಾಡಿದ್ದು ಈ ವರ್ಷದ ಜಾತ್ರಮಹೋತ್ಸವ ಹೊಸ ದಾಖಲೆಯನ್ನು ಬರೆದಿದೆ, ಈ ಬಾರಿ ಹಾಸನಾಂಬೆ ದೇವಾಲಯಕ್ಕೆ ಭಾರೀ ಕಾಣಿಕೆ ಹರಿದು ಬಂದಿದ್ದು ಸುಮಾರು 12 ಕೋಟಿಗು ಹೆಚ್ಚು ಆದಾಯ ದೇವಾಲಯಕ್ಕೆ ಹರಿದು ಬಂದಿದೆ.

ಈ ಬಾರಿ ವಿಶೇಷ ದರ್ಶನದ 1000ರೂ, 300ರೂ ಟಿಕೆಟ್‌ ಮತ್ತು ಲಾಡು ಮಾರಾಟದಿಂದ 9 ಕೋಟಿ 67 ಲಕ್ಷದ 27 ಸಾವಿರದ 180 ರೂ ಸಂಗ್ರಹವಾಗಿದೆ. ಹುಂಡಿಯಲ್ಲಿ 2 ಕೋಟಿ 55 ಲಕ್ಷದ 97 ಸಾವಿರದ 567 ರೂಪಾಯಿ ಸಂಗ್ರಹವಾಗಿದೆ. ಜಾಹೀರಾತಿನಿಂದ ಬಂದ ಆದಾಯ 5,50,000₹, ಸೀರೆ ಮಾರಾಟದಿಂದ 2,00,305₹,
ದೇಣಿಗೆ ನೀಡಿದ ಹಣ 40,908₹, ಇ ಹುಂಡಿಯಿಂದ ಬಂದ ಆದಾಯ 3,98,859₹ ಈ ರೀತಿ ವಿವಿಧ ಮೂಲಗಳಿಂದ ಒಟ್ಟು 12 ಕೋಟಿ 63 ಲಕ್ಷದ 83 ಸಾವಿರದ 808 ರೂ ಹಣ ಸಂಗ್ರಹವಾಗಿದೆ. ಕಾಣಿಕೆ ರೂಪದಲ್ಲಿ 51 ಗ್ರಾಂ ಚಿನ್ನ, 913 ಗ್ರಾಂ‌ ಬೆಳ್ಳಿ ಸಂಗ್ರಹ, 500 ಗ್ರಾಂ ತಾಮ್ರ ಸಂಗ್ರಹವಾಗಿದೆ. ಇದು ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಅತಿ ಹೆಚ್ಚು ಆದಾಯ ಎಂದು ಪರಿಗಣಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments