ತುಮಕೂರು: ಗೃಹರಕ್ಷಕ ದಳ ಸಿಬ್ಬಂದಿ ತರಬೇತಿ ಕಾರ್ಯಕ್ರಮವೊಂದರಲ್ಲಿ ಅಧಿಕಾರಿಯೊಬ್ಬ ತನ್ನ ಕೆಳಗಿನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ತರಭೇತಿ ನೀಡುವ ನೆಪದಲ್ಲಿ ಮಹಿಳೆಯರ ಖಾಸಗಿ ಅಂಗಗಳನ್ನ ಸ್ಪರ್ಶಿಸಿ ದೌರ್ಜನ್ಯ ಎಸಗಿದ್ದಾನೆ. ಇನ್ನು ಈ ಕುರಿತು ನೊಂದ ಮಹಿಳೆಯರು ಎಸ್ಪಿಗೆ ದೂರು ನೀಡಿದ್ದಾರೆ.
ಹೌದು.. ತುಮಕೂರಿನ ಜಿಲ್ಲಾ ಗೃಹರಕ್ಷಕ ದಳದ ಡೆಪ್ಯೂಟಿ ಕಮಾಂಡೆಂಟ್ ಆರ್.ರಾಜೇಂದ್ರನ್ ಮೇಲೆ ಮಹಿಳೆಯರ ಜೊತೆ ಅಸಭ್ಯ ವರ್ತನೆ, ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿಬಂದಿದೆ. ಡೆಪ್ಯೂಟಿ ಕಮಾಂಡೆಂಟ್ ರಾಜೇಂದ್ರನ್ ಗೃಹರಕ್ಷಕಿಯರ ಮೈಮುಟ್ಟಿ ಮಜಾ ತಗೊಂಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದ್ದು, ಟ್ರೇನಿಂಗ್ ಕ್ಯಾಂಪ್ ವೇಳೆ ಎಣ್ಣೆ ಏಟಲ್ಲಿ ಮಹಿಳಾ ಸಿಬ್ಬಂದಿ ಜೊತೆಗೆ ದುರ್ವರ್ತನೆ ತೋರಿಸಿದ್ದಾರಂತೆ. ಇದನ್ನೂ ಓದಿ :ಬಹುಕಾಲದ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಮಂತ್ ಬ್ರೋ ಗೌಡ
ಈ ಬಗ್ಗೆ ನೊಂದ ಗೃಹರಕ್ಷಕಿಯರು ಈಗಾಗಲೇ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಮಹಿಳಾ ಆಯೋಗ, ತುಮಕೂರು ಜಿಲ್ಲಾಧಿಕಾರಿ, ತುಮಕೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು, ಗೃಹರಕ್ಷಕ ದಳದ ಉಪಮಹಾ ಸಮದೇಷ್ಟರಿಗೆ ದೂರು ನೀಡಿದ್ದಾರೆ.. ಅಷ್ಟೇ ಅಲ್ಲ, ಈ ಡೆಪ್ಯೂಟಿ ಕಮಾಂಡೆಂಟ್ ತಮ್ಮ ಜೊತೆ ತೋರಿಸಿದ ಅನುಚಿತ ವರ್ತನೆಯ ಬಗ್ಗೆ, ಜೊತೆಗೆ ತನಗಾದ ಕಸಿವಿಸಿ ಅನುಭವವನ್ನ ಗೃಹರಕ್ಷಕಿಯೊಬ್ಬರು ತನ್ನ ಮೇಲಾಧಿಕಾರಿಗಳಿಗೆ ತಿಳಿಸಿರುವ ಆಡಿಯೋ ಕೂಡ ಪವರ್ ಟಿವಿಗೆ ಲಭ್ಯವಾಗಿದೆ. ಡೆಪ್ಯುಟಿ ಕಮಾಂಡೆಂಟ್ ವರ್ತನೆಯಿಂದ ಇಡೀ ಗೃಹರಕ್ಷಕ ದಳ ತಲೆತಗ್ಗಿಸುವಂತಾಗಿದೆ.
ಘಟನೆಯ ವಿವರ..!
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟದಲ್ಲಿ ಕಳೆದ ತಿಂಗಳು 24ನೇ ತಾರೀಖಿನಿಂದ ಮೊನ್ನೆ 3ನೇ ತಾರೀಖಿನವರೆಗೆ ಗೃಹರಕ್ಷಕ ದಳದ ಸಿಬ್ಬಂದಿಗೆ ತರಬೇತಿ ಶಿಬಿರವನ್ನ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ 195 ಜನ ಪುರುಷ ಸಿಬ್ಬಂದಿ ಹಾಗೂ 91 ಜನ ಮಹಿಳಾ ಸಿಬ್ಬಂದಿ ಭಾಗವಹಿಸಿದ್ದರು. ಈ ಕ್ಯಾಂಪ್ ವೇಳೆ ಎಪ್ರಿಲ್ 26ರಂದು ರಾತ್ರಿ 9.50ರಿಂದ 10 ಗಂಟೆಯ ಸುಮಾರಿಗೆ ತರಬೇತಿಗೆ ಬಂದಿದ್ದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತಂತೆ. ಇದನ್ನ ಅಲ್ಲಿದ್ದವರು ಮೇಲಧಿಕಾರಿಗಳಿಗೆ ತಿಳಿಸಿದ್ದರು. ಈ ವೇಳೆ ಅಲ್ಲೇ ಇದ್ದ ಡೆಪ್ಯೂಟಿ ಕಮಾಂಡೆಂಟ್ ಆರ್ ರಾಜೇಂದ್ರನ್ ಅಲ್ಲಿ ಸಾಕಷ್ಟು ಮಹಿಳಾ ಸಿಬ್ಬಂದಿ ಇದ್ದರೂ ಕೂಡ ಅವರಿಗೆ ಪ್ರಥಮ ಚಿಕಿತ್ಸೆ ಮಾಡಲು ಬಿಡದೇ, ಕುಡಿದ ಮತ್ತಿನಲ್ಲಿ ತಾವೇ ಪ್ರಥಮ ಚಿಕಿತ್ಸೆ ಮಾಡುವ ನೆಪದಲ್ಲಿ ಮಹಿಳೆಯ ಅಂಗಾಂಗಗಳನ್ನು ಮುಟ್ಟಿದ್ದಲ್ಲದೆ ಅಸಭ್ಯವಾಗಿ ವರ್ತಿಸಿದ್ದಾರಂತೆ. ಇದನ್ನೂ ಓದಿ :ಮಸೀದಿಗಳಲ್ಲಿ ಅಪರಿಚಿತ ವ್ಯಕ್ತಿಗಳ ಓಡಾಟ: ಪರಿಶೀಲಿಸುವಂತೆ ಕಮಿಷನರ್ಗೆ ಬೆಲ್ಲದ್ ಪತ್ರ
ಇನ್ನೂ ಮಾರನೇ ದಿನ ತರಬೇತಿ ವೇಳೆ ಕಾಲ್ನಡಿಗೆಯಲ್ಲಿ ಸಿದ್ದರಬೆಟ್ಟ ಹತ್ತುವಾಗ ಮತ್ತೋರ್ವ ಗೃಹರಕ್ಷಕಿಗೆ ಮೈಕೈ ಮುಟ್ಟಿ, ಅವರ ಬೆನ್ನಿನ ಭಾಗದಲ್ಲಿ ಹಾಗೂ ಖಾಸಗಿ ಅಂಗಾಂಗಗಳಿಗೆ ಕೆಟ್ಟದಾಗಿ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಹಾಗೂ ತರಬೇತಿ ಸಮಯದಲ್ಲಿ ತಪ್ಪಾದರೆ ತಿದ್ದಿ ಹೇಳಿಕೊಡುವ ನೆಪದಲ್ಲಿ ಗೃಹರಕ್ಷಕಿಯರ ದೇಹದ ಖಾಸಗಿ ಅಂಗಾಂಗಳನ್ನ ಮುಟ್ಟಿದ್ದಾರಂತೆ. ಇದನ್ನೂ ಓದಿ :ಬೇಹುಗಾರಿಕೆ ಆರೋಪ: ವಿಚಾರಣೆ ವೇಳೆ ಜ್ಯೋತಿ ಕುರಿತು ಸ್ಪೋಟಕ ಮಾಹಿತಿ ಬಹಿರಂಗ
ಈಗಾಗಲೇ ಈ ಆರೋಪ ಜಿಲ್ಲಾ ಪೊಲೀಸ್ ಕಚೇರಿಯ ಕದ ತಟ್ಟಿದ್ದು ಪ್ರಕರಣದ ಕುರಿತು ತಕ್ಷಣ ತಂಡವೊಂದನ್ನ ಫ್ರೇಮ್ ಮಾಡಿ ಆಂತರಿಕ ತನಿಖೆಯನ್ನ ಆರಂಭಿಸಲಾಗಿದ್ದು. ಒಂದು ವೇಳೆ ಅಧಿಕಾರಿ ರಾಜೇಂದ್ರನದ್ದು ತಪ್ಪಿದ್ದರೆ ಅವನ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ತುಮಕೂರು ಎಸ್ಪಿ ಅಶೋಕ್ ಕೆ.ವಿ ಹೇಳ್ತಿದ್ದಾರೆ.