ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸಚಿವ ಪ್ರಿಯಾಂಕ ಖರ್ಗೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು. ಪ್ರಧಾನಿ ಮೋದಿ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿರುವುದು ಒಳ್ಳೆ ವಿಚಾರ, ಆದರೆ ಪಿಎಂ ಪಹಲ್ಗಾಮ್ ದಾಳಿಯ ನಂತರ ಬಿಹಾರ್ ಚುನಾವಣ ರ್ಯಾಲಿ ಬಿಟ್ಟರೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರು ಘಟನೆ ಬಗ್ಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಕಲಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ “ನಮ್ಮ ಸೈನಿಕರ ಕಾರ್ಯವೈಖರಿ ಇಡಿ ರಾಷ್ಟ್ರ ಮೆಚ್ಚುತ್ತಿದೆ,
ನಿನ್ನೆ ಪ್ರಧಾನಿ ಸೈನಿಕರಿಗೆ ದೈರ್ಯ ತುಂಬಿರುವುದು ಅವರ ಜವಾಬ್ದಾರಿ ಹಾಗೂ ಶ್ಲಾಘನಿಯ ಕಾರ್ಯ. ಏಪ್ರಿಲ್ 22 ರಂದು ಪೆಹಲ್ಗಾಮ್ ಅಟ್ಯಾಕ್ ಆಗಿರೋದು ಪಿಎಂ ಕಾಣಿಸಿಕೊಂಡಿರೋದು ಬಿಹಾರ ಚುನಾವಣೆಯಲ್ಲಿ ಮಾತ್ರ. ನಂತರ ಪ್ರಧಾನಿ ಅವರು ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಜಮ್ಮ ಕಾಶ್ಮಿರ , ಅದಂಪುರ ಸೇರಿ ಎಲ್ಲೆಲ್ಲಿ ಬ್ಲಾಕ್ ಔಟ್ ಮಾಡಿದ್ರು ಅಲ್ಲಿ ಕಾಣಿಸಬಹುದಿತ್ತು, ಆದರೆ ಅಲ್ಲಿಯೂ ಕಾಣಿಸಲಿಲ್ಲ ಅದರ ಬದಲಾಗಿ ಮೇ 12 ರಂದು ಕಾಣಿಸಿಕೊಂಡರು. ಇದನ್ನೂ ಓದಿ :ಆಕಸ್ಮಿಕವಾಗಿ ಗಡಿ ದಾಟಿದ್ದ BSF ಯೋಧ ಪಿ.ಕೆ ಸಾಹು ಭಾರತಕ್ಕೆ ವಾಪಾಸ್
ಅದಾದ ಬಳಿಕ ನಿನ್ನೆ ಮೇ 13 ಕ್ಕೆ ಅದಾಂಪುರ ಹೋಗಿ ಘೋಷಣೆ ಕೂಗಿ ಸೈನಿಕರಿಗೆ ಸ್ತೈರ್ಯ ತುಂಬಿದ್ದಾರೆ. ಆದರೆ ಈ ನಡುವಿನ ಅವಧಿಯಾದ ಏಪ್ರಿಲ್ 22 ರಿಂದ ಮೇ.12 ರವರೆಗೆ ಮೋದಿ ಎಲ್ಲಿದ್ದರು. ಭಾರತ್ ಪಾಕ್ ನಡುವಿನ ಯುದ್ದ ಕದನ ವಿರಾಮಕ್ಕೆ ನಾನು ಕಾರಣ ಅಂತಾ ಟ್ರಂಪ್ ನಾಲ್ಕು ಬಾರಿ ಹೇಳಿದ್ದಾರೆ. ಟ್ರಂಪ್ ಉಗ್ರ ರಾಷ್ಟ್ರಕ್ಕೂ ನಮಗೂ ಹೋಲಿಕೆ ಮಾಡಿದ್ದಾರೆ. ವ್ಯಾಪಾರ ಆಮಿಷ, ತೆರಿಗೆ ಆಮಿಷ ಒಡ್ಡಿದ್ದೇನೆ ಅಂತ ಹೇಳಿದ್ದಾರೆ.
ಪಾಕಿಸ್ತಾನಕ್ಕೆ IMFನಿಂದ ಫಂಡ್ ಕೊಡಿಸಿದ್ದಾರೆ. ಸುಮಾರು 8 ಸಾವಿರ ಕೋಟಿ ಹಣದಲ್ಲಿ ಅವರು ಉದ್ಯೋಗ ಸೃಷ್ಟಿ ಮಾಡ್ತಾರಾ ಅಥವಾ ಟೆರರ್ ಆ್ಯಕ್ಟಿವಿಟಿ ಮಾಡ್ತಾರಾ ಅಂತ ಗೊತ್ತೊಲ್ಲ. ಆದರೆ ಮೋದಿ ಭಾರತದ ವಿದೇಶಾಂಗ ನೀತಿಯನ್ನ ಟ್ರಂಪ್ ಬಳಿ ಅಡವಿಟ್ಟಿದ್ದಾರೆ. ಮೋದಿ ಟ್ರಂಪ್ ಮುಂದೆ ಮಂಡಿಯೋರಿದ್ರಾ ಅಥವಾ ಕೈ-ಕಾಲಿಗೆ ಬಿದ್ದರಾ ಗೊತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ :ಆಪರೇಷನ್ ಸಿಂಧೂರ ವಿಜಯೋತ್ಸವದ ವೇಳೆ ಪಾಕ್ ಪರ ಘೋಷಣೆ ಕೂಗಿದ ಟೆಕ್ಕಿ ಅರೆಸ್ಟ್
ಮುಂದುವರಿದು ಮಾತನಾಡಿದ ಖರ್ಗೆ “ಮೋದಿ ಮೈ ಫ್ರೆಂಡ್ ಟ್ರಂಪ್ ಅಂತ ಹೇಳ್ತಾರೆ, ಆದರೆ ಟ್ರಂಪ್ ನಾನು ಯುದ್ದ ನಿಲ್ಸಿದ್ದೀನಿ ಅಂತ ನಾಲ್ಕು ಬಾರಿ ಹೇಳಿದ್ದಾರೆ. ಟ್ರಂಪ್ ನಮ್ಮ ದೇಶದ ಬಗ್ಗೆ, ಮೋದಿ ಬಗ್ಗೆ ಬಳಸಿರೋ ಭಾಷೆ ಹೇಗಿದೆ ನೋಡಿ. ಮೋದಿ ಯಾರತ್ರ ಮಂಡಿಯೋರಿದ್ರು, ಕೈ-ಕಾಲು ಹಿಡಿದ್ದಾರೆ ಅನ್ನೋದು ಹೇಳ್ಬೇಕು. ಮೋದಿ ಸಿಸಿಎಸ್ ಸಭೆ ಮಾಡಲಿ, ನಾವು ಬೇಡ ಅಂತಿಲ್ಲ, ಆದರೆ ಆಲ್ ಪಾರ್ಟಿ ಮೀಟಿಂಗ್ ಮಾಡಿ, ಪಾರ್ಲಿಮೆಂಟ್ ಕರೆಯಿರಿ ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.