Tuesday, August 26, 2025
Google search engine
HomeUncategorizedನಟ ರಾಕೇಶ್​ ಪೂಜಾರಿ ನಿಧನ: 'ಮಿಸ್​ ಯೂ ಮಗನೆ' ಎಂದು ಭಾವುಕ ಪೋಸ್ಟ್​ ಹಾಕಿ ರಕ್ಷಿತಾ...

ನಟ ರಾಕೇಶ್​ ಪೂಜಾರಿ ನಿಧನ: ‘ಮಿಸ್​ ಯೂ ಮಗನೆ’ ಎಂದು ಭಾವುಕ ಪೋಸ್ಟ್​ ಹಾಕಿ ರಕ್ಷಿತಾ ಸಂತಾಪ

ʻಕಾಮಿಡಿ ಕಿಲಾಡಿʼ ಸೀಸನ್‌ 3ರ ವಿನ್ನರ್‌, ರಾಕೇಶ್​ ಪೂಜಾರಿ ಹೃದಯಘಾತದಿಂದ ಸಾವನ್ನಪ್ಪಿದ್ದು. ರಾಕೇಶ ಪೂಜಾರಿ ಸಾವಿಗೆ ನಟಿ ರಕ್ಷಿತಾ ಕಂಬನಿ ಮಿಡಿದಿದ್ದಾರೆ. ‘ನಗುಮುಖದ ರಾಕೇಶ್, ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು, ಮಿಸ್ ಯೂ ಮಗನೇ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ’.

ಕನ್ನಡದ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜನಪ್ರಿಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ನಿನ್ನೆ ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಅಸ್ವಸ್ಥರಾಗಿದ್ದು, ಅವರ ಸ್ನೇಹಿತರು ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಕೇಶ ಬೆಳಗಿನ ಜಾವ 3:30ರ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ :ಏಕಾಂತದಲ್ಲಿ ಧ್ಯಾನ ಮಾಡುವ ಹವ್ಯಾಸ: ಕಾವೇರಿ ನದಿಗೆ ಬಿದ್ದು ಪದ್ಮಶ್ರೀ ವಿಜೇತ ವಿಜ್ಞಾನಿ ಸಾ*ವು

ರಾಕೇಶ ಪೂಜಾರಿ ಅಗಲಿಕೆಗೆ ನಟಿ ಮತ್ತು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಜಡ್ಜ್​ ಆಗಿರುವ ರಕ್ಷಿತಾ ಪ್ರೇಮ್​ ಭಾವುಕ ಪೋಸ್ಟ್​ವೊಂದನ್ನು ಹಾಕಿದ್ದು. ‘ನಗುಮುಖದ ರಾಕೇಶ್, ನನ್ನ ನೆಚ್ಚಿನ ವ್ಯಕ್ತಿ. ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು, ಮಿಸ್ ಯೂ ಮಗನೇ. ನಾನು ಇನ್ನೂ ಎಂದಿಂಗೂ ರಾಕೇಶ್ ಅವರನ್ನು ಮಾತನಾಡಿಸಲು ಸಾಧ್ಯವಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗ್ತಿದೆ. ಇದನ್ನೂ ಓದಿ :ಕದನ ವಿರಾಮ: ವಿಶೇಷ ಅಧಿವೇಶನ ಕರೆಯುವಂತೆ ಮೋದಿಗೆ ಪತ್ರ ಬರೆದ ರಾಹುಲ್​ ಗಾಂಧಿ

ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ಹತ್ತಿರವಿರುವ ಕಾರ್ಯಕ್ರಮ. ಅದರಲ್ಲಿ ರಾಕೇಶ್ ಕೂಡ ಒಬ್ಬರು. ಒಳ್ಳೆಯ ವ್ಯಕ್ತಿ, ಟ್ಯಾಲೆಂಟೆಡ್ ಕಲಾವಿದನಾಗಿದ್ರು. ನೀವೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತವಾಗಿರುತ್ತೀರಾ. ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿನ್ನ ನಗು ಮತ್ತು ನಿನ್ನ ಸುತ್ತ ಇರುವವರನ್ನು ನಗುಸುತ್ತಿದ್ದ ರೀತಿ. ಥ್ಯಾಂಕ್ಯೂ ರಾಕೇಶ್ ಎಂದು ಬರೆದುಕೊಂಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments