ಚಾಮರಾಜನಗರ: ಮಹದೇಶ್ವರ ಬೆಟ್ಟದ ತಾಳಬೆಟ್ಟ ತಿರುವಿನಲ್ಲಿ KSRTC ಬಸ್ ಬ್ರೇಕ್ ಫೇಲ್ ಆಗಿ ಡಿವೈಡರ್ಗೆ ಡಿಕ್ಕಿಯಾಗಿದ್ದು. ಚಾಲಕನ ಸಮಯ ಪಜ್ಞೆಯಿಂದ ಬಸ್ನಲ್ಲಿದ್ದ 60ಕ್ಕೂ ಹೆಚ್ಚು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
KA 09 F 5311 ಸಂಖ್ಯೆಯ ಮೈಸೂರು ಡಿಪೋದ KSRTC ಬಸ್, ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿತ್ತು. ಈ ವೇಳೆ ಮಲೆ ಮಹದೇಶ್ವರಬೆಟ್ಟದ ತಾಳಬೆಟ್ಟ ತಿರುವಿನಲ್ಲಿ ಬ್ರೇಕ್ ಫೇಲ್ ಆಗಿದೆ. ಬ್ರೇಕ್ ಫೇಲ್ ಆಗ್ತಿದ್ದಂತೆ ಬಸ್ಅನ್ನು ಡಿವೈಡರ್ ಮೇಲೆ ಏರಿಸಿದ್ದಾನೆ.ಇದರಿಂದ ಬಸ್ ನಿಂತುಕೊಂಡಿದ್ದು, ಅದೃಷ್ಟವಶಾತ್ ಬಸ್ನಲ್ಲಿ 60ಕ್ಕೂ ಹೆಚ್ಚು ಜನರು ಬಚಾವ್ ಆಗಿದ್ದಾರೆ.
ಇದನ್ನೂ ಓದಿ :ಕಬ್ಬಡಿ ಆಟದ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ: ಓರ್ವ ಸಾ*ವು, 13 ಮಂದಿಗೆ ಗಾಯ
ಒಂದು ವೇಳೆ ಚಾಲಕ ಬಸ್ ಅನ್ನು ಡಿವೈಡರ್ಗೆ ಹತ್ತಿಸದಿದ್ದರೆ ಏನು ಅನಾಹುತ ಆಗುತ್ತಿತ್ತೋ. ಅದೃಷ್ಟವಶಾತ್ ಬಸ್ ಚಾಲಕನ ಸಮಯ ಪ್ರಜ್ಞೆ ಹಾಗೂ ಐಡಿಯಾಕ್ಕೆ ಪ್ರಯಾಣಿಕರು ಕೃತಜ್ಞತೆ ತಿಳಿಸಿದ್ದಾರೆ. ಸಾರಿಗೆ ಇಲಾಖೆಯ ಅವ್ಯವಸ್ಥೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.