Friday, August 29, 2025
HomeUncategorizedಪ್ರಿಯಕರನಿಂದ ಗಂಡನ ಕೊಲೆ: ಪ್ಲ್ಯಾನ್​ ಮಾಡಿ ಗಂಡನಿಗೆ ಗುಂಡಿ ತೋಡಿದಳ ಐನಾತಿ ಹೆಂಡತಿ

ಪ್ರಿಯಕರನಿಂದ ಗಂಡನ ಕೊಲೆ: ಪ್ಲ್ಯಾನ್​ ಮಾಡಿ ಗಂಡನಿಗೆ ಗುಂಡಿ ತೋಡಿದಳ ಐನಾತಿ ಹೆಂಡತಿ

ಕಾರವಾರ : ನೆನ್ನೆ ಫೆ.22 ಸಂಜೆ ಸಾರಿಗೆ ಬಸ್​ನಲ್ಲಿ ರಕ್ತದೊಕುಳಿ ಹರಿದಿದೆ. ಪತ್ನಿಯೊಂದಿಗೆ ಮಾವನ ಮನೆ ಕೆಲಸ ಮುಗಿಸಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪತಿ ಚಾಕು ಇರಿತಕ್ಕೊಳಗಾಗಿ ಮಸಣ ಸೇರಿದ್ದಾನೆ, ಕೊಲೆಯಾದ ದುರ್ದೈವಿಯನ್ನು ಗಂಗಾಧರ್​ ಎಂದು ಗುರುತಿಸಲಾಗಿದೆ.

ಗಂಗಾಧರ್​ ಮತ್ತು ಆತನ ಹೆಂಡತಿ ಪೂಜಾ ಇಬ್ಬರು ಬಸ್​ನಲ್ಲಿ ಕುಳಿತಿದ್ದರು. ಆದರೆ ಈ ವೇಳೆ ಪ್ರೀತಮ್​ ಡಿಸೋಜ ಎಂಬಾತ ಏಕಾಏಕಿ ಬಸ್​ಗೆ ನುಗ್ಗಿ ಗಂಗಾಧರ್​ಗೆ ಚಾಕು ಇರಿದಿದ್ದಾನೆ. ಈ ಘಟನೆಗೆ ಕಾರಣ ಏನು ಎನ್ನುವ ಬಗ್ಗೆ ಸಾಕಷ್ಟು ಅನುಮಾನ ಕಾಡುತ್ತಿರುವಾಗಲೆ ಒಂದು ಆಘಾತಕಾರಿ ಮತ್ತು ಅನುಮಾನ ಹುಟ್ಟಿಸುವ ಹೇಳಿಕೆ ಕೊಲೆಯಾದ ಗಂಗಾಧರ್ ಪತ್ನಿ ಪೂಜಾ ಬಾಯಿಂದಲೇ ಹೊರ ಬಿದ್ದಿದೆ.

ಘಟನೆ ನಡೆದ ಕೂಡಲೆ ಪೂಜಾ ಗಂಗಾಧರ್​ನನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿದಾಗ ಸ್ಥಳಕ್ಕಾಗಮಿಸಿದ ಡಿವೈಸ್ಪಿ ಗಣೇಶ್ ತಂಡ ಕೊಲೆಯಾದ ಗಂಗಾಧರ್ ಪತ್ನಿ ಪೂಜಾಳನ್ನ ವಿಚಾರಿಸುತ್ತಿರುವಾಗಲೆ ಪೂಜಾ ಕೊಲೆ ಮಾಡಿ ಹೋದವನನ್ನ ಮುಖ ಪರಿಚಯಿಸಿ ಹೆಸರು ಕೂಡಾ ಹೇಳಿಬಿಟ್ಟಿದ್ದಾಳೆ, ಆವಾಗ್ಲೆ ಪೋಲಿಸರ ಮೂಗಿಗೆ ಇದೊಂದು ಪ್ರೇಮ ಪ್ರಕರಣಕ್ಕೆ ಸಂಭಂದಿಸಿ ನಡೆದ ಕೊಲೆ ಇರಬೇಕು ಎಂಬ ವಾಸನೆ ಬಡಿದಿದೆ, ಯಾಕೆಂದ್ರೆ ಕೊಲೆಗಾರ ಪ್ರೀತಮ್ ಮತ್ತು ಪೂಜಾ ಕಳೆದ ಹತ್ತು ವರ್ಷದಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರಂತೆ, ಈ‌ ನಡುವೆ ಪೂಜಾ ಕಳೆದ ಆರು ತಿಂಗಳ ಹಿಂದೆ ಕೊಲೆಯಾದ ಸಾಗರದ ಹೊಸಂತೆಯ ಮೂಲದ ಗಂಗಾಧರ್ ಎನ್ನುವನ‌ ಜತೆ ಮದುವೆ ಆಗಿದ್ದಳು.

ಇದನ್ನೂ ಓದಿ :ಮರಳುಗಾಡಿನಲ್ಲಿ ಭಾರತ-ಪಾಕ್​ ಹಣಾಹಣಿ: ಟಾಸ್​ ಗೆದ್ದ ಪಾಕ್​ ಬ್ಯಾಟಿಂಗ್​ ಆಯ್ಕೆ !

ಮದುವೆ ಆದಮೇಲು ಪ್ರೀತಮ್ ಜತೆ ಫೋನ್ ಕಾಂಟೆಕ್ಟ್ ನಲ್ಲಿ ಇದ್ದಳಂತೆ ಪೂಜಾ, ಆದರೆ ಪೋಲಿಸ್ ಉನ್ನತ ಮೂಲದ ಮಾಹಿತಿ ಪ್ರಕಾರ ಶಿರಸಿಗೆ ಬರುವ ವಿಚಾರವನ್ನೂ ಕೂಡಾ ಪೂಜಾ ತನ್ನ ಪ್ರೀಯಕರ ಪ್ರೀತಮ್ ನಿಗೆ ಹೇಳಿದ್ದಾಳೆ ಅಂತೆ, ಹೀಗಿರುವಾಗ ಕೊಲೆಯಲ್ಲಿ ನೇರವಾದ ಅನುಮಾನ, ಕೈವಾಡ ಪೂಜಾಳೆ ಮೇಲೆ ತಿರುಗಿದೆ. ಈಗ ಮದುವೆ ಆದ ಆರೇ ತಿಂಗಳಲ್ಲಿ ಗಂಗಾಧರ್ ಮಸಣ ಸೇರಿದ್ದಾನೆ,ಈ‌ ಘಟನೆ ಸುತ್ತ ಇನ್ನಷ್ಟು ಅನುಮಾನದ ಹುತ್ತ ಬೆಸೆದುಕೊಂಡಿದೆ ಗಂಗಾಧರ್ ತನ್ನ ಪತ್ನಿಯನ್ನ ನಂಬಿ ಮಾವನ ಮನೆಗೆ ಕಾರ್ಯಕ್ರಮಕ್ಕೆ ಬಂದ ವಿಚಾರ ಪ್ರೀತಮ್ ಗೆ ಹೇಗೆ ತಿಳಿಯೊತ್ತೆ ಅದರ ಜತೆ ಸರಿಯಾಗಿ ಇದೆ ಬಸ್ ನಲ್ಲಿ ಪ್ರಯಾಣಿಸುತ್ತೆವೆ ಎಂಬ ವಿಚಾರ ಪ್ರೀತಮ್ ಗೆ ಹೇಗೆ ಗೊತ್ತಾಗೊತ್ತೆ ಎನ್ನುವ ಬಗ್ಗೆ ಪೋಲಿಸರು ಮಾಹಿತಿ ಕಲೆ ಹಾಕಿದಾಗ ಪೂಜಾಳೆ ಪ್ರೀತಮ್ ಗೆ ಮಾಹಿತಿ ಕೊಟ್ಟಿದ್ದಾಳೆ ಎನ್ನೋದು ಈಗ ಪೋಲಿಸರಿಗೆ ಖಾತ್ರಿ ಆಗಿದೆ… ಮತ್ತು ಕುಟುಂಬಸ್ಥರು ಈಗ ಪೂಜಾಳ ನಡೆಯ ಬಗ್ಗೆ ಅನುಮಾನಿಸಿ ಕೊಲೆಗೆ ಪೂಜಾಳ ಕುಮ್ಮಕ್ಕು ಇದೆ ಎಂದು ಆರೋಪಿಸುತ್ತಿದ್ದಾರೆ…..

ಇನ್ನು ಘಟನೆ ನಡೆದ ಎರಡು ತಾಸಿನಲ್ಲೆ ಶಿರಸಿ ನಗರ ಠಾಣೆ ಪೋಲಿಸರು ಕೊಲೆ ಆರೋಪಿ ಪ್ರೀತಮ್ ನನ್ನ ಹಡೆಮುರಿ ಕಟ್ಟಿದ್ದಾರೆ, ಪ್ರೀತಮ್ ನನ್ನ ತನಿಖೆಗೊಳಪಡಿಸಿದ್ದಾರೆ ಇದರ ಜತಗೆ ಗಂಗಾಧರ್ ಪತ್ನಿ ಪೂಜಾಳನ್ನ ಕೂಡಾ ವಿಚಾರಣೆಗೊಳಪಡಿಸಿದ್ದಾರೆ. ಗಂಗಾಧರ್ ಕುಟುಂಬದವರು ನೇರವಾಗಿ ಪತ್ನಿ ಪೂಜಾಳ ಮೇಲೆ ಆರೋಪ ಮಾಡುತ್ತಿದ್ದು ಪೂಜಾಳ ಕುಮ್ಮಕ್ಕಿನಿಂದಲೇ ಗಂಗಾಧರ್ ಕೊಲೆಯಾಗಿದ್ದಾನೆ ಎನ್ನುತ್ತಿದ್ದಾರೆ. ಕೊಲೆಯ‌ ಹಿಂದೆ ಪೂಜಾಳ ಪ್ರೇಮ ಪ್ರಕರಣ ಇದೆ ಎಂದು ಕುಟುಂಬಸ್ಥರು ಶಂಕಿಸುತ್ತಿದ್ದಾರೆ. ಈಗಾಗಲೆ ಪೋಲಿಸರು ಕೂಡಾ ಪೂಜಾಳನ್ನ ತನಿಖೆಗೊಳಪಿಡಿಸಿ ಕೊಲೆಯ ರಹಸ್ಯವನ್ನ ಬಾಯಿ ಬಿಡಿಸಲು ಪ್ರಯತ್ನಿಸುತ್ತಿದ್ದಾರೆ, ಇದರ ಜತೆಗೆ ಕೊಲೆ ಆರೋಪಿ ಪ್ರೀತಮ್ ನನ್ನ ಕೂಡಾ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಈ ಎಲ್ಲಾ ಅನುಮಾನಗಳಿಗೆ ಪೊಲೀಸರೆ ಉತ್ತರ ಕೊಡಬೇಕಿದೆ.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments