Friday, August 22, 2025
Google search engine
HomeUncategorizedಆಧ್ಯಾತ್ಮ ಗುರು​ಗಳನ್ನು ಭೇಟಿ ಮಾಡಿದ ವಿರಾಟ್ ದಂಪತಿ : ಚಾಂಪಿಯನ್ಸ್​​ ಟ್ರೋಫಿಯಲ್ಲಿ ಮಿಂಚಲಿದ್ದಾರೆ ಎಂದ ಫ್ಯಾನ್ಸ್​

ಆಧ್ಯಾತ್ಮ ಗುರು​ಗಳನ್ನು ಭೇಟಿ ಮಾಡಿದ ವಿರಾಟ್ ದಂಪತಿ : ಚಾಂಪಿಯನ್ಸ್​​ ಟ್ರೋಫಿಯಲ್ಲಿ ಮಿಂಚಲಿದ್ದಾರೆ ಎಂದ ಫ್ಯಾನ್ಸ್​

ದೆಹಲಿ: ಭಾರತದ ಕ್ರಿಕೆಟ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಅವರ ನಟಿ ಪತ್ನಿ ಅನುಷ್ಕಾ ಶರ್ಮಾ ಇತ್ತೀಚೆಗೆ ತಮ್ಮ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರೊಂದಿಗೆ ವೃಂದಾವನದಲ್ಲಿರುವ ಆಧ್ಯಾತ್ಮಿಕ ಗುರು ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಭೇಟಿ ಮಾಡಿದರು. ಇದರ ಬೆನ್ನಲ್ಲೆ ಕೊಹ್ಲಿ ಅಭಿಮಾನಿಗಳೂ ಈ ಭೇಟಿಯನ್ನು ವಿವಿಧ ರೀತಿಯಲ್ಲಿ ವಿಮರ್ಶೆ ಮಾಡುತ್ತಿದ್ದು. ಈ ಭೇಟಿಯ ನಂತರ ವಿರಾಟ್​ ಮುಂಬರುವ ಚಾಂಪಿಯನ್​ ಟ್ರೋಫಿಯಲ್ಲಿ ಮಿಂಚಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ನಡೆಸಲಾಗುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹೃದಯಸ್ಪರ್ಶಿ ವೀಡಿಯೊದಲ್ಲಿ, ಕೊಹ್ಲಿ ಮತ್ತು ಅನುಷ್ಕಾ ಪ್ರೇಮಾನಂದ ಜಿ ಮಹಾರಾಜ್ ಅವರಿಗೆ ನಮಸ್ಕರಿಸುವುದನ್ನು ಮತ್ತು ಸಂವಾದಿಸುತ್ತಿರುವುದನ್ನು ಕಾಣಬಹುದು.  ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸವು ಇತ್ತೀಚೆಗೆ ಅಂತ್ಯಗೊಂಡ ನಂತರ ವೃಂದಾವನಕ್ಕೆ ದಂಪತಿಗಳ ಭೇಟಿ ಬಂದಿದೆ.

ಇದನ್ನೂ ಓದಿ :ಮದುವೆ ಹೆಸರಲ್ಲಿ ದೋಖಾ : 3 ಲಕ್ಷ ಪಡೆದು ಮದುವೆ, ಮೂರೆ ದಿನಕ್ಕೆ ಪರಾರಿಯಾದಳು ಚೆಲುವೆ !

ಆಸ್ಟ್ರೇಲಿಯಾದಲ್ಲಿ ನಡದೆ ಬಾರ್ಡರ್​ ಗವಾಸ್ಕರ್​ ಟೂರ್ನಿಯಲ್ಲಿ ಕೊಹ್ಲಿ ಅವರು 5 ಟೆಸ್ಟ್‌ಗಳ 9 ಇನ್ನಿಂಗ್ಸ್‌ಗಳಲ್ಲಿ ಕೇವಲ 190 ರನ್‌ಗಳನ್ನು ಗಳಿಸುವ ಮೂಲಕ ಕಳಪೆ ಫಾರ್ಮ್ ಪ್ರದರ್ಶಸಿದ್ದರು. ಇದೀಗ ಕೊಹ್ಲಿ ಮುಂಬರುವ  ಚಾಂಪಿಯನ್ ಟ್ರೋಫಿಗೂ ಮುನ್ನ ವಿರಾಟ್​ ಕೊಹ್ಲಿ ಆಧ್ಯಾತ್ಮಿಕ ಗುರು ಪ್ರೇಮಾನಂದ ಜಿ ಮಹಾರಾಜ್​ರನ್ನು ಭೇಟಿ ಮಾಡಿದ್ದು. ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಲಯಕ್ಕೆ ಮರಳುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments