Monday, August 25, 2025
Google search engine
HomeUncategorizedಸುಸಂಸ್ಕೃತ, ಸಜ್ಜನ, ಮಿತಭಾಷಿ ರಾಜಕಾರಣಿಯನ್ನು ರಾಷ್ಟ್ರ ಕಳೆದುಕೊಂಡಿದೆ : ಸಿದ್ದರಾಮಯ್ಯ

ಸುಸಂಸ್ಕೃತ, ಸಜ್ಜನ, ಮಿತಭಾಷಿ ರಾಜಕಾರಣಿಯನ್ನು ರಾಷ್ಟ್ರ ಕಳೆದುಕೊಂಡಿದೆ : ಸಿದ್ದರಾಮಯ್ಯ

ಬೆಳಗಾವಿ : ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿ.ಎಂ.ಸಿದ್ದರಾಮಯ್ಯ. ಸಿಂಗ್​​ ಅವರು ಭಾರತದ ಖ್ಯಾತ ಆರ್ಥಿಕ ಅರ್ಥ ಶಾಸ್ತ್ರಜ್ಙ, ಆರ್ಥಿಕವಾಗಿ ದೇಶವನ್ನು ಮೇಲಕ್ಕೆತ್ತುವ ಕೆಲಸವನ್ನು ಅವರು ಮಾಡಿದರು ಎಂದು ಹೇಳಿದರು.

ಮನಮೋಹನ್​ ಸಿಂಗ್​ ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ ನಿನ್ನೆ ರಾತ್ರಿ ಮನಮೋಹನ್​ ಸಿಂಗ್ ಅವರು ನಿಧನರಾಗಿದ್ದಾರೆ. ಅವರ ಜೀವನವನ್ನು ನೋಡಿದರೆ ಒಂದು ರೀತಿಯ ಪವಾಡದಂತಿದೆ. ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು ಖ್ಯಾತ ಅರ್ಥ ಶಾಸ್ತ್ರಜ್ಙರಾಗಿದ್ದರು. ಪ್ರಪಂಚದಲ್ಲಿ ಇವರಿಗಿಂತ ಮೇಧಾವಿಗಳು ಇರಬಹುದು ಆದರೆ ಆರ್ಥಿಕ ಕ್ಷೇತ್ರದಲ್ಲಿ ಇವರು ಮಾಡಿದ ಕೆಲಸವನ್ನು ಯಾರು ಮಾಡಿಲ್ಲ.

ಮನಮೋಹನ್​ ಸಿಂಗ್​ ಅವರನ್ನು ಅನೇಕ ಬಾರಿ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಯಾವಾಗ ಅವರನ್ನು ಭೇಟಿಯಾದರು ಬಹಳ ಗೌರವದಿಂದ ನಡೆದುಕೊಳ್ಳುತ್ತಿದ್ದರು. ನಾವು ಮಾತನಾಡುವುದನ್ನು ಬಹಳ ತಾಳ್ಮೆಯಿಂದ ಕೇಳುತ್ತಿದ್ದರು. ನಾವು ಕೇಳುವ ವಿಚಾರ ಆಗುತ್ತದೆಯೋ ಅಥವಾ ಇಲ್ಲವೋ ಎಂದು ನೇರವಾಗಿ ಹೇಳುತ್ತಿದ್ದರು. ಪ್ರಾಮಾಣಿಕ ಪ್ರಧಾನ ಮಂತ್ರಿಯಾಗಿ ರಾಷ್ಟ್ರದ ಅನೇಕ ಸಮಸ್ಯೆಗಳಿಗೆ ಪರಿಹಾರ ಕೊಡುವ ಪ್ರಯತ್ನ ಮಾಡಿದರು.

ಇದನ್ನೂ ಓದಿ : ಆಸ್ತಿ ವಿವಾದ : ಡೆತ್​ ನೋಟ್​ ಬರೆದು ಪ್ರೌಢಶಾಲೆ ಮುಖ್ಯ ಶಿಕ್ಷಕ ಆತ್ಮಹತ್ಯೆ !

ಸೋನಿಯಾ ಗಾಂಧಿ ಹುದ್ದೆಯನ್ನ ತ್ಯಾಗ ಮಾಡಿ, ಸಿಂಗ್​ರನ್ನು ಪ್ರಧಾನಿ ಮಾಡಿದರು !

ಸಿಂಗ್​ ಅವರು 10 ವರ್ಷಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಸೋನಿಯಾ ಗಾಂಧಿಯವರು ಪ್ರಧಾನಿಯಾಗುತ್ತಾರೆ ಎಂದು ನಾವು ತಿಳಿದಿದ್ದೆವು. ಆದರೆ ಅವರು ಹುದ್ದೆಯನ್ನು ತ್ಯಾಗ ಮಾಡಿ ಸಿಂಗ್​ರನ್ನು ಪ್ರಧಾನಿ ಮಾಡಿದರು. ನರಸಿಂಹ ರಾಯರ ಕಾಲದಲ್ಲಿ ಉದಾರೀಕರಣ ಜಾರಿ ಮಾಡಿ ದೇಶವನ್ನು ಆರ್ಥಿಕವಾಗಿ ಮೇಲಕೆತ್ತುವ ಕೆಲಸ ಮಾಡಿದರು. ಅದನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಅದರ ಜೊತೆಗೆ ಸಿಂಗ್​ ಅವರು ಮಾಹಿತಿ ಹಕ್ಕು ಅಧಿನಿಯಮ (RTI), ಶಿಕ್ಷಣದ ಹಕ್ಕು(RTE), ನರೇಗಾ, ಪುಡ್​ ಸೆಕ್ಯೂರಿಟಿ ಆ್ಯಕ್ಟ್​ ರೀತಿಯ ಕಾಯ್ದೆಗಳನ್ನು ತಂದು ದೇಶದ  ಜನರನ್ನು ಮೇಲಕೆತ್ತುವ ಕೆಲಸ ಮಾಡಿದರು. ಆದರೆ ಇಂದು ದೇಶ ಒಬ್ಬ ಸುಸಂಸ್ಕೃತ, ಸಜ್ಜನ, ಮಿತಭಾಷಿ ರಾಜಕಾರಣಿಯನ್ನು ಕಳೆದುಕೊಂಡಿದೆ. ಇದು ದೇಶಕ್ಕೆ ಭರಿಸಲಾಗದ ನಷ್ಟವಾಗಿದೆ.

ಇದನ್ನೂ ಓದಿ : ಭೀಷ್ಮ ಶಪಥ ಕೈಗೊಂಡ ಅಣ್ಣಮಲೈ : ಚಪ್ಪಲಿ ಹಾಕಲ್ಲ, ಛಾಟಿ ಏಟಿನಿಂದ ಹೊಡೆದುಕೊಂಡಿದ್ದೇಕೆ?

2017ರಲ್ಲಿ ನಾನು ಮುಖ್ಯಮಂತ್ರಿಯಾದಾಗ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾಡಿದೆ. ಅದರ ಉದ್ಘಾಟನೆಗೆ ಮನಮೋಹನ್ ಸಿಂಗ್ ಅವರನ್ನ ಕರೆಸಿದ್ದೆ. ಕರ್ನಾಟಕ ಆರ್ಥಿಕತೆ ಬಗ್ಗೆ ಇನ್ನೊಂದು ಬಾರಿ ಕರೆಸಿದ್ದೆ. ಕರ್ನಾಟಕದ ಆರ್ಥಿಕತೆ ಬಹಳ ಸದೃಢವಾಗಿದೆ ಎಂದು ಮನಮೋಹನ್​ ಸಿಂಗ್​ ಅವರು ಹೇಳಿದ್ದರು. ಆದರೆ ಇಂದು ಅವರು ಮೃತಪಟ್ಟಿದ್ದಾರೆ. ವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾಥನೆ ಮಾಡುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments