Monday, August 25, 2025
Google search engine
HomeUncategorized43 ವರ್ಷಗಳ ಬಳಿಕ ಕುವೈತ್​ಗೆ ಭೇಟಿ ನೀಡಿದ ಭಾರತದ ಪ್ರಧಾನಿ : ಹೇಗಿದೆ ಗೊತ್ತಾ ಎರಡು...

43 ವರ್ಷಗಳ ಬಳಿಕ ಕುವೈತ್​ಗೆ ಭೇಟಿ ನೀಡಿದ ಭಾರತದ ಪ್ರಧಾನಿ : ಹೇಗಿದೆ ಗೊತ್ತಾ ಎರಡು ದೇಶಗಳ ಸಂಬಂಧ!

ದೆಹಲಿ: ಪ್ರಧಾನಿ ನರೇಂದ್ರ ಮೋದಿ ವಾರಾಂತ್ಯದಲ್ಲಿ ಕುವೈತ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಇದು 43 ವರ್ಷಗಳ ನಂತರ ಪಶ್ಚಿಮ ಏಷ್ಯಾ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿದೆ.

ಪ್ರಧಾನಿ  ಮೋದಿ ಡಿಸೆಂಬರ್​ 21 ರಿಂದ 22 ರವರೆಗೆ ಕುವೈತ್‌ನಲ್ಲಿರುತ್ತಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಬುಧವಾರ (ಡಿಸೆಂಬರ್ 18) ತಿಳಿಸಿದೆ. ಇಲ್ಲಿಯವರೆಗೆ ಮೋದಿ ಭೇಟಿ ನೀಡದ ಏಕೈಕ ಗಲ್ಫ್ ಸಹಕಾರ ಮಂಡಳಿ ದೇಶ ಕುವೈತ್. 

ಕುವೈತ್‌ನ ಅಮೀರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಪಶ್ಚಿಮ ಏಷ್ಯಾ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಎರಡು ದಿನಗಳ ಭೇಟಿಯಲ್ಲಿ ಅವರು ದೇಶದ ನಾಯಕತ್ವದೊಂದಿಗೆ ಚರ್ಚೆ ನಡೆಸಲಿದ್ದಾರೆ. ಕುವೈತ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಭಾರತ ಮತ್ತು ಕುವೈತ್​ ಸಂಬಂಧ !

ವಿದೇಶಾಂಗ ಇಲಾಖೆಯ ಮಾಹಿತಿ  ಪ್ರಕಾರ ಭಾರತ ಮತ್ತು ಕುವೈತ್ ಸಾಂಪ್ರದಾಯಿಕವಾಗಿ “ಹತ್ತಿರದ ಮತ್ತು ಸ್ನೇಹಪರ” ಸಂಬಂಧಗಳನ್ನು ಹೊಂದಿದೆ. ನವದೆಹಲಿ 1961 ರಲ್ಲಿ ಕುವೈತ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಲಾಗಿದೆ. 

ಕುವೈತ್​ ದೇಶವು ಭಾರತದ ಉನ್ನತ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ, ದ್ವಿಪಕ್ಷೀಯ ವ್ಯಾಪಾರವು ಹಣಕಾಸು ವರ್ಷ 2023-24 ರಲ್ಲಿ $10.47 ಶತಕೋಟಿಯನ್ನು ಮುಟ್ಟಿದೆ. 2022-23 ಮತ್ತು 2023-24 ರ ನಡುವೆ ಕುವೈತ್‌ಗೆ ಭಾರತದ ರಫ್ತುಗಳು $1.56 ಶತಕೋಟಿಯಿಂದ $2.1 ಶತಕೋಟಿಗೆ 34% ಹೆಚ್ಚಾಗಿದೆ. 

ಕುವೈತ್ ಭಾರತಕ್ಕೆ ತೈಲದ ಪ್ರಮುಖ ಮೂಲವಾಗಿದೆ, ಆರನೇ ಅತಿದೊಡ್ಡ ಕಚ್ಚಾ ತೈಲಾ ಪೂರೈಕೆದಾರನಾಗಿದ್ದು ಕುವೈತ್​ ಭಾರತದ ತೈಲ ಅಗತ್ಯತೆಯ ಶೇಕಡಾ 3ರಷ್ಟು ತೈಲವನ್ನು ಆಮದು ಮಾಡುತ್ತಿದೆ. ಅದರ ಜೊತೆಗೆ ಭಾರತದ ಮೂಲದ ನಾಗರಿಕರ ಸಂಖ್ಯೆಯು ಹೆಚ್ಚಿದ್ದು ಕುವೈತ್​ನ ಒಟ್ಟು ಜನ ಸಂಖ್ಯೆಯ 21ರಷ್ಟು ಭಾರತೀಯ ಮೂಲದವರಿದ್ದಾರೆ.

ಕುವೈತ್​ ಪ್ರವಾಸ ಏಕೆ ಮುಖ್ಯವಾಗಿದೆ ?

1981 ರಲ್ಲಿ ಕುವೈತ್‌ಗೆ ಭೇಟಿ ನೀಡಿದ ಕೊನೆಯ ಭಾರತೀಯ ಪ್ರಧಾನಿ ಇಂದಿರಾ ಗಾಂಧಿ. ಅವರ ಭೇಟಿ ನೀಡಿದ ನಂತರ 2009ರಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಇಲ್ಲಿಗೆ ಭೇಟಿ ನೀಡಿದ ಕೊನೆಯ ಭಾರತೀಯ ಸರ್ಕಾರದ ಪ್ರತಿನಿಧಿ ಎಂದು ಹೇಳಲಾಗುತ್ತದೆ.

ಸಚಿವರ ಮಟ್ಟದಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಈ ವರ್ಷದ ಆಗಸ್ಟ್ 18 ರಂದು ಕುವೈತ್‌ಗೆ ಭೇಟಿ ನೀಡಿ, ಕುವೈತ್‌ನ ಕ್ರೌನ್ ಪ್ರಿನ್ಸ್, ಶೇಖ್ ಸಬಾಹ್ ಖಲೀದ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾಹ್ ಮತ್ತು ಪ್ರಧಾನ ಮಂತ್ರಿ ಅಹ್ಮದ್ ಅಬ್ದುಲ್ಲಾ ಅಲ್-ಅಹ್ಮದ್ ಅಲ್-ಜಾಬರ್ ಅವರನ್ನು ಭೇಟಿ ಮಾಡಿದರು.

  • ಗಾಜದಲ್ಲಿ ಇಸ್ರೇಲ್​ ಯುದ್ದ ಮತ್ತು ಸಿರಿಯಾದಲ್ಲಿ  ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರನ್ನು ಇತ್ತೀಚೆಗೆ ಪದಚ್ಯುತಗೊಳಿಸಿದ ಹಿನ್ನೆಲೆಯಲ್ಲಿ ಪಿಎಂ ಮೋದಿ ಅವರ ಭೇಟಿಯು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
  • ಅಮಾಯಕ ನಾಗರಿಕರನ್ನು ರಕ್ಷಿಸಲು ಮತ್ತು “ಸುರಕ್ಷಿತ ಕಾರಿಡಾರ್‌ಗಳ ತೆರೆಯುವಿಕೆ ಮತ್ತು ತುರ್ತು ಮಾನವೀಯ ನೆರವಿನ ಆಗಮನವನ್ನು” ಖಚಿತಪಡಿಸಿಕೊಳ್ಳಲು ಇದು ಜಾಗತಿಕ ಸಮುದಾಯವನ್ನು ಒತ್ತಾಯಿಸಿತು.
  • ಭಾರತವು ಪಶ್ಚಿಮ ಏಷ್ಯಾದಲ್ಲಿ ರಾಜತಾಂತ್ರಿಕತೆಯನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಕುವೈತ್ ಭೇಟಿ ಬಂದಿದೆ.

ಹೀಗೆ ನರೇಂದ್ರ ಮೋದಿಯವರ ಕುವೈತ್​ ಭೇಟಿ ಅಂತರ್​ರಾಷ್ಟ್ರೀಯ ಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದು. ಅದರ ಜೊತೆಗೆ ಭಾರತ ಮತ್ತು ಕುವೈತ್​ ನಡುವೆ ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಅಭಿವೃದ್ದಿಗೊಳಿಸಲು ಈ ಭೇಟಿ ನೆರವಾಗಿದೆ ಎಂದು ತಿಳಿದು ಬಂದಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments