Tuesday, August 26, 2025
Google search engine
HomeUncategorizedಹುಟ್ಟಿದ ಮಗುವನ್ನು ಆಸ್ಪತ್ರೆಯಲ್ಲೆ ಬಿಟ್ಟು ಹೋದ ತಾಯಿ : ಜನಿಸಿದ 48 ಗಂಟೆಯಲ್ಲೆ ಸಾ*ವನ್ನಪ್ಪಿದ ಶಿಶು...

ಹುಟ್ಟಿದ ಮಗುವನ್ನು ಆಸ್ಪತ್ರೆಯಲ್ಲೆ ಬಿಟ್ಟು ಹೋದ ತಾಯಿ : ಜನಿಸಿದ 48 ಗಂಟೆಯಲ್ಲೆ ಸಾ*ವನ್ನಪ್ಪಿದ ಶಿಶು !

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಸಮಾಜವೇ ತಲೆ ತಗ್ಗಿಸಲು ಘಟನೆ ನಡೆದಿದೆ. ನವಜಾತ ಶಿಶುವನ್ನ ಆಸ್ಪತ್ರೆಯಲ್ಲೇ ಬಿಟ್ಟು ಅತ್ತೆಯೊಂದಿಗೆ ತಾಯಿ ಪರಾರಿ ಆಗಿದ್ದಾಳೆ. ಅವಧಿ ಪೂರ್ವ ಜನ್ಮತಾಳಿದ ಕಂದಮ್ಮ 48 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಅಸುನೀಗಿದೆ. ಹೆಣ್ಣು ಮಗು ಅನ್ನೋ ಕಾರಣಕ್ಕೆ ಅತ್ತೆಯೊಂದಿಗೆ ತಾಯಿ ಪರಾರಿ ಆದ್ಲಾ ಅನ್ನೋ ಅನುಮಾನ ಪೊಲೀಸರಿಗೆ ಕಾಡುತ್ತಿದೆ.

ಬೆಳಗಾವಿ ಬಿಮ್ಸ್​​​ ಆಸ್ಪತ್ರೆ ಕಳೆದ ಕೆಲವು ದಿನಗಳಿಂದ ಒಂದಿಲ್ಲೊಂದು ಅಪಖ್ಯಾತಿ ಘಟನೆಗಳಿಂದ ಸದ್ದು ಮಾಡುತ್ತಿದೆ. ಕಳೆದ ತಿಂಗಳವಷ್ಟೇ ಬಾಣಂತಿ ಸಾವು ಪ್ರಕರಣ ಬೆಳಕಿಗೆ ಬಂದಿತ್ತು. ಈಗ ಬಿಮ್ಸ್​​ ಆಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಆಗತಾನೆ ಹುಟ್ಟಿ ನವಜಾತ ಶಿಶುವನ್ನ ಬಿಟ್ಟು ಅತ್ತೆಯೊಂದಿಗೆ ತಾಯಿ ಪರಾರಿ ಆಗಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ ದುರಂತ ಅಂದ್ರೆ ಹುಟ್ಟಿ 48 ಗಂಟೆಯಲ್ಲೇ ಆ ಹೆಣ್ಣು ಮಗು ಸಾವನ್ನಪ್ಪಿದೆ.

ಏನಿದು ಘಟನೆ !

ಡಿಸೆಂಬರ್ 8 ರಂದು ರಾತ್ರಿ 12 ಕ್ಕೆ ಅತ್ತೆಯೊಂದಿಗೆ ಬಾಣಂತಿ ಬಿಮ್ಸ್​ ಆಸ್ಪತ್ರೆ ಗೆ ಬಂದಿದ್ದಳು. ಬಿದ್ದಿದ್ದರಿಂದ ಪೆಟ್ಟಾಗಿದೆ, ತುಂಬಾ ನೋವಿನಿಂದ ಬಳಲುತ್ತಿದ್ದಳು. ತಕ್ಷಣವೇ ಬೀಮ್ಸ್ ಆಸ್ಪತ್ರೆ ವೈದ್ಯರು ಹೆರಿಗೆ ವಾರ್ಡ್ ಗೆ ಶಿಫ್ಟ್ ಮಾಡಿ ಹೆರಿಗೆ ಮಾಡಿದ್ದಾರೆ. ಹುಟ್ಟಿದ ನವಜಾತ ಶಿಶುವಿಗೆ ಜನ್ಮತಃ ಉಸಿರಾಟದ ತೊಂದರೆ ಮತ್ತು ಗಂಟಲಿನಲ್ಲಿ ರಕ್ತಸಾವ್ರವಾಗಿತ್ತು.

ಹೀಗಾಗಿ ಮಗುವನ್ನ ತೀವ್ರ ನಿಖಾ ಘಟಕಕ್ಕೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಯಾವಾಗ ಹೆರಿಗೆ ಆಗಿ 24 ಗಂಟೆ ಆದ್ರು ಮಗುವಿನ ಆರೋಗ್ಯ ವಿಚಾರಿಸಲು ಯಾರ ಬರದೇ ಇದ್ದಾಗ ಗೊತ್ತಾಗಿದ್ದು ಅತ್ತೆಯೊಂದಿಗೆ ತಾಯಿ ಪರಾರಿ ಆಗಿ ಹೋಗಿರುವುದು. ತಾಯಿ ಇಲ್ಲದ ಮಗುವನ್ನ ನರ್ಸಗಳೇ ಆರೈಕೆ ಮಾಡುತ್ತಿದ್ದರು. ಆದ್ರೆ ತೂಕ ಕಡಿಮೆ ಇದ್ದರಿಂದ ಚಿಕಿತ್ಸೆ ಫಲಿಸದೇ ಡಿಸೆಂಬರ್ 10 ರಾತ್ರಿ 10 ಗಂಟೆ ಸಾವನ್ನಪಿದೆ.

ಇನ್ನೂ ಡಿಸೆಂಬರ್ 8 ರಂದು ಬೀಮ್ಸ್ ಆಸ್ಪತ್ರೆ ಗೆ ಬಂದ ಮಗುವಿನ ತಾಯಿ ಬೈಲಹೊಂಗಲ ತಾಲ್ಲೂಕಿನವಳು ಅಂತಾ ಹೇಳಲಾಗುತ್ತಿದೆ. ತಾಯಿ ಬೀಬೀಜಾನ್ ಸದ್ದಾಂ ಸೈಯದ್ ಅಂತಾ. ಆಸ್ಪತ್ರೆ ಬಂದ ಮಗುವಿನ ತಾಯಿ ಮತ್ತು ಅತ್ತೆ ತಮ್ಮ ಯಾವುದೇ ವಿಳಾಸ ಇರೋ ದಾಖಲೆಯನ್ನ ಆಸ್ಪತ್ರೆಯಲ್ಲಿ ಒದಗಿಸಿಲ್ಲ. ತುರ್ತು ಚಿಕಿತ್ಸೆ ಅನಿವಾರ್ಯ ಆಗಿದ್ದರಿಂದ ಆಸ್ಪತ್ರೆ ಸಿಬ್ಬಂದಿಗಳೂ ಸಹ ನೇರವಾಗಿ ಹೆರಿಗೆ ವಾರ್ಡ್ ಗೆ ಶಿಫ್ಟ್ ಮಾಡಿ ಹೆರಿಗೆ ಮಾಡಿದ್ದಾರೆ.

ಮಗುವಿನ ಜನ್ಮಕೊಟ್ಟ ತಾಯಿಯನ್ನ ವಾರ್ಡಗೆ ಶಿಫ್ಟ್ ಮಾಡಿದ ಬಳಿಕ ಮತ್ತೆ ಆಸ್ಪತ್ರೆ ಸಿಬ್ಬಂದಿ ಗಮನಕ್ಕೆ ಬರದಂತೆ ಪರಾರಿ ಆಗಿದ್ದಾರೆ. ಇದು ಬೀಬೀಜಾನಳ ಮೂರು ಬಾರಿ ಆಗಿರೋ ಹೆರಿಗೆ. ಸದ್ಯ ವೈದ್ಯರು ಹೇಳೋ ಪ್ರಕಾರ ಆರುವರೆ ತಿಂಗಳು ಆಗಿತ್ತು. ಹೀಗಾಗಿ ತನ್ನ ಹೊಟ್ಟೆಯಲ್ಲಿದ್ದ ಮಗು ಹೆಣ್ಣು ಅಂತಾ ಗೊತ್ತಾಗಿ ಆಸ್ಪತ್ರೆ ಗೆ ಬಂದರ. ಒಂದು ವೇಳೆ ಬಿದ್ದು ಪೆಟ್ಟಾಗಿದ್ದರೆ ಯಾಕೇ ಆಸ್ಪತ್ರೆಯಿಂದ ಹೇಳದೆ ಕೇಳದೆ ಪರಾರಿ ಆದ್ರು ಅನ್ನೋ ಬೆಳಗಾವಿ ಎಪಿಎಂಸಿ ಪೊಲೀಸರಿಗೆ ಕಾಡುತ್ತಿದೆ. ಸಧ್ಯ ಬೀಮ್ಸ್ ಆಸ್ಪತ್ರೆ ಸಿಬ್ಬಂದಿ ದಾಖಲಿಸಿರೋ ದೂರು ಆಧರಿಸಿ ತನಿಖೆ ಆರಂಭಿಸಿದ್ದಾರೆ. ಆಸ್ಪತ್ರೆ ಸಿಸಿಟಿವಿ ವಿಡಿಯೋಗಳ ಪರಿಶೀಲನೆ ಕಾರ್ಯ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಬೀಮ್ಸ್ ಆಸ್ಪತ್ರೆಯಲ್ಲಿ ಜನ್ಮಕೊಟ್ಟ ಮಗುವನ್ನ ಬಿಟ್ಟು ತಾಯಿ ಅತ್ತೆಯೊಂದಿಗೆ ಪರಾರಿ ಆಗಿದ್ದಾಳೆ. ಇತ್ತ ಕೇಸ್ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಆಧರಿಸಿ ಆ ಮಗುವಿನ ತಾಯಿ ಅತ್ತೆಯನ್ನ ಪತ್ತೆ ಹಚ್ಚಲು ಪ್ರಯತ್ನ ಮಾಡುತ್ತಿದ್ದಾರೆ. ಏನೇ ಆಗಲಿ ಆ ಮಗುವಿನ ತಾಯಿ ಅತ್ತೆ ಮಾಡಿದ ದುಷ್ಕೃತ್ಯಕ್ಕೆ ನಮ್ಮ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments