Monday, August 25, 2025
Google search engine
HomeUncategorizedಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ದುರಂತ : ನಾಲ್ವರು ವಿದ್ಯಾರ್ಥಿನಿಯರು ನೀರು ಪಾಲು !

ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ದುರಂತ : ನಾಲ್ವರು ವಿದ್ಯಾರ್ಥಿನಿಯರು ನೀರು ಪಾಲು !

ಕಾರವಾರ: ಕೋಲಾರದ ಮುಳಬಾಗಿಲಿನ ಮೋರಾರ್ಜಿ ವಸತಿ ಶಾಲೆಯಿಂದ ಮುರುಡೇಶ್ವರಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ವೇಳೆ ದುರಂತವೊಂದು ಸಂಭವಿಸಿದ್ದು. ಸುಮಾರು 4 ಜನ ವಿಧ್ಯಾರ್ಥಿನಿಯರು ಅಲೆಗಳ ರಭಸಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಮಾಹಿತಿ ದೊರೆತಿದೆ. ನಾಲ್ವರಲ್ಲಿ ಒರ್ವ ವಿಧ್ಯಾರ್ಥಿನಿಯ ಶವ ಪತ್ತೆಯಾಗಿದ್ದು. ಉಳಿದ ಮೂವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕೋಲಾರದ ಮೋರಾರ್ಜಿ ವಸತಿ ಶಾಲೆಯ ಸುಮಾರು 45 ಜನ ವಿಧ್ಯಾರ್ಥಿಗಳು ಉತ್ತರ ಕನ್ನಡದ ಮುರುಡೇಶ್ವರಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಸಮುದ್ರದ ದಡದಲ್ಲಿ ನೀರಿನೊಂದಿಗೆ ಆಟವಾಡುವ ವೇಳೆ 7 ಜನ ವಿಧ್ಯಾರ್ಥಿನಿಯರು ಸಮುದ್ರದ ಅಲೆಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದು ಮೂವರು ವಿಧ್ಯಾರ್ಥಿಗಳನ್ನು ಸ್ಥಳದಲ್ಲಿದ್ದ ಲೈಫ್​ಗಾರ್ಡ್​ ಸಿಬ್ಬಂದಿಗಳು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆದರೆ ಇನ್ನುಳಿದ 4 ವಿಧ್ಯಾರ್ಥಿಗಳು ಸಮುದ್ರದ ಅಲೆಯಲ್ಲಿ ಕಣ್ಮರೆಯಾಗಿದ್ದು. ಇದರಲ್ಲಿ ಓರ್ವ ವಿಧ್ಯಾರ್ಥಿನಿಯ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಶ್ರಾವಂತಿ ಗೋಪಾಲಪ್ಪ(15) ಎಂಬ ವಿಧ್ಯಾರ್ಥಿನಿಯ ಶವ ಪತ್ತೆಯಾಗಿದ್ದು. ಉಳಿದ ಮೂರು ವಿಧ್ಯಾರ್ಥಿಗಳಾದ, ದೀಕ್ಷಾ (15), ಲಾವಣ್ಯ(15), ಲಿಪಿಕಾ (15)ಗಾಗಿ ಹುಡುಗಾಟ ನಡೆಸಲಾಗುತ್ತಿದೆ ಎಂದು ಮಾಹಿತಿ ದೊರೆತಿದೆ.

ಸ್ಥಳಕ್ಕೆ ಉತ್ತರಕನ್ನಡದ ತಹಶೀಲ್ದಾರ್​ ಮತ್ತು ಎಸಿ  ಭೇಟಿ ನೀಡಿದ್ದು. ಉಳಿದ ವಿಧ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮುರುಡೇಶ್ವರದ ಖಾಸಗಿ ಹೋಟೆಲ್​ನಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ನೆನ್ನೆ ರಾತ್ರಿ ರಕ್ಷಣಾ ಕಾರ್ಯವನ್ನು ಸ್ಥಗಿತ ಗೊಳಿಸಿದ್ದ ಲೈಫ್​ ಗಾರ್ಡ್ ಸಿಬ್ಬಂದಿಗಳು ಇಂದು ಬೆಳಿಗ್ಗೆ ಇಂದ ಮತ್ತೆ ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದಾರೆ. ನಾಲ್ವರು ವಿಧ್ಯಾರ್ಥಿಗಳನ್ನು ಕಳೆದುಕೊಂಡ ಶಿಕ್ಷಕರು ಆಕ್ರಂದನ ಮುಗಿಲು ಮುಟ್ಟಿದೆ ಎಂದು ಮಾಹಿತಿ ದೊರೆತಿದೆ.

ಕೋಲಾರದಿಂದ ಮುರುಡೇಶ್ವರಕ್ಕೆ ಹೊರಟ ಪೋಷಕರು !

ಮುರುಡೇಶ್ವರದಲ್ಲಿ ವಿಧ್ಯಾರ್ಥಿನಿಯರು ಸಾವನ್ನಪ್ಪಿದ ವಿಶಯ ತಿಳಿಯುತ್ತಿದ್ದಂತೆ ಪೋಷಕರು ಗಾಬರಿಯಾಗಿದ್ದು. ಟಿಟಿ ವಾಹನದಲ್ಲಿ ಮುರುಡೇಶ್ವರಕ್ಕೆ ಪ್ರಯಾಣ ಬೆಳಸಿದ್ದಾರೆ. ಅವರ ಜೊತೆಗೆ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್​ ಕೂಡ ತೆರಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮುಳಬಾಘಿಲು ತಹಶೀಲ್ದಾರ್​ ಗೀತಾ ಕೂಡ ವಸತಿಶಾಲೆಯ ಬಳಿ ಬಂದು ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments