Saturday, August 23, 2025
Google search engine
HomeUncategorizedಆಸ್ತಿ ವಿಚಾರ : ಸ್ವಂತ ಚಿಕ್ಕಪ್ಪನಿಗೆ ಗುಂಡಿ ತೋಡಿದ ಪಾಪಿಗಳು !

ಆಸ್ತಿ ವಿಚಾರ : ಸ್ವಂತ ಚಿಕ್ಕಪ್ಪನಿಗೆ ಗುಂಡಿ ತೋಡಿದ ಪಾಪಿಗಳು !

ದಾವಣಗೆರೆ : ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿದೆ. ಅದೇ ರೀತಿ ಇಲ್ಲೊಬ್ಬ ತಮ್ಮ ಆಸ್ತಿ ವಿಚಾರವಾಗಿ ಮಗನೊಂದಿಗೆ ಸೇರಿಕೊಂಡು ಒಡಹುಟ್ಟಿದ ಅಣ್ಣನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ. ಹಾಗಿದ್ದರೇ ಯಾರು ಆ ಪಾಪಿ ತಮ್ಮ ಘಟನೆಗೆ ಕಾರಣ ಏನು ಅಂತೀರಾ ಈ ಸ್ಟೋರಿ ನೋಡಿ.

ದಾವಣಗೆರೆ ತಾಲೂಕಿನ ಗೋಪನಾಳ್ ಗ್ರಾಮದ ಸಿದ್ದಲಿಂಗಪ್ಪ. ಬೋರ್ ಪಾಯಿಂಟ್ ಗಳನ್ನ ಮಾಡುತ್ತಿದ್ದರು, ಹೀಗೆ ಬೋರ್ ಪಾಯಿಂಟ್ ಮಾಡಿಸಲೆಂದು ಹೋದ ಸಿದ್ದಲಿಂಗಪ್ಪ ನಲ್ಲೂರು ಸಮೀಪದ ಭದ್ರಾ ಉಪ ನಾಲೆಯಲ್ಲಿ ಅಕ್ಟೋಬರ್ 22 ರಂದು ಶವವಾಗಿ ಪತ್ತೆಯಾಗಿದ್ದರು. ಈ ಬಗ್ಗೆ ಅನುಮಾನಗೊಂಡ ಸಿದ್ದಲಿಂಗಪ್ಪ ಅವರ ಸೊಸೆ ದೊಡ್ಡಮ್ಮ ಇದು ಕೊಲೆ ಎಂದು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯ ಪ್ರವೃತ್ತರಾದ ಪೊಲೀಸರು ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ, ಪ್ರಭು, ಪ್ರಶಾಂತ್ ನಾಯ್ಕ, ಸುಜಾತ ಶಿವಮೂರ್ತಪ್ಪ ಎಂಬುವವರನ್ನು ಬಂಧಿಸಿದ್ದಾರೆ.

ಸಿದ್ದಲಿಂಗಪ್ಪ ಅವರಿಗೆ ಪರಮೇಶ್ವರಪ್ಪ ಹಾಗೂ ಶಿವಮೂರ್ತಪ್ಪ ಎಂಬ ಇಬ್ಬರು ಸಹೋದರರಿದ್ದರು. ಆದರೆ ಆಸ್ತಿ ವಿಚಾರವಾಗಿ ಸಿದ್ದಲಿಂಗಪ್ಪ ಹಾಗೂ ಶಿವಮೂರ್ತಪ್ಪ ನಡುವೆ ಪದೇ ಪದೇ ಜಗಳ ನಡೆಯುತ್ತಿದ್ದು ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ಕೂಡ ನಡೆಯುತ್ತಿತ್ತು, ಶಿವಮೂರ್ತಪ್ಪ ತನ್ನ ಪುತ್ರ ಸತೀಶನಿಗೆ ಚಿಕ್ಕಪ್ಪ ಸಿದ್ದಲಿಂಗಪ್ಪನನ್ನ ಹೇಗಾದರೂ ಮಾಡಿ ಮುಗಿಸು ಎಂದು ಹೇಳಿದ್ದೇ ತಡ ಸತೀಶ ಸಂಚೊಂದನ್ನ ರೂಪಿಸಿದ್ದ.

ಲಿಂಗದಳ್ಳಿಯ ಪ್ರಭು ಹಾಗೂ ದಾವಣಗೆರೆಯ ನಿಟ್ಟುವಳ್ಳಿಯ ಪ್ರಶಾಂತ್ ನಾಯ್ಕ ಎಂಬುವವರನ್ನ ಭೇಟಿ ಮಾಡಿದ್ದ ಸತೀಶ್​ ಒಂದು ಲಕ್ಷಕ್ಕೆ ಚಿಕ್ಕಪ್ಪನನ್ನ ಕೊಲೆ ಮಾಡಲು ಸುಪಾರಿ ನೀಡಿದ್ದ. ಅದರಂತೆ ಅಕ್ಟೋಬರ್ 21ರಂದು ದಾವಣಗೆರೆ ತ್ರಿಶೂಲ್ ಚಿತ್ರಮಂದಿರದ ಬಳಿ ಆಟೋಗೆ ಗ್ಯಾಸ್ ತುಂಬಿಸಿ ಅವರಿಗೆ ಒಂದು ಸಾವಿರ ಅಡ್ವಾನ್ಸ್ ಕೂಡ ಸತೀಶ ನೀಡಿದ್ದ.

ಅದರಂತೆ ಪ್ರಭು ಹಾಗೂ ಪ್ರಶಾಂತ್ ನಾಯ್ಕ ಸಿದ್ದಲಿಂಗಪ್ಪ ಅವರಿಗೆ ಬೋರ್ ಪಾಯಿಂಟ್ ಇದೇ ಎಂದು ಹೇಳಿ ಅವರನ್ನ ತೊಗಲೆರೆ ಕ್ರಾಸ್ ಬಳಿ ಆಟೋದಲ್ಲಿ ಕೂರಿಸಿಕೊಂಡು ಹೋಗಿದ್ದಾರಲ್ಲದೇ ಅವರನ್ನ ಆಟೋದಲ್ಲಿ ಸುತ್ತರಿಸಿದ್ದಾರೆ. ಆಗ ಸಿದ್ದಲಿಂಗಪ್ಪ ಅವರಿಗೆ ಅನುಮಾನ ಬಂದಿದ್ದು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕೊನೆಗೆ ಸಿದ್ದಲಿಂಗಪ್ಪನನ್ನ ಪ್ರಭು ಹಾಗೂ ಪ್ರಶಾಂತ್ ನಾಯ್ಕ ಟವಲ್ ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ನಲ್ಲೂರು ಬಳಿ ಇರುವ ಭದ್ರ ಉಪನಾಲೆಗೆ ಕೈಕಾಲು ಕಟ್ಟಿ ಆತನ ಮೃತ ದೇಹದ ಮೇಲೆ ಕಲ್ಲು ಇಟ್ಟು ನಾಲೆಗೆ ಎಸೆದಿದ್ದರಲ್ಲದೇ ಮೃತ ದೇಹದ ಪೋಟೋವನ್ನ ಸತೀಶನಿಗೆ ಕಳುಹಿಸಿದ್ದ. ಕೊನೆಗೆ ಸತೀಶ ಅವರಿಗೆ ಹತ್ತು ಸಾವಿರ ಪೋನ್ ಪೇ ಕೂಡ ಮಾಡಿದ್ದ ಎನ್ನಲಾಗಿದೆ.

ಒಟ್ಟಿನಲ್ಲಿ ಸ್ವಂತ ಚಿಕ್ಕಪ್ಪನನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ್ದ ಸತೀಶ, ಆತನ ತಂದೆ ಶಿವಮೂರ್ತಪ್ಪ, ಸೊಸೆ ಸುಜಾತ, ಪ್ರಭು ಹಾಗೂ ಪ್ರಶಾಂತನಾಯ್ಕ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಏನೇ ಆಗಲಿ ಮೃತ ದೇಹದ ಮೇಲೆ ಕೊಲೆ ಎನ್ನುವುದಕ್ಕೆ ಯಾವುದೇ ಕುರುವು ಇಲ್ಲದೇ ಇದ್ದರೂ ಚಾಣಾಕ್ಷ ತನದಿಂದ ಕೊಲೆ ಪ್ರಕರಣ ಬೇದಿಸಿದ ಚನ್ನಗಿರ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments