Monday, August 25, 2025
Google search engine
HomeUncategorizedಕಟ್ಟಡ ಕುಸಿತ ದುರಂತ: ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಕಟ್ಟಡ ಕುಸಿತ ದುರಂತ: ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಬೆಂಗಳೂರು : ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣದಲ್ಲಿ ಮತ್ತೊಬ್ಬ ಕಾರ್ಮಿಕ ಸಾವನ್ನಪ್ಪಿದ್ದು ಮಾಹಿತಿ ದೊರೆತಿದ್ದು ಒಟ್ಟು ಮೃತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ನೆನ್ನೆ ಸಂಜೆ ನಗರದ ಹೆಣ್ಣೂರು ಸಮೀಪದ ಬಾಬು ಸಾಹೇಬ್ ಪಾಳ್ಯದಲ್ಲಿ ಈ ದುರಂತ ಸಂಭವಿಸಿದ್ದು. ಅವೈಜ್ಞಾನಿಕ ಕಾಮಗಾರಿಯ ಫಲವಾಗಿ ಈ ದುರಂತ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ.

ಕಟ್ಟಡ ಮಾಲೀಕ ಭುವನ್​ ರೆಡ್ಡಿ ನಾಲ್ಕು ಮಹಡಿ ನಿರ್ಮಾಣಕ್ಕೆ BBMPಯಿಂದ ಅನುಮತಿ ಪಡೆದು, ಆರು ಮಹಡಿಯ ಕಟ್ಟಡ ಕಟ್ಟಿಸುತ್ತಿದ್ದ. ಇದರಿಂದ ಕಟ್ಟಡ ಕುಸಿದು ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಮತ್ತೋರ್ವ ಕಾರ್ಮಿನ ಶವ ಹೊರಗೆ ತೆಗೆದಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಬಿಹಾರ ಮೂಲದವಾರದ ಕಾರ್ಮಿಕ ಮೊಹಮ್ಮದ್ ಸಾಹಿಲ್​​, ತಿರುಪಾಲಿ, ಅರ್ಮಾನ್​​, ಶಂಕರ್​​, ಸತ್ಯರಾಜ್​, ಸೋಲೋ ಪಾಸ್ವಾನ್ ಮೃತರು. ಇದುವರೆಗೂ 13 ಜನ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಎಂದು ಮಾಹಿತಿ ದೊರೆತಿದೆ.

ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣೂರು ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಟ್ಟಡದ ಮಾಲೀಕ ಭುವನ್ ರೆಡ್ಡಿ, ಗುತ್ತಿಗೆದಾರ ಮುನಿಯಪ್ಪ ಎಂಬುವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. NDRF ಮತ್ತು SDRF ತಂಡದವರಿಂದ ರಕ್ಷಣಾಕಾರ್ಯ ಭರದಿಂದ ಸಾಗಿದ್ದು. ಉಳಿದವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments