Tuesday, August 26, 2025
Google search engine
HomeUncategorizedಜಲಪಾತ, ಭೂಕುಸಿತ : ರಾಜಧಾನಿಯ ಪರಿಸ್ಥಿತಿ ನೋಡಿ ನರಳುವುದಿಲ್ಲವೇ ಕೆಂಪೇಗೌಡರ ಆತ್ಮ?

ಜಲಪಾತ, ಭೂಕುಸಿತ : ರಾಜಧಾನಿಯ ಪರಿಸ್ಥಿತಿ ನೋಡಿ ನರಳುವುದಿಲ್ಲವೇ ಕೆಂಪೇಗೌಡರ ಆತ್ಮ?

ಬೆಂಗಳೂರು : ಕಳೆದ ಕೆಲ ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಮಳೆ ರಾಜಧಾನಿಯ ಜನರನ್ನು ಅಕ್ಷರಶಹ ಹಿಂಡಿ ಹಿಪ್ಪೆ ಮಾಡಿದೆ. ಯಾವ ಪ್ರಮಾಣದಲ್ಲಿ ಮಳೆ ಸುರಿದಿದೆ ಎಂದು ಹೇಳುವುದಾದರೆ ಮಲೆನಾಡು ಪ್ರದೇಶದಲ್ಲಿ ಉಂಟಾಗುವ ಭೂಕುಸಿತವು ಬೆಂಗಳೂರಿನಲ್ಲಿ ಸಂಭವಿಸಿದೆ, ಬೆಂಗಳೂರಿನಲ್ಲಿ ಜಲಪಾತಗಳು ನಿರ್ಮಾಣವಾಗಿವೆ. ಇನ್ನು ಪ್ರವಾಹವನ್ನು ಕೇಳುವುದೇ ಬೇಡ ರಸ್ತೆ ರಸ್ತೆಗಳಲೆಲ್ಲ ಪ್ರವಾಹ ಉಂಟಾಗುತ್ತಿದೆ, ಅದರೆ ಇಷ್ಟೆಲ್ಲಾ ಅನಾಹುತಗಳನ್ನು ನೋಡುವ ನಗರ ನಿರ್ಮಾತೃ ಕೆಂಪೇಗೌಡರ ಆತ್ಮ ದುಃಖದಿಂದ ನರಳುವುದಿಲ್ಲವೇ? ಎಂಬ ಪ್ರಶ್ನೆಯನ್ನು ಸರ್ಕಾರ ಒಮ್ಮೆ ಕೇಳಿಕೊಳ್ಳುವ ಅವಶ್ಯಕತೆ ಇದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜಧಾನೀ ಅಕ್ಷರಶಹ ಕೆರೆಯತಾಗಿದೆ. ಆದರೆ ಇಷ್ಟೆಲ್ಲಾ ಅನಾಹುತಕ್ಕೆ ಕೇವಲ ಮಳೆ ಮಾತ್ರ ಕಾರಣವೇ? ಇದರಲ್ಲಿ ಸರ್ಕಾರದ ಪಾತ್ರವೇನು ಇಲ್ಲವೇ? ಈ ರೀತಿ ಯಾರಾದರೂ ಹೇಳಿದರೆ ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಹೇಳಬಹುದು.

ಬೆಂಗಳೂರು ನಿರ್ಮಾತೃ ಕೆಂಪೇಗೌಡರು ನಗರವನ್ನು ಎಷ್ಟು ಅಚ್ಚು ಕಟ್ಟಾಗಿ ನಿರ್ಮಿಸಿದ್ದರು ಎಂದರೆ, ನಗರದ ನಾಲ್ಕು ದಿಕ್ಕುಗಳಲ್ಲಿ ಗೋಪುರಗಳನ್ನು ನಿರ್ಮಿಸಿ, ಪ್ರತಿಯೊಂದು ವರ್ಗದವರು ನೆಮ್ಮದಿಯಿಂದ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸಲು ಪೇಟೆಗಳನ್ನು ನಿರ್ಮಿಸಿದ್ದರು. ಇನ್ನು ನೀರಾವರಿಯ ವಿಷಯಕ್ಕೆ ಬಂದರೆ ಇವರಂತ ಮತ್ತೊಬ್ಬ ಇಂಜಿನಿಯರ್ ಬೇರೆ ಯಾರು ಇರಲಾರರು. ಇವರು ನಗರದ ಜನತೆಗೆ ನೀರು ಒದಗಿಸಲು ಕೆಂಪಬುದ್ದಿ, ಧರ್ಮಬುದ್ದಿಕೆರೆ, ಸಂಪಿಗೆ ಕೆರೆ, ಸಿದ್ದಿಕಟ್ಟೆಕೆರೆ ಹೀಗೆ ಅನೇಕ ಕೆರೆಗಳನ್ನು ನಿರ್ಮಿಸಿದರು. ಕೇವಲ ನಿರ್ಮಿಸುವುದು ಮಾತ್ರವಲ್ಲದೆ ಒಂದು ಕೆರೆ ಕೋಡಿ ಬಿದ್ದ ನಂತರ ಆ ನೀರು ಮತ್ತೊಂದು ಕೆರೆಗೆ ಹರಿದು ಹೋಗುವ ಅತ್ಯಾದುನಿಕ ವ್ಯವಸ್ಥೆಯನ್ನು ನಿರ್ಮಿಸಿದ್ದರು. ಹೀಗೆ 16ನೇ ಶತಮಾನದಲ್ಲಿಯೇ ಇಡೀ ಪ್ರಪಂಚ ನೋಡಿ ನಾಚುವ ರೀತಿ ನಗರವನ್ನು ನಿರ್ಮಾಣ ಮಾಡಿದ್ದರು.

ಆದರೆ ಇಂದಿನ ಪರಿಸ್ಥಿತಿಯನ್ನು ಒಮ್ಮೆ ನೆನಪಿಸಿಕೊಳ್ಳಿ.. ಬೇಡ ನೋಡೋದಕ್ಕೆ ಸಿಗುತ್ತದೆ ಸಾಧ್ಯವಾದವರು ಒಮ್ಮೆ ನೋಡಿ ಬನ್ನಿ. ಆಧುನಿಕ ವಿಶ್ವಕರ್ಮ ಕೆಂಪೇಗೌಡರು ನಿರ್ಮಿಸಿದ ನಗರ ಇಂದು ಯಾವ ಸ್ಥಿತಿಗೆ ತಲುಪಿದೆ. ಪ್ರಾಕೃತಿಕವಾಗಿ ದೇಶದ ಅತ್ಯಂತ ಸುರಕ್ಷಿತಾ ನಗರದಲ್ಲಿ ಸರ್ಕಾರಿ ನಿರ್ಮಿತ ವಿಕೋಪಗಳು ಜರುಗುತ್ತಿವೆ. ಕೆರೆಗಳನ್ನು ಮುಚ್ಚಿ ಅದರ ಮೇಲೆ ಲೇಔಟ್, ಅಪಾರ್ಟ್ಮೆಂಟ್ ನಿರ್ಮಿಸಿರುವ ಜಾಗಗಳೆಲ್ಲ ಜಲಾವೃತವಾಗಿದೆ. ಪ್ಲೈಓವರ್ ಗಳು ಜಲಪಾತವಾಗಿವೆ. ಇನ್ನು ಟ್ರಾಫಿಕ್ ಎಂಬುದು ಜನರಿಗೆ ಮನೆಯಾಗಿದೆ ಏಕೆಂದರೆ ಇಡೀ ದಿನ ಕೇವಲ ಟ್ರಾಫಿಕ್ ಅಲ್ಲೇ ಕಾಲ ಕಳೆಯುವ ಪರಿಸ್ಥಿತಿ ಜನರಿಗೆ ಲಭ್ಯವಾಗಿದೆ.

ಇಂತಹ ಎಲ್ಲಾ ಭಾಗ್ಯಗಳನ್ನು ನೀಡಿದ ಸರ್ಕಾರಕ್ಕೆ ಜನರು ಸನ್ಮಾನ ಮಾಡಿದರು ಕಡಿಮೆಯೇ ಆಗುತ್ತದೆ. ಇನ್ನು ಬಿಬಿಎಂಪಿ ವಿಷಯಕ್ಕೆ ಬರುವುದೇ ಬೇಡ ಅಂತಹ ಒಂದು ಸಂಸ್ಥೆ ಬೆಂಗಳೂರಿನಲ್ಲಿ ಇದೆ ಎಂಬುದನ್ನೇ ಜನರು ಮರೆತು ಹೋಗಿದ್ದಾರೆ. ಒಂದು ರೀತಿ ಸತ್ತೇ ಹೋಗಿರುವ ಸಂಸ್ಥೆ ಎಂದರು ತಪ್ಪಾಗಲಾರದು. ಇನ್ನು BMRCLನ ಅಪರಿಪೂರ್ಣ ಮೆಟ್ರೋ ಕಾಮಗಾರಿಗಳು ಇಂದಿನ ಪರಿಸ್ಥಿತಿಗೆ ಸಾಕಷ್ಟು ಕೊಡುಗೆ ನೀಡುತ್ತಿವೆ.

ಇಂತಹ ಪರಿಸ್ಥಿಯನ್ನು ನಿರ್ವಹಿಸಬೇಕಾದ  ಮಂತ್ರಿಗಳು ನೀಡುವ  ಉತ್ತರಗಳು ಕೂಡ ಬೆಂಗಳೂರಿನ ಇಂದಿನ ಪರಿಸ್ಥಿತಿಗೆ ಕಾರಣವೆಂದು ಹೇಳಬಹುದು. ಒಂದು ಕಡೆ ಮಳೆ ನೀರನ್ನು ಆಕಾಶಕ್ಕೆ ಕಳುಹಿಸೋದಕ್ಕೆ ಆಗುತ್ತದೆಯೆ ಎಂದು ಹೇಳುವ ಮಂತ್ರಿ ಇದ್ದರೆ, ಮತ್ತೊಂದೆಡೆ ದುಬೈ ಅಲ್ಲಿಯು ಮಳೆ ಬಂದು ಪ್ರವಾಹವಾಗುತ್ತಿದೆ ಎಂದು ಹೇಳುವವರಿದ್ದಾರೆ. ಇಂತವರ ಮಧ್ಯೆ ರಾಜಧಾನಿ ಜನರು ಬ್ರಾಂಡ್ ಬೆಂಗಳೂರಿನ ಕನಸನ್ನು ಕಾಣುತಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments