Monday, August 25, 2025
Google search engine
HomeUncategorizedಬಿಷ್ಣೋಯಿಗಳೆಂದರೆ ಯಾರು? ಇವರೇಕೆ ಸಲ್ಮಾನ್ ಖಾನ್​ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ತಿಳಿಬೇಕೆ? ಹಾಗಿದ್ದರೆ ವರದಿ...

ಬಿಷ್ಣೋಯಿಗಳೆಂದರೆ ಯಾರು? ಇವರೇಕೆ ಸಲ್ಮಾನ್ ಖಾನ್​ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ತಿಳಿಬೇಕೆ? ಹಾಗಿದ್ದರೆ ವರದಿ ನೋಡಿ

ಇತ್ತೀಚೆಗೆ ಮಹರಾಷ್ಟ್ರದಲ್ಲಿ ನಡೆದ ಬಾಬಾ ಸಿದ್ದಿಕಿ ಹತ್ಯೆಯಿಂದ ಲಾರೆನ್ಸ್ ಬಿಷ್ಣೊಯಿ ಹೆಸರು ಮತ್ತೇ ಮುನ್ನೆಲೆಗೆ ಬಂದಿದೆ. 2019ರಲ್ಲಿ ಜೈಲು ಸೇರಿರುವ ಈ ವ್ಯಕ್ತಿ ಯಾಕೆ ಸಲ್ಮಾನ್​ನನ್ನು ಕೊಲ್ಲಲು ಯತ್ನಿಸುತ್ತಿದ್ದಾನೆ ಎಂದು ಜನರಲ್ಲಿ ಕುತೂಹಲ ಮೂಡಿದೆ. ಇದರ ಬಗ್ಗೆ ತಿಳಿಯಲು ಕೆಳಗಿನ ವರದಿಯನ್ನು ಪೂರ್ತಿ ನೋಡಿ.

ಬಿಷ್ಣೋಯಿ ಸಮುದಾಯವೆಂದರೆ ಏನು?

ಬಿಷ್ಣೊಯಿ ಎಂದರೆ 29 ತತ್ವಗಳನ್ನು ಪಾಲನೆ ಮಾಡುವ ಸಮುದಾಯ ಎಂಬ ಅರ್ಥ ಬರುತ್ತದೆ. ಮೂಲತಃ ಇವರು ಪ್ರಕೃತಿ ಆರಾಧಕರಾಗಿದ್ದು. ತಮ್ಮ ಇಡೀ ಜೀವನವನ್ನೇ ಪ್ರಕೃತಿಯನ್ನು ಉಳಿಸಲು ಶ್ರಮಿಸುವ ವರ್ಗವಾಗಿದೆ. ರಾಜಸ್ಥಾನ, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ ನೆಲೆಸಿರುವ ಈ ಸಮುದಾಯದ ಒಟ್ಟು ಜನ ಸಂಖ್ಯೆ 15 ಲಕ್ಷವಿರಬಹುದು ಎಂದು ಹೇಳಲಾಗುತ್ತದೆ.

ಐತಿಹಾಸಿಕ ಹಿನ್ನಲೆ

ಬಿಷ್ಣೋಯಿ ಪಂಥವು ಒಂದು ಹಿಂದೂ ವೈಷ್ಣವ ಪಂಥವಾಗಿದ್ದು. ಇದಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ರಾಜಸ್ಥಾನದ ಮಾರ್​ವಾರ್ ಪ್ರಾಂತ್ಯದಲ್ಲಿ ಈ ಸಮುದಾಯ ಹುಟ್ಟಿಕೊಂಡಿದ ಎಂದು ನಂಬಲಾಗಿದೆ. 1451 ರಿಂದ 1536ರ ಅವಧಿಯಲ್ಲಿದ್ದ ಗುರು ಜಂಬೇಶ್ವರ್ ಇವರ ತತ್ವಗಳನ್ನು ರಚಿಸಿದ್ದರು. ವಿಷ್ಣುವನ್ನು ಆರಾಧಿಸುವುದರಿಂದ ಇವರನ್ನು ವಿಷ್ಣೋಯಿಗಳು ಎಂದು ಕರೆಯಲಾಗುತ್ತದೆ.

18ನೇ ಶತಮಾನದ ಬಿಷ್ಣೋಯ್ ಚಳುವಳಿ 

1730 ರಲ್ಲಿ ಮಲಬಾರ್ ಪ್ರಾಂತ್ಯದ ರಾಜ ತನ್ನ ಅರಮನೆ ನಿರ್ಮಿಸಲು ಮರಗಳನ್ನು ಕಡಿಯಲು ಬಿಷ್ಣೋಯಿ ಎಂಬ ಹಳ್ಳಿಗೆ ತನ್ನ ಸೈನಿಕರನ್ನು ಕಳಿಸುತ್ತಾನೆ. ಆದರೆ ಈ ಊರಿನ ಅಮೃತ ದೇವಿ ಬಿಷ್ಣೋಯಿ ಎಂಬ ಮಹಿಳೆ ಮರ ಕಡಿಯಲು ವಿರೋಧಿಸುತ್ತಾಳೆ. ಇವಳೊಂದಿಗೆ ಸುಮಾರು 360 ಜನ ಬಿಷ್ಣೋಯಿಗಳು ಮರ ಕಡಿಯಲು ವಿರೋಧಿಸಿ ಮರಗಳನ್ನು ತಬ್ಬಿಕೊಳ್ಳುತ್ತಾರೆ. ಆದರೆ ಸೈನಿಕರು ಎಲ್ಲಾ ಜನರನ್ನು ಕೊಲ್ಲುತ್ತಾರೆ. ಈ ವರ್ಗದ ಪರಿಸರ ಪ್ರೇಮಕ್ಕೆ ಅಮೃತ ದೇವಿ ಬಿಷ್ಣೋಯಿ ಅವರ ಹೆಸರಿನಲ್ಲಿ ಇಂದಿಗೂ ಕೇಂದ್ರ ಸರ್ಕಾರ ಪ್ರತಿ ವರ್ಷ Wild life protection award ನೀಡಿ ಸನ್ಮಾನಿಸುತ್ತಿದೆ. ಈ ಚಳುವಳಿಯೆ ಸ್ವತಂತ್ರ ಭಾರತದಲ್ಲಿ ನಡೆದ ಚಿಪ್ಕೋ ಮತ್ತು ಅಪ್ಪಿಕೋ ಚಳುವಳಿಗೆ ಪ್ರೇರಣೆಯಾಗಿದೆ.

ಕೃಷ್ಣಮೃಗ ಬೇಟೆಯಾಡಿದ ಸಲ್ಮಾನ್ ಹಿಂದೆ ಬಿದ್ದ ಲಾರೆನ್ಸ್ ಬಿಷ್ಣೋಯ್

ಭಾರತ ಮತ್ತು ನೇಪಾಳದಲ್ಲಿ ಕಾಣಸಿಗುವ ಈ ಪ್ರಾಣಿ ಹೆಚ್ಚಾಗಿ ರಾಜಸ್ಥಾನದ ಬಿಷ್ಣೋಯಿಗಳು ವಾಸಿಸುವ ಜಾಗದಲ್ಲಿ ಹೆಚ್ಚು ಕಾಣಸಿಗುತ್ತವೆ. ಬಿಷ್ಣೋಯಿಗಳು ತಾವು ಸತ್ತ ನಂತರ ಜಿಂಕೆಗಳಾಗಿ ಜನಿಸುತ್ತೇವೆ ಎಂದು ನಂಬಿದ್ದಾರೆ. ಇದರ ಜೊತೆಗೆ ಥಾರ್ ಮರುಭೂಮಿಯಲ್ಲಿ ಜೀವ ಸಂಕುಲಗಳನ್ನು ಕಾಪಾಡುವುದು ನಮ್ಮ ಕರ್ತವ್ಯವೆಂದು ಬಿಷ್ಣೋಯಿಗಳು ನಂಬಿದ್ದಾರೆ. ಇವರ ಈ ಜಿಂಕೆಯನ್ನು ಎಷ್ಟರ ಮಟ್ಟಿಗೆ ಕಾಪಾಡುತ್ತಾರೆ ಎಂದರೆ ಒಬ್ಬ ಮಹಿಳೆ ಅಸ್ವಸ್ಥವಾಗಿದ್ದ ಅನಾಥ ಜಿಂಕೆ ಮರಿಗೆ ಖುದ್ದು ತಾವೇ ಎದೆ ಹಾಲು ಉಣಿಸುವ ವರದಿಯನ್ನು ಸಹ ಕಂಡಿದ್ದೇವೆ.

ಜಿಂಕೆಗಳ ಮೇಲೆ ಇಷ್ಟೊಂದು ಪ್ರೀತಿ ಹೊಂದಿರುವ ಈ ಸಮುದಾಯ ಇವುಗಳನ್ನು ಮಕ್ಕಳಂತೆ ಸಾಕುತ್ತಾರೆ. ಆದರೆ ಸಲ್ಮಾನ್ ಖಾನ್ 1998ರಲ್ಲಿ ಇದೇ ಜಾಗದಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪ ಎದುರಿಸುತ್ತಿದ್ದಾರೆ.  ಇದೇ ಆರೋಪಕ್ಕೆ ಇವರನ್ನು 2006ರಲ್ಲಿ ಮತ್ತು 2018 ರಲ್ಲಿ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ. ಇದೇ ಕಾರಣಕ್ಕೆ ಇವನನ್ನು ಕೊಲೆ ಮಾಡಲು ಲಾರೆನ್ಸ್ ಬಿಷ್ಣೋಯಿ ಯತ್ನಿಸುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಬಿಷ್ಣೋಯಿ ತತ್ವಗಳಲ್ಲಿ ಕೊಲೆ ಮಾಡುವುದು ಹಿಂಸೆ ಮಾಡುವುದು, ಮಾದಕ ವಸ್ತುಗಳನ್ನು ಸೇವಿಸುವುದು ತಪ್ಪು ಎಂದು ಹೇಳಲಾಗಿದ್ದರು ಸಹ ಈತ ಮತ್ತು ಈತನ ಗ್ಯಾಂಗ್ ಇಂತಹ ಕೃತ್ಯಗಳನ್ನು ಮಾಡುತ್ತಿದೆ.

ಈ ರೀತಿಯಾಗಿ ಬಿಷ್ಣೋಯಿ ಸಮುದಾಯ ಹೆಚ್ಚು ಜನಪ್ರಿಯವಾಗಿದ್ದು. ಭಾರತದಲ್ಲಿರುವ ಪ್ರಖ್ಯಾತ ಪರಿಸರವಾದಿ ಸಮುದಾಯವಾಗಿ ಗುರುತಿಸಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments