Saturday, August 23, 2025
Google search engine
HomeUncategorizedಪ್ರೀತಿಯ ಹೊಸ ಅಧ್ಯಾಯದೊಂದಿಗೆ ನಿಮ್ಮ ಮುಂದೆ ಬರ್ತಿದೆ 'ನೀನಾದೆ ನಾ'

ಪ್ರೀತಿಯ ಹೊಸ ಅಧ್ಯಾಯದೊಂದಿಗೆ ನಿಮ್ಮ ಮುಂದೆ ಬರ್ತಿದೆ ‘ನೀನಾದೆ ನಾ’

ಕನ್ನಡ ಕಿರುತೆರೆ ವೀಕ್ಷಕರ ಮನ ಮಿಡಿತವನ್ನು ಅರ್ಥೈಸಿಕೊಂಡು ಮನರಂಜನೆಯಲ್ಲಿ ಹೊಸ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ತನ್ನ ವೀಕ್ಷಕರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಪ್ರೇಕ್ಷಕರ ಮನಗೆದ್ದು ಮನೆ ಮಾತಾಗಿರುವ ‘ನೀನಾದೆ ನಾ’ ಧಾರಾವಾಹಿಯು ಇದೀಗ ಅದೇ ಜೋಡಿಯೊಂದಿಗೆ ಪ್ರೀತಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲು ಸಜ್ಜಾಗಿದೆ.

ಈ ಹೊಸ ಕಥೆಯ ಅಧ್ಯಾಯವು ಕರ್ನಾಟಕದ ಸುಂದರ ತಾಣ ದೈವಾರಾಧನೆಯ ತವರೂರಾಗಿರುವ ತುಳುನಾಡಿನಲ್ಲಿ ಆರಂಭವಾಗುತ್ತದೆ. ನಾಯಕ ವಿಕ್ರಂ ದಂಧೆ ನಡೆಸುತ್ತಾ, ಗೂಂಡಾಗಿರಿ ಮಾಡಿಕೊಂಡು ಕುಡ್ಲದ ಕರುಣಾಕರ್ ಶೆಟ್ಟಿ ಎಂಬ ಡಾನ್ ನ ಬಲಗೈ ಬಂಟನಾಗಿರ್ತಾನೆ. ಇನ್ನು ಕಥಾ ನಾಯಕಿ ವೇದಾ ಸಂಪ್ರದಾಯಸ್ಥ ಮನೆತನದ ಮಗಳಾಗಿದ್ದು, ಉಡುಪಿ ಕೃಷ್ಣನ ಭಕ್ತೆಯಾಗಿರ್ತಾಳೆ. ಜೊತೆಗೆ ಬೇರೆ ಬೇರೆ ರೀತಿಯ ವಸ್ತ್ರಗಳಿರುವ ಕಾಸ್ಟ್ಯೂಮ್ ಅಂಗಡಿಯನ್ನು ಹೊಂದಿರುತ್ತಾಳೆ. ಒಂದ್ಕಡೆ ರೌಡಿಯಾಗಿದ್ರು ಒಳ್ಳೇದನ್ನೆ ಮಾಡೋ ವಿಕ್ರಂ, ಇನ್ನೊಂದ್ಕಡೆ ನೇರ ನಡೆಯನ್ನು ಹೊಂದಿದ್ದು ಯಾವ ಸವಾಲಿಗೂ ಸೈ ಅನ್ನೋ ವೇದಾ. ಇವರಿಬ್ಬರು ಹೇಗೆ ಒಂದಾಗ್ತಾರೆ ? ಈ ಎರಡು ವಿರುದ್ಧ ಮನಸುಗಳ ಸೆಣಸಾಟವೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಹಳೆ ಹೆಸರಿನಲ್ಲಿ ಹೊಸ ಕಥೆಯೊಂದಿಗೆ ಶುರುವಾಗುತ್ತಿರುವ ಈ ಧಾರಾವಾಹಿಯು ಅದ್ಬುತ ತಾರಾಬಳಗವನ್ನು ಹೊಂದಿದ್ದು, ನಾಯಕನಾಗಿ ದಿಲೀಪ್ ಶೆಟ್ಟಿ, ನಾಯಕಿಯಾಗಿ ಖುಷಿ ಶಿವು ಅಭಿನಯಿಸುತ್ತಿದ್ದಾರೆ. ನೀವು ಮೆಚ್ಚಿರುವ ವಿಕ್ರಂ-ವೇದಾ ಜೋಡಿ ಹೊಸ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ. ಪ್ರಸ್ತುತ ‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿಯನ್ನು ನಿರ್ಮಿಸುತ್ತಿರುವ ಪ್ರೀತಮ್ ಶೆಟ್ಟಿ ರವರು ‘ಪಿಂಗಾರ ಪ್ರೊಡಕ್ಷನ್’ ಎಂಬ ಸಂಸ್ಥೆಯಡಿ ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

ಹೊಸ ಕಥೆಯ ಜೊತೆ ವಿಕ್ರಂ-ವೇದಾರ ಸೆಣಸಾಟದೊಂದಿಗೆ ಶುರುವಾಗ್ತಿದೆ “ನೀನಾದೆ ನಾ” ಪ್ರೀತಿಯ ಹೊಸ ಅಧ್ಯಾಯ ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆ ತಪ್ಪದೇ ವೀಕ್ಷಿಸಿ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments