Wednesday, August 27, 2025
HomeUncategorizedಬಾಕ್ಸ್​​​ ಆಫೀಸ್​​​ನಲ್ಲಿ ಕಲ್ಕಿ ಅಬ್ಬರ; 4 ದಿನಕ್ಕೆ 500 ಕೋಟಿ ಗಳಿಕೆ

ಬಾಕ್ಸ್​​​ ಆಫೀಸ್​​​ನಲ್ಲಿ ಕಲ್ಕಿ ಅಬ್ಬರ; 4 ದಿನಕ್ಕೆ 500 ಕೋಟಿ ಗಳಿಕೆ

ಕಲ್ಕಿ 2898 AD ಸಿನಿಮಾ 4 ದಿನದಲ್ಲಿ ವಿಶ್ವದಾದ್ಯಂತ 500 ಕೋಟಿ ಹೆಚ್ಚುಗಳಿಸಿದೆ.. ಜೂನ್ 27ರಂದು ನಾಗ್ ಅಶ್ವಿನ್ ಅವರ ಕಲ್ಕಿ 2898 AD ಚಿತ್ರ ಬಿಡುಗಡೆಯಾಗಿತ್ತು, ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್‌ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ಈ ಚಿತ್ರ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ 300.6 ಕೋಟಿ ರೂ. ಗಳಿಸಿದೆ. ಇನ್ನು ಭಾನುವಾರ ಈ ಸಿನಿಮಾ 83.2 ಕೋಟಿ ರೂಪಾಯಿ ಗಳಿಸಿದೆ.

ಕಲ್ಕಿ 2898 AD ತನ್ನ ಆರಂಭಿಕ ದಿನದಲ್ಲಿ 95.3 ಕೋಟಿ ರೂ. ಮತ್ತು ಶುಕ್ರವಾರ 57.6 ಕೋಟಿ ರೂ. ಭಾರತದಲ್ಲಿ ಗಳಿಸಿತು. ಶನಿವಾರ 67.1 ಕೋಟಿ ರೂ. ಮತ್ತು ಭಾನುವಾರ 83.2 ಕೋಟಿ ರೂ. ಗಳಿಸಿದ ಈ ಚಿತ್ರ ಬಾಕ್ಸ್​​​ ಆಫೀಸ್​​​ನಲ್ಲಿ ಸದ್ದು ಮಾಡುತ್ತಿದೆ.. ಚಿತ್ರದ ಒಟ್ಟು ಮೊತ್ತ 300.6 ಕೋಟಿ ರೂ. ಆಗಿದೆ. ವಿಶ್ವಾದ್ಯಂತ ಮೂರು ದಿನಗಳಲ್ಲಿ ಚಿತ್ರ 415 ಕೋಟಿ ಗಳಿಸಿದೆ. ವಾರದ ದಿನಗಳಲ್ಲೂ ಚಿತ್ರ ತನ್ನ ಯಶಸ್ವಿ ಪ್ರದರ್ಶನವನ್ನು ಉಳಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಕಲ್ಕಿ 2898 AD ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲಿ ಮತ್ತು ಹಿಂದಿಯಲ್ಲಿ 2D ಮತ್ತು 3D ನಲ್ಲಿ ಬಿಡುಗಡೆಯಾಯಿತು.

ಕರ್ನಾಟಕದಲ್ಲಿ ಕಲ್ಕಿ ಸಿನಿಮಾ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕನ್ನಡದಲ್ಲಿ ದೊಡ್ಡ ಸಿನಿಮಾಗಳು ಇಲ್ಲದೇ ಇರುವುದರಿಂದ ಕರ್ನಾಟಕದಲ್ಲಿ ಸುಮಾರು 444 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 219 ಸ್ಕ್ರೀನ್‌ಗಳಲ್ಲಿ ತೆಲುಗು, 100 ಸ್ಕ್ರೀನ್‌ಗಳಲ್ಲಿ ಕನ್ನಡ, 85 ಸ್ಕ್ರೀನ್‌ಗಳಲ್ಲಿ ಹಿಂದಿ, 40 ಸ್ಕ್ರೀನ್‌ಗಳಲ್ಲಿ ತಮಿಳು ಭಾಷೆಯ ಕಲ್ಕಿ ರಿಲೀಸ್ ಆಗಿದ್ದವು. ಈ ನಾಲ್ಕು ಭಾಷೆಗಳಿಂದ ಕರ್ನಾಟಕದಲ್ಲಿ ‘ಕಲ್ಕಿ2898 AD’ ಗಳಿಸಿದ್ದು ಬರೋಬ್ಬರಿ 6.7 ಕೋಟಿ ರೂಪಾಯಿ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಕೊಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments