ಬೆಂಗಳೂರು : ಬೆಂಗಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ಜಪಾನ್ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದ್ದು
ಸುಗಮ ಸಂಚಾರ ನಿರ್ವಹಣೆಗಾಗಿ ಇತ್ತೀಚೆಗೆ ಬೆಂಗಳೂರಿನ ಹಲಸೂರು ಬಳಿಯ ಕೆನ್ಸಿಂಗ್ಟನ್ ರಸ್ತೆ ಮತ್ತು ಮರ್ಫಿ ರಸ್ತೆಯ ಜಂಕ್ಷನ್ಗಳಲ್ಲಿ ಜಪಾನೀಸ್ ತಂತ್ರಜ್ಞಾನ ಮೋಡರೇಟೊ ಆಧರಿಸಿದ ಹೊಸ ಟ್ರಾಫಿಕ್ ಸಿಗ್ನಲಿಂಗ್ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ಇದನ್ನೂ ಓದಿ: ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಭಾವಚಿತ್ರ ಅನಾವರಣ; ಫೆ.17ರಿಂದ ಕಚೇರಿಗಳಲ್ಲಿ ಫೋಟೋ ಅಳವಡಿಕೆ
ಇದು ವಾಹನಗಳು ಮತ್ತು ಪಾದಚಾರಿಗಳನ್ನು ನಿಯಂತ್ರಿಸಲು ನೆರವಾಗುತ್ತಿದೆ. ಪ್ರತಿ ಜಂಕ್ಷನ್ನಲ್ಲಿರುವ ವಾಹನಗಳ ದಟ್ಟಣೆಯ ಆಧಾರದ ಮೇಲೆ ಸಿಗ್ನಲ್ ಸಮಯವನ್ನು ಕ್ರಿಯಾತ್ಮಕವಾಗಿ ಹೊಂದಿಸುವ ಮೂಲಕ ಸಂಚಾರ ನಿರ್ವಹಣೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.
ಈ ಅತ್ಯಾಧುನಿಕ ಟ್ರಾಫಿಕ್ ಸಿಗ್ನಲ್ಗಳ ಅಳವಡಿಕೆ ವಿವಿಧ ಕಾರಣಗಳಿಂದಾಗಿ ತುಸು ವಿಳಂಬವಾಗಿತ್ತು. ಇದೀಗ ಅವು ಎಂಜಿ ರಸ್ತೆ, ಹೊಸೂರು ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆಯಲ್ಲಿರುವ 28 ಪ್ರಮುಖ ಜಂಕ್ಷನ್ಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧವಾಗಿವೆ.