Saturday, August 23, 2025
Google search engine
HomeUncategorizedಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಗುಂಡೇಟು; ಉದ್ಧವ್ ಠಾಕ್ರೆ ಬಣದ ನಾಯಕ ಮೃತ್ಯು

ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಗುಂಡೇಟು; ಉದ್ಧವ್ ಠಾಕ್ರೆ ಬಣದ ನಾಯಕ ಮೃತ್ಯು

ಮುಂಬೈ: ಗುರುವಾರ ಮುಂಬೈನ ದಹಿಸರ್ ಪ್ರದೇಶದಲ್ಲಿ ಶಿವಸೇನೆ (ಯುಬಿಟಿ) ಮುಖಂಡರೊಬ್ಬರು ಫೇಸ್‌ಬುಕ್ ಲೈವ್‌ ಸ್ಟ್ರೀಮ್ ಮಾಡುತ್ತಿದ್ದಾಗ, ಗುಂಡೇಟಿನಿಂದ ಮೃತಪಟ್ಟಿದ್ದಾರೆ ಎಂದು ಇಂಡಿಯಾ ಟು ಡೇ ವರದಿ ಮಾಡಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಶಿವಸೇನಾ (ಯುಬಿಟಿ) ನಾಯಕ ವಿನೋದ್ ಘೋಸಲ್ಕರ್ ಅವರ ಪುತ್ರ ಮತ್ತು ಮಾಜಿ ಕಾರ್ಪೊರೇಟ‌ರ್ ಅಭಿಷೇಕ್ ಘೋಸಲ್ಕರ್ ಅವರು ಮಾರಿಸ್ ಭಾಯ್ ಎಂದೂ ಕರೆಯಲ್ಪಡುವ ಮಾರಿಸ್ ನೊರೊನ್ಹಾ ಅವರೊಂದಿಗೆ ಫೇಸ್‌ಬುಕ್ ಲೈವ್‌ ಸ್ಟ್ರೀಮ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಮಾರಿಸ್ ನೊರೊನ್ಹಾ ಲೈವ್‌ ಸ್ಟ್ರೀಮ್ ಅನ್ನು ತೊರೆದ ಬಳಿಕ, ಘೋಸಲ್ಕರ್ ಮೇಲೆ ಮೂರು ಬಾರಿ ಗುಂಡು ಹಾರಿಸಿದರು ಎನ್ನಲಾಗಿದೆ. ಇದಾದ ನಂತರ ಮಾರಿಸ್ ಭಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮಾರಿಸ್ ನೊರೊನ್ಹಾ ಬೊರಿವಲಿ ವೆಸ್ಟ್ ನಿವಾಸಿಯಾಗಿದ್ದು, ಸಮಾಜ ಸೇವಕನಾಗಿದ್ದ ಎನ್ನಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನು ಹೊಂದಿದ್ದ ಎಂದು ತಿಳಿದು ಬಂದಿದೆ. ಆತ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ರಾಜಕಾರಣಿಗಳೊಂದಿಗಿನ ಅನೇಕ ಚಿತ್ರಗಳನ್ನು ಹಂಚಿಕೊಂಡಿದ್ದಾನೆ.

ಪೊಲೀಸರ ಪ್ರಕಾರ, ಅಭಿಷೇಕ್ ಘೋಸಲ್ಕರ್ ಮತ್ತು ಮೌರಿಸ್ ನೊರೊನ್ಹಾ ಪರಸ್ಪರ ಅಕ್ಕಪಕ್ಕದಲ್ಲಿ ಕಚೇರಿಗಳನ್ನು ಹೊಂದಿದ್ದರು. ಸ್ಥಳೀಯ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಲು ಅವರ ನಡುವೆ ಜಗಳ ನಡೆದಿದೆ ಎಂದು ಸ್ಥಳೀಯರು ಇಂಡಿಯಾ ಟುಡೇ ಟಿವಿಗೆ ತಿಳಿಸಿದ್ದಾರೆ.

“ಮಹಾರಾಷ್ಟ್ರದಲ್ಲಿ ಗುಂಡ ರಾಜ್. ಅಭಿಷೇಕ್ ಘೋಸಲ್ಕರ್‌ಗೆ ಗುಂಡು ಹಾರಿಸಿದ ಮೌರಿಸ್ ನೊರೊನ್ಹಾ ನಾಲ್ಕು ದಿನಗಳ ಹಿಂದೆ ‘ವರ್ಷ’ ಬಂಗಲೆಯಲ್ಲಿದ್ದರು.ಅಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದರು.

ಶಿಂಧೆ ಸೇನೆಗೆ ಸೇರಲು ಮೋರಿಸ್ ಅವರನ್ನು ಆಹ್ವಾನಿಸಲಾಯಿತು. ಫಡ್ನವಿಸ್ ಗೃಹ ಸಚಿವರಾಗಿ ಸಂಪೂರ್ಣ ವಿಫಲರಾಗಿದ್ದಾರೆ. ಅವರು ರಾಜೀನಾಮೆ ನೀಡಬೇಕು!” X ನಲ್ಲಿನ ಪೋಸ್ಟ್‌ನಲ್ಲಿ ಶಿವಸೇನಾ (UBT) ನಾಯಕ ಸಂಜಯ್ ರಾವುತ್.

ಇತ್ತೀಚೆಗಷ್ಟೇ ಮಹಾರಾಷ್ಟ್ರದ ಉಲ್ಲಾಸ್‌ನಗರದಲ್ಲಿ ಬಿಜೆಪಿ ಶಾಸಕ ಗಣಪತ್ ಗಾಯಕ್‌ವಾಡ್ ಅವರು ಹಿಲ್‌ಲೈನ್ ಪೊಲೀಸ್ ಠಾಣೆಯಲ್ಲಿ ಶಿವಸೇನೆ ಮುಖಂಡ ಮಹೇಶ್ ಗಾಯಕ್‌ವಾಡ್ ಮೇಲೆ ಗುಂಡು ಹಾರಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments