Saturday, August 23, 2025
Google search engine
HomeUncategorized4,500 ಗಡಿ ದಾಟಿದ ಸಕ್ರಿಯ ಕೊರೋನಾ ಪ್ರಕರಣ : ಮೈಸೂರು, ಹರಿಯಾಣದಲ್ಲಿ ತಲಾ ಒಂದು ಸಾವು

4,500 ಗಡಿ ದಾಟಿದ ಸಕ್ರಿಯ ಕೊರೋನಾ ಪ್ರಕರಣ : ಮೈಸೂರು, ಹರಿಯಾಣದಲ್ಲಿ ತಲಾ ಒಂದು ಸಾವು

ಬೆಂಗಳೂರು : ದೇಶದಲ್ಲಿ ಇಂದು ಹೊಸದಾಗಿ 573 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 4,565ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಈ ಪೈಕಿ ಕರ್ನಾಟಕದ ಮೈಸೂರಿನಲ್ಲಿ ಹಾಗೂ ಹರಿಯಾಣದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಜ್ಯದಲ್ಲಿ ಕಳೆದ ದಿನ 296 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲೇ ಕೊರೋನಾ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಸೋಮವಾರ 131 ಕೊರೋನಾ ಕೇಸ್ ದಾಖಲಾಗಿವೆ.

ಮೈಸೂರು 29 ಪಾಸಿಟಿವ್ ಪತ್ತೆ

ರಾಜ್ಯದಲ್ಲಿ 296 ಕೊರೊನಾ ಪ್ರಕರಣಗಳ ಪೈಕಿ ಬೆಂಗಳೂರು ಗ್ರಾಮಾಂತರ 5, ಚಾಮರಾಜನಗರ 5, ದಾವಣಗೆರೆ 4, ಧಾರವಾಡ 4, ಕಲಬುರಗಿ 4, ಕೊಪ್ಪಳ 4, ಮೈಸೂರು 29, ಹಾಸನ 17, ತುಮಕೂರು 16, ದಕ್ಷಿಣ ಕನ್ನಡ 13, ಬಳ್ಳಾರಿ 11, ಮಂಡ್ಯ 9, ಕೋಲಾರ 7, ಚಿಕ್ಕಬಳ್ಳಾಪುರ 6 ಗದಗ 6, ವಿಜಯನಗರ 4 ಪ್ರಕರಣಗಳು ದಾಖಲಾಗಿವೆ.

ಭಾನುವಾರ 5,021 ಜನರನ್ನು ರಾಜ್ಯದಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 1,245 ಜನರಿಗೆ ಕೊರೊನಾ ದೃಢಪಟ್ಟಿದೆ. 50 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments