Wednesday, August 27, 2025
Google search engine
HomeUncategorizedಅಕ್ರಮ ಸಂಬಂಧ : ಪುಟ್ಟ ಮಗುವನ್ನೇ ನದಿಗೆ ಎಸೆದ ಪಾಪಿ ತಾಯಿ

ಅಕ್ರಮ ಸಂಬಂಧ : ಪುಟ್ಟ ಮಗುವನ್ನೇ ನದಿಗೆ ಎಸೆದ ಪಾಪಿ ತಾಯಿ

ಬೆಂಗಳೂರು: ಮನೆಗೆ ಒಂದು ಮಗುಬೇಕು ಎಂದು ಅದೆಷ್ಟೊಂದು ಜನರು ದೇವರಿಗೆ ಹರೆಕೆ ಹೊತ್ತಿರುವುದನ್ನು ನೋಡಿರುತ್ತಾವೆ. ಆದರೆ ಇಲ್ಲೊಬ್ಬ ಪಾಪಿ ತಾಯಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕಾಗಿ ಒಂದು ವರ್ಷ ಮೂರು ತಿಂಗಳ ಮಗುವನ್ನೇ ನದಿಗೆ ಎಸೆದು ಕೊಲೆ ಮಾಡಿದ್ದಾಳೆ.

ಈ ಘಟನೆ ನಡೆದಿರುವುದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬಾಣಗಳ್ಳಿ ಗ್ರಾಮದ ಬಳಿ. ಭಾಗ್ಯಮ್ಮ (21) ಎಂಬಾಕೆ ಚನ್ನಪಟ್ಟಣ ಹಾದು ಹೋಗುವ ಕಣ್ವ ನದಿಗೆ ತನ್ನ ಮಗುವನ್ನು ಎಸೆದಿದ್ದಾಳೆ.

ಏನಿದು ಅಕ್ರಮ ಸಂಬಂಧದ ಕಥೆ?

ಭಾಗ್ಯಮ್ಮ ಎಂಬಾಕೆ ಎರಡು ಮೂರು ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ, ಸಂಸಾರ ನೆಟ್ಟಗೆ ಮಾಡದ ಆಕೆ ಗಂಡನನ್ನು ಬಿಟ್ಟು ತವರು ಮನೆ ಸೇರಿಕೊಂಡಿದ್ದಳು. ಆದರೆ, ಅಷ್ಟು ಹೊತ್ತಿಗೆ ಒಂದು ಮಗು ಹುಟ್ಟಿತ್ತು. ದೇವರಾಜ್‌ ಈಗ ಒಂದು ವರ್ಷ ಮೂರು ತಿಂಗಳ ಮಗು.

ಇತ್ತ ತವರಿಗೆ ಬಂದ ಭಾಗ್ಯಮ್ಮನಿಗೆ ಅಲ್ಲೇ ಒಂದು ಅಕ್ರಮ ಸಂಬಂಧ ಕುದುರುತ್ತದೆ. ಆಕೆ ಸುಖದಲ್ಲಿ ತೇಲಾಡುತ್ತಾ ಇರುತ್ತಾಳೆ. ಈ ನಡುವೆ ಭಾಗ್ಯಮ್ಮನ ತಾಯಿ ಆಕೆಯ ಈ ನಡತೆಯನ್ನು ಆಕ್ಷೇಪಿಸುತ್ತಾಳೆ. ಮನೆಯಲ್ಲಿ ದಿನವೂ ಜಗಳ ನಡೆಯುತ್ತಿರುತ್ತದೆ. ನೀನು ಮಗುವನ್ನು ಬಿಟ್ಟು ಸುತ್ತಾಡಲು ಹೋಗುತ್ತೀಯಾ, ನಾನು ಅದನ್ನು ಸಾಕಬೇಕು ಎಂದು ತಾಯಿ ಬೈದಿರುತ್ತಾಳೆ.
ಇತ್ತ ಹೊಸದಾಗಿ ಪರಿಚಯವಾಗಿ ಅಕ್ರಮ ಸಂಬಂಧ ಹುಟ್ಟಿಸಿಕೊಂಡವನಿಗೂ ಈ ಮಗು ವಿಚಾರದಲ್ಲೇ ತಕರಾರು. ಆತನೂ ನನಗೆ ನೀನು ಬೇಕು, ಆದರೆ ಮಗು ಬೇಡ ಎಂದು ವರಾತ ತೆಗೆದಿರುತ್ತಾನೆ. ಇಷ್ಟು ಹೊತ್ತಿಗೆ ತನ್ನ ಅಕ್ರಮ ಸಂಬಂಧವನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕು ಎಂದು ನಿರ್ಧರಿಸುವ ಭಾಗ್ಯಮ್ಮ ಕೇವಲ ಒಂದು ವರ್ಷದ ಮೂರು ತಿಂಗಳ ಹಸುಗೂಸಿನ ಪ್ರಾಣವನ್ನೇ ತೆಗೆಯಲು ಮುಂದಾಗುತ್ತಾಳೆ.

ಮಂಗಳವಾರ ರಾತ್ರಿ 7.30ರ ಹೊತ್ತಿಗೆ ಭಾಗ್ಯಮ್ಮ ಬಟ್ಟೆ ತೊಳೆಯುವ ನೆಪದಲ್ಲಿ ಕಾಲಿಕೆರೆಯ ಕಣ್ವ ನದಿ ತೀರಕ್ಕೆ ಬಂದಿದ್ದಳು. ಅಲ್ಲಿ ಮಗುವನ್ನು ನದಿಗೆ ಎಸೆದು ಅಲ್ಲಿಂದ ಕಾಲಿಕೆರೆ ದೇವಸ್ಥಾನದ ಬಳಿಗೆ ಓಡಿ ಬಂದು ಗೋಳಾಡಲು ಶುರು ಮಾಡುತ್ತಾಳೆ. ಮಗು ನೀರಿಗೆ ಬಿತ್ತು ಎಂದೆಲ್ಲ ಹೇಳುತ್ತಾಳೆ. ಅಲ್ಲಿನ ಜನರು ಕೂಡಲೇ ಓಡಿ ಹೋಗಿ ಮಗುವನ್ನು ಹುಡುಕುತ್ತಾರೆ. ಆದರೆ, ಮುಳುಗಿದ ಮಗು ಸಿಕ್ಕಿರಲಿಲ್ಲ. ಬುಧವಾರ ಮುಂಜಾನೆಯಷ್ಟೇ ಅದು ಸಿಕ್ಕಿದೆ.

ಇದನ್ನೂ ಓದಿ: ಲಾರಿಗೆ ಕಾರು ಡಿಕ್ಕಿ: ಅಮೆಜಾನ್‌ ಕಂಪನಿ ಮ್ಯಾನೇಜರ್‌ ಸ್ಥಳದಲ್ಲೇ ಸಾವು

ಈ ನಡುವೆ, ಆಕೆಯ ಅಕ್ರಮ ಸಂಬಂಧ, ಮನೆಯಲ್ಲಿ ನಿತ್ಯ ನಡೆಯುತ್ತಿರುವ ಜಗಳದ ವಿಚಾರವನ್ನು ಪೊಲೀಸರಿಗೆ ತಿಳಿಸಿದಾಗ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಇದೊಂದು ಅಕಸ್ಮಿಕ ಸಾವಲ್ಲ, ಕೊಲೆ ಎಂದು ತಿಳಿದುಬರುತ್ತದೆ.

ಡಿವೈಎಸ್‌ಪಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಭಾಗ್ಯಳನ್ನು ವಿಚಾರಣೆಗೆ ಒಳಪಡಿಸಿದರು. ಅಕ್ಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ.

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments