Sunday, August 24, 2025
Google search engine
HomeUncategorizedPSI ಮರು ಪರೀಕ್ಷೆ ಮುಂದೂಡಿಕೆ, ಜ.23ಕ್ಕೆ ದಿನಾಂಕ ನಿಗದಿ

PSI ಮರು ಪರೀಕ್ಷೆ ಮುಂದೂಡಿಕೆ, ಜ.23ಕ್ಕೆ ದಿನಾಂಕ ನಿಗದಿ

ಬೆಂಗಳೂರು : ಪಿಎಸ್‌ಐ ಪರೀಕ್ಷೆ ಅಭ್ಯರ್ಥಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಒಂದು ತಿಂಗಳು ಪರೀಕ್ಷೆ ದಿನಾಂಕವನ್ನ ಮುಂದೂಡಿದೆ.

ಡಿಸೆಂಬರ್​​ 23ರ ಬದಲು ಜನವರಿ 23ಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಸದನದಲ್ಲಿ ಪಿಎಸ್‌ಐ ಮರು ಪರೀಕ್ಷೆ ದಿನಾಂಕವನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಘೋಷಿಸಿದ್ದಾರೆ. ಓದಲು ಸಮಯಾವಕಾಶ ನೀಡಿಲ್ಲ, ಪರೀಕ್ಷೆ ಮುಂದೂಡಬೇಕೆಂದು ಅಭ್ಯರ್ಥಿಗಳು ಆಗ್ರಹಿಸಿದ್ದರು.

ಕಳೆದ ಬಿಜೆಪಿ ಸರ್ಕಾರದಲ್ಲಿ ಹಗರಣ ನಡೆದಿದ್ದರಿಂದ ರದ್ದಾಗಿದ್ದ ಪಿಎಸ್​ಐ ಪರೀಕ್ಷೆಯನ್ನು ಡಿಸೆಂಬರ್ 23ರಂದು ನಡೆಸಲು ಕೆಇಎ ಉದ್ದೇಶಿಸಿತ್ತು. ಆದರೆ, ಪರೀಕ್ಷೆ ಮುಂದೂಡುವಂತೆ ಸದನದಲ್ಲಿ ಆಡಳಿತ ಹಾಗೂ ವಿಪಕ್ಷ ನಾಯಕರಿಬ್ಬರೂ ಆಗ್ರಹಿಸಿದ ಹಿನ್ನೆಲೆ ಸಚಿವ ಡಾ.ಜಿ. ಪರಮೇಶ್ವರ್ ಅವರು ಸಿಎಂ ಸಿದ್ದರಾಮಯ್ಯನವರ ಜೊತೆ ಚರ್ಚಿಸಿ ಪರೀಕ್ಷೆಯನ್ನು ಮುಂದೂಡಿದ್ದಾರೆ.

ಹಗರಣದ ಹಿನ್ನೆಲೆ ಏನು?

2021ರ ಜನವರಿ 21 ರಂದು 545 ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕಟವಾಗಿತ್ತು. ಅದೇ ವರ್ಷ ಅಕ್ಟೋಬರ್‌ 3 ರಂದು ಪರೀಕ್ಷೆ ನಡೆಸಲಾಯಿತು. ಆದರೆ, ಆಗಿನ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿಯಾಗಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಬಗ್ಗೆ ಅಭ್ಯರ್ಥಿಗಳು ದೂರು ನೀಡಿದರು. 2022ರ ಜನವರಿ 18ರಂದು 545 ಪಿಎಸ್‌ಐ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾದಾಗ ಆಯ್ಕೆ ಪಟ್ಟಿ ತಡೆಗೆ ನೇಮಕಾತಿ ವಿಭಾಗದ ಎಡಿಐಜಿ ಸೂಚನೆ ನೀಡಿದರು. ಈ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಬಂಧನವಾಗಿತ್ತು. ಜತೆಗೆ ಅಕ್ರಮಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments