Sunday, August 24, 2025
Google search engine
HomeUncategorizedCBSE ವಿದ್ಯಾರ್ಥಿಗಳು ಮತ್ತು ಪೋಷಕರು ತಿಳಿದುಕೊಳ್ಳಬೇಕಾದ ಮಹತ್ವದ ಮಾಹಿತಿ!

CBSE ವಿದ್ಯಾರ್ಥಿಗಳು ಮತ್ತು ಪೋಷಕರು ತಿಳಿದುಕೊಳ್ಳಬೇಕಾದ ಮಹತ್ವದ ಮಾಹಿತಿ!

ಬೆಂಗಳೂರು: 10 ಮತ್ತು 12ನೇ ತರಗತಿಗಳ ಬೋರ್ಡ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಆಧರಿಸಿ ವರ್ಗ ಅಥವಾ ಅತ್ಯುನ್ನತ ಶ್ರೇಣಿ ನೀಡುವ ಕ್ರಮವನ್ನು ಕೈ ಬಿಡಲು ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು CBSE ತೀರ್ಮಾನಿಸಿದೆ.

CBSE ಪರೀಕ್ಷಾ ನಿಯಂತ್ರಣಾಧಿಕಾರಿ ಸನ್ಯಾಮ್ ಭಾರಧ್ವಾಜ್ ನೀಡಿದ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ.
ಮಂಡಳಿಯು ಇನ್ನು ಮುಂದೆ ಅಂಕಗಳ ಶೇಕಡವಾರು ಲೆಕ್ಕ ಹಾಕುವುದಿಲ್ಲ, ಪ್ರಕಟಿಸುವುದಿಲ್ಲ, ತಿಳಿಸುವುದಿಲ್ಲ. ಉನ್ನತ ಶಿಕ್ಷಣ ಅಥವಾ ಉದ್ಯೋಗ ನೇಮಕಾತಿಗೆ ಇದರ ಅಗತ್ಯವಿದ್ದಲ್ಲಿ ಪ್ರವೇಶ ನೀಡುವ ಶಿಕ್ಷಣ ಸಂಸ್ಥೆ ಅಥವಾ ಉದ್ಯೋಗದಾತರೇ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜಿಎಸ್​ಟಿ ಸಂಗ್ರಹ ಕರ್ನಾಟಕ ನಂಬರ್​ 2!

ಅಂಕಗಳ ಕ್ರೋಡೀಕರಣ, ಪ್ರಮಾಣವನ್ನು ನಿಗದಿಪಡಿಸಲು ಮಂಡಳಿಯು ಅನುಸರಿಸುವ ಅಳತೆಗೋಲು ಕುರಿತಂತೆ ಹಲವು ವಿದ್ಯಾರ್ಥಿಗಳು ಮಂಡಳಿಗೆ ವಿವರ ಕೇಳಿದ್ದರು ಎಂದೂ ಅವರು ಈ ಕುರಿತ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಮಂಡಳಿಯ ಪರೀಕ್ಷಾ ಬೈ–ಲಾದ ಅಧ್ಯಾಯ 7ರ ಉಪವರ್ಗ 40.1ರ ಅನುಸಾರ ಇನ್ನು ಮುಂದೆ ಒಟ್ಟಾರೆ ಅಂಕಗಳ ಆಧಾರದಲ್ಲಿ ವರ್ಗ, ಅತ್ಯುನ್ನತ ಶ್ರೇಣಿ ಅಥವಾ ಸರಾಸರಿ ಅಂಕಗಳ ವಿವರಗಳನ್ನು ನೀಡಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments