Sunday, August 24, 2025
Google search engine
HomeUncategorizedನಮ್ಮ ಮೆಟ್ರೋದಲ್ಲಿ ಚಿತ್ರೀರಣಕ್ಕೆ ಬಿಎಂಆರ್​ಸಿಎಲ್​ ಗ್ರೀನ್​ ಸಿಗ್ನಲ್!

ನಮ್ಮ ಮೆಟ್ರೋದಲ್ಲಿ ಚಿತ್ರೀರಣಕ್ಕೆ ಬಿಎಂಆರ್​ಸಿಎಲ್​ ಗ್ರೀನ್​ ಸಿಗ್ನಲ್!

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಇನ್ಮುಂದೆ ಚಲನಚಿತ್ರ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದ್ದು ಈ ಮೂಲಕ ಇಷ್ಟು ದಿನ ಮೆಟ್ರೋದಲ್ಲಿ ಚಿತ್ರೀಕರಣಕ್ಕೆ ಇದ್ದ ನಿರ್ಭಂದವನ್ನು ತೆಗೆಯಲು ಬಿಎಂಆರ್​ಸಿಎಲ್​ ನಿರ್ಧರಿಸಿದೆ.

ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಸುರಕ್ಷತೆಗಾಗಿ ಕೆಲವೊಂದು ನಿಬಂಧನೆಗಳನ್ನು ವಿಧಿಸಿ ಬಿಎಂಆರ್​ಸಿಎಲ್ ನಿಯಮಗಳನ್ನು ರೂಪಿಸಿತ್ತು, ಇದೀಗ ಚಿತ್ರೀಕರಣಕ್ಕೆ ಹೆಚ್ಚಿನ ಮಟ್ಟದಲ್ಲಿ ಮನವಿಗಳು ಬಂದ ಹಿನ್ನೆಲೆ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿಲು ಬಿಎಂಆರ್​ಸಿಎಲ್ ನಿರ್ಧಾರ ಮಾಡಿದೆ.​

ಇದನ್ನೂ ಓದಿ: ಕೆಇಎ ಪರೀಕ್ಷೆಯಲ್ಲಿನ ಅಕ್ರಮ : ಮತ್ತೆ 8 ದಿನ ಸಿಐಡಿ ಕಸ್ಟಡಿಗೆ ಆರ್. ಡಿ .ಪಾಟೀಲ್

ಮೆಟ್ರೋ ನಗರಗಳ ಪೈಕಿ ಚನ್ನೈ ಮತ್ತು ದೆಹಲಿಯಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಈಗಾಗಲೆ ಅವಕಾಶ ಕಲ್ಪಿಸಿದ್ದು ಉತ್ತಮ ಚಿತ್ರಗಳು ಹೊರಬರುತ್ತಿದೆ. ಹೀಗಾಗಿ ನಮ್ಮ ಬೆಂಗಳೂರಿನ ನಮ್ಮ ಮೆಟ್ರೋದಲ್ಲೂ ಕನ್ನಡ ಸಿನಿಮಾಗಳು, ಧಾರಾವಾಹಿಗಳು, ಕಿರುಚಿತ್ರ ಚಿತ್ರೀಕರಣಕ್ಕೆ ಅನುಮತಿ ನೀಡುವಂತೆ ಸಾಲು ಸಾಲು ಮನವಿಗಳು ಬಂದ ಹಿನ್ನೆಲೆ ಬಿಎಂಆರ್​ಸಿಎಲ್​ ಮೆಟ್ರೋದಲ್ಲಿ ಅವಕಾಶ ನೀಡಿದೆ.

ಮೆಟ್ರೋದಲ್ಲಿ ಚಿತ್ರೀಕರಿಸಲು ಒಂದು ದಿನಕ್ಕೆ 6 ಲಕ್ಷ ಬಾಡಿಗೆ ನಿಗಧಿಪಡಿಸಿದ್ದು ಕನ್ನಡ ಸಿನಿಮಾಗಳಿಗೆ ಶೇ.25 ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಇದರೊಂದಿಗೆ ಕೆಲವೊಂದು ಷರತ್ತುಗಳನ್ನು ಬಿಎಂಆರ್​​ಸಿಎಲ್ ವಿಧಿಸಿದೆ.

  • ಚಿತ್ರೀಕರಣಕ್ಕೆ ಮೆಟ್ರೋ ಷರತ್ತುಗಳು
    • ಚಿತ್ರೀಕರಣ ಮುನ್ನ ಅರ್ಜಿ, ಸ್ಕಿಪ್ಟ್ ಅನ್ನು ಮೆಟ್ರೋ ಅಧಿಕಾರಿಗಳಿಗೆ ಸಲ್ಲಿಕೆ ಕಡ್ಡಾಯ.
    • ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ಅನುಮತಿಯಿಲ್ಲ.
    • ಚಿತ್ರೀಕರಣದ ವೇಳೆ ಜತೆಯಲ್ಲಿ ಇರಲಿದ್ದಾರೆ ಬಿಎಂಆರ್‌ಸಿಎಲ್‌ನ ಸಿಬ್ಬಂದಿ.
    • ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಚಿತ್ರೀಕರಣವನ್ನು ಮಾಡಬೇಕು
    ಅನುಮತಿ ನೀಡುವ ಸಮಯ, ಸ್ಥಳದಲ್ಲಿ ಮಾತ್ರವೇ ಶೂಟಿಂಗ್ ನಡೆಸಬೇಕು.
    •  ಚಿತ್ರೀಕರಣದ ವೇಳೆ ಸಂಭವಿಸುವ ಯಾವುದೇ ಅವಘಡಗಳಿಗೆ ಚಿತ್ರತಂಡವೇ ಹೊಣೆ
    ಮೆಟ್ರೋಗೆ ಸಂಬಂಧಿಸಿದ ಯಾವುದೇ ವಸ್ತುಗಳಿಗೆ ಹಾನಿಯಾದರೂ ಚಿತ್ರೀಕರಣ ನಡೆಸುವ ಚಿತ್ರತಂಡವೇ ಅದರ ಹಣವನ್ನು ಭರಿಸಬೇಕು.
  • ಚಿತ್ರೀಕರಣಕ್ಕೆ ಅನುಮತಿ ಕೇಳುವ ಭಾರತೀಯ ಚಿತ್ರಗಳು, ಧಾರವಾಹಿಗಳ ತಂಡ 30 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು
  • ಅಂತಾರಾಷ್ಟ್ರೀಯ ಭಾಷೆಗಳ ಚಲನಚಿತ್ರ -ಧಾರವಾಹಿಗಳ ತಂಡ 60 ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು
  • ಮೆಟ್ರೋ ರೈಲಿನಲ್ಲಿ ಚಿತ್ರೀಕರಣ ಮಾಡಲು ಸಮಯ ನಿಗದಿ
    ಬೆಳಗ್ಗೆ 6ರಿಂದ 8 ಗಂಟೆ, ಮಧ್ಯಾಹ್ನ 12ರಿಂದ 2 ಹಾಗೂ ರಾತ್ರಿ 9ರಿಂದ 11 ಗಂಟೆಯವರೆಗೆ ಮಾತ್ರ ಸಮಯ ನಿಗದಿ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments