Site icon PowerTV

ನಮ್ಮ ಮೆಟ್ರೋದಲ್ಲಿ ಚಿತ್ರೀರಣಕ್ಕೆ ಬಿಎಂಆರ್​ಸಿಎಲ್​ ಗ್ರೀನ್​ ಸಿಗ್ನಲ್!

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಇನ್ಮುಂದೆ ಚಲನಚಿತ್ರ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದ್ದು ಈ ಮೂಲಕ ಇಷ್ಟು ದಿನ ಮೆಟ್ರೋದಲ್ಲಿ ಚಿತ್ರೀಕರಣಕ್ಕೆ ಇದ್ದ ನಿರ್ಭಂದವನ್ನು ತೆಗೆಯಲು ಬಿಎಂಆರ್​ಸಿಎಲ್​ ನಿರ್ಧರಿಸಿದೆ.

ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಸುರಕ್ಷತೆಗಾಗಿ ಕೆಲವೊಂದು ನಿಬಂಧನೆಗಳನ್ನು ವಿಧಿಸಿ ಬಿಎಂಆರ್​ಸಿಎಲ್ ನಿಯಮಗಳನ್ನು ರೂಪಿಸಿತ್ತು, ಇದೀಗ ಚಿತ್ರೀಕರಣಕ್ಕೆ ಹೆಚ್ಚಿನ ಮಟ್ಟದಲ್ಲಿ ಮನವಿಗಳು ಬಂದ ಹಿನ್ನೆಲೆ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿಲು ಬಿಎಂಆರ್​ಸಿಎಲ್ ನಿರ್ಧಾರ ಮಾಡಿದೆ.​

ಇದನ್ನೂ ಓದಿ: ಕೆಇಎ ಪರೀಕ್ಷೆಯಲ್ಲಿನ ಅಕ್ರಮ : ಮತ್ತೆ 8 ದಿನ ಸಿಐಡಿ ಕಸ್ಟಡಿಗೆ ಆರ್. ಡಿ .ಪಾಟೀಲ್

ಮೆಟ್ರೋ ನಗರಗಳ ಪೈಕಿ ಚನ್ನೈ ಮತ್ತು ದೆಹಲಿಯಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಈಗಾಗಲೆ ಅವಕಾಶ ಕಲ್ಪಿಸಿದ್ದು ಉತ್ತಮ ಚಿತ್ರಗಳು ಹೊರಬರುತ್ತಿದೆ. ಹೀಗಾಗಿ ನಮ್ಮ ಬೆಂಗಳೂರಿನ ನಮ್ಮ ಮೆಟ್ರೋದಲ್ಲೂ ಕನ್ನಡ ಸಿನಿಮಾಗಳು, ಧಾರಾವಾಹಿಗಳು, ಕಿರುಚಿತ್ರ ಚಿತ್ರೀಕರಣಕ್ಕೆ ಅನುಮತಿ ನೀಡುವಂತೆ ಸಾಲು ಸಾಲು ಮನವಿಗಳು ಬಂದ ಹಿನ್ನೆಲೆ ಬಿಎಂಆರ್​ಸಿಎಲ್​ ಮೆಟ್ರೋದಲ್ಲಿ ಅವಕಾಶ ನೀಡಿದೆ.

ಮೆಟ್ರೋದಲ್ಲಿ ಚಿತ್ರೀಕರಿಸಲು ಒಂದು ದಿನಕ್ಕೆ 6 ಲಕ್ಷ ಬಾಡಿಗೆ ನಿಗಧಿಪಡಿಸಿದ್ದು ಕನ್ನಡ ಸಿನಿಮಾಗಳಿಗೆ ಶೇ.25 ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಇದರೊಂದಿಗೆ ಕೆಲವೊಂದು ಷರತ್ತುಗಳನ್ನು ಬಿಎಂಆರ್​​ಸಿಎಲ್ ವಿಧಿಸಿದೆ.

Exit mobile version