Saturday, August 30, 2025
HomeUncategorizedಚೀನಾದಲ್ಲಿ ಹೈ ಸ್ಪೀಡ್​ ಇಂಟರ್‌ನೆಟ್‌ ಅನಾವರಣ!: ಒಂದು ಸೆಕೆಂಡ್​ ಗೆ 100 ಜಿಬಿ ನೆಟ್!

ಚೀನಾದಲ್ಲಿ ಹೈ ಸ್ಪೀಡ್​ ಇಂಟರ್‌ನೆಟ್‌ ಅನಾವರಣ!: ಒಂದು ಸೆಕೆಂಡ್​ ಗೆ 100 ಜಿಬಿ ನೆಟ್!

ಚೀನಾ: ತಂತ್ರಜ್ಞಾನ ವಲಯದಲ್ಲಿ ಜಗತ್ತಿನ ವೇಗಕ್ಕಿಂತ ಒಂದು ಹೆಜ್ಜೆ ಮುಂದಿರುವ ಚೀನಾ, ಇದೀಗ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್‌ ಅನ್ನು ಅನಾವರಣಗೊಳಿಸಿದೆ.

ಹೊಸ ತಲೆಮಾರಿನ ವೇಗದ ಇಂಟರ್ನೆಟ್‌ ಎಂದೇ ಬಣ್ಣಿಸಲಾಗಿರುವ ಇದರಲ್ಲಿ 1 ಸೆಕೆಂಡ್‌ಗೆ 1.2 ಟೆರಾಬೈಟ್‌ ವೇಗದಲ್ಲಿ ಮಾಹಿತಿ ರವಾನಿಸಬಹುದಾಗಿದೆ. ಅಂದರೆ ಒಂದು ಸೆಕೆಂಡ್‌ಗೆ ಎಚ್‌ಡಿ ಗುಣಮಟ್ಟದ 156 ಚಲನಚಿತ್ರಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ರವಾನಿಸಬಲ್ಲದು. ಇಡೀ ವಿಶ್ವದ ಜೀವನಾಡಿಯಾಗಿರುವ ಇಂಟರ್ನೆಟ್‌ ಸೆಕೆಂಡ್‌ಗೆ 100 ಗಿಗಾಬೈಟ್‌ ವೇಗದಲ್ಲಿ ಮಾಹಿತಿ ರವಾನಿಸುತ್ತಿದೆ.

ಇದನ್ನೂ ಓದಿ: ಪಾಕ್ ನಾಯಕತ್ವಕ್ಕೆ ಬಾಬರ್ ಅಜಂ ರಾಜಿನಾಮೆ!

ಇನ್ನು ಅಮೆರಿಕ ಇತ್ತೀಚೆಗಷ್ಟೇ ತನ್ನ 5ನೇ ತಲೆಮಾರಿನ ಅಂದರೆ ಸೆಕೆಂಡ್‌ಗೆ 400 ಗಿಗಾಬೈಟ್‌ ವೇಗದ ಇಂಟರ್ನೆಟ್‌ ಅನಾವರಣಗೊಳಿಸಿತ್ತು. ಆದರೆ ಚೀನಾ ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ವೇಗಕ್ಕಿಂತ 12 ಪಟ್ಟು ವೇಗದ ಇಂಟರ್ನೆಟ್‌ ವೇಗ ಸಾಧಿಸುವ ಮೂಲಕ ಜಾಗತಿಕ ಕಂಪನಿಗಳಿಗೆ ಸವಾಲು ಎಸೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments