Monday, August 25, 2025
Google search engine
HomeUncategorized5 ವರ್ಷ ಲೂಟಿ ಮಾಡಿದ ಕಾಂಗ್ರೆಸ್ಸಿಗರನ್ನ ಬೀಳ್ಕೊಡುವ ಸಮಯ ಬಂದಿದೆ : ಪ್ರಧಾನಿ ಮೋದಿ

5 ವರ್ಷ ಲೂಟಿ ಮಾಡಿದ ಕಾಂಗ್ರೆಸ್ಸಿಗರನ್ನ ಬೀಳ್ಕೊಡುವ ಸಮಯ ಬಂದಿದೆ : ಪ್ರಧಾನಿ ಮೋದಿ

ಛತ್ತೀಸ್‌ಗಢ : ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. 5 ವರ್ಷಗಳ ಕಾಲ ನಿಮ್ಮನ್ನು ಲೂಟಿ ಮಾಡಿದ ಕಾಂಗ್ರೆಸ್ಸಿಗರನ್ನು ಬೀಳ್ಕೊಡುವ ಸಮಯ ಬಂದಿದೆ ಎಂದು ಕಾಂಗ್ರೆಸ್​ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.

ಛತ್ತೀಸ್ಗಢದ ಮುಂಗೇಲಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ್ ಸಂಕಲ್ಪ ಮಹಾರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಕನಸು ಮೋದಿಯವರ ಸಂಕಲ್ಪ ಎಂದರು.

ಬಿಜೆಪಿಯವರ ಆಗಮನ ಎಂದರೆ.. ಛತ್ತೀಸ್‌ಗಢ ಶೀಘ್ರ ಅಭಿವೃದ್ಧಿ ಹೊಂದಲಿದೆ. ಯುವಕರ ಕನಸುಗಳು ಈಡೇರುತ್ತವೆ. ಇಲ್ಲಿನ ಮಹತಾರಿ ಸಹೋದರಿಯರ ಜೀವನ ಸುಲಭವಾಗಲಿದೆ. ಭ್ರಷ್ಟಾಚಾರ ನಿಯಂತ್ರಣ, ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿಯ ಟ್ರಾಕ್ ರೆಕಾರ್ಡ್ ಹಾಗೂ ಗ್ಯಾರಂಟಿ ಎರಡೂ ಬಿಜೆಪಿಯಿಂದ ರಚಿಸಲ್ಪಟ್ಟಿದೆ ಮತ್ತು ಇದನ್ನು ಬಿಜೆಪಿ ಮಾತ್ರ ಈಡೇರಿಸಲು ಸಾಧ್ಯ ಎಂದು ಹೇಳಿದರು.

ಕಾಂಗ್ರೆಸ್‌ ಸೋಲುತ್ತಿರುವುದು ಸ್ಪಷ್ಟವಾಗಿದೆ

ಇಂದು ನಾನು ಮುಂಗೇಲಿಗೆ, ಮಹಾಮಾಯ ಮಾಯಿಯ ಈ ನಾಡಿಗೆ ಬಂದಿರುವೆ. ಈ ಸುಸಂದರ್ಭದಲ್ಲಿ ಇಡೀ ಛತ್ತೀಸ್‌ಗಢವೇ ಕಾಂಗ್ರೆಸ್‌ನ ದುರಾಡಳಿತ ಕೊನೆಗಾಣಿಸಲಿ ಎಂದು ಕೂಗುತ್ತಿದೆ. ಇದು ಸಂತೋಷದ ಘೋಷಣೆಯಾಗಿದೆ. ಮೊದಲ ಹಂತದಲ್ಲೇ ಕಾಂಗ್ರೆಸ್ ಸೋತಿದೆ. ಮೊದಲ ಹಂತದ ಮತದಾನದಿಂದ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಸೋಲುತ್ತಿರುವುದು ಸ್ಪಷ್ಟವಾಗಿದೆ ಎಂದು ಕುಟುಕಿದರು.

ಡಿಸೆಂಬರ್ 3ರಂದು ಬಿಜೆಪಿ ಬರಲಿದೆ

ನಿನ್ನೆ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಿದ್ದೀರಿ. ಆದರೆ, ಮುಂಬರುವ ದೀಪಾವಳಿ ಛತ್ತೀಸ್‌ಗಢಕ್ಕೆ ಹೊಸ ಸಂತೋಷ ಮತ್ತು ಉತ್ಸಾಹವನ್ನು ತರಲಿದೆ. ಛತ್ತೀಸ್‌ಗಢವನ್ನು ಲೂಟಿ ಮಾಡಿದ ಕಾಂಗ್ರೆಸ್ ಮುಂದಿನ ವರ್ಷದ ದೀಪಾವಳಿಯಲ್ಲಿ ಎಲ್ಲೂ ಕಾಣುವುದಿಲ್ಲ. ಇದು ನನ್ನ ಭರವಸೆ. ಎಲ್ಲೆಡೆ ಒಂದೇ ಪ್ರತಿಧ್ವನಿ ಇದೆ, ಡಿಸೆಂಬರ್ 3ರಂದು ಬಿಜೆಪಿ ಬರಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments