Sunday, August 24, 2025
Google search engine
HomeUncategorizedಛತ್ತೀಸ್​ಗಢ ಅಭಿವೃದ್ಧಿಗಾಗಿ 'ಮೋದಿ ಗ್ಯಾರಂಟಿ' ಎಂಬ ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ : ಅಮಿತ್ ಶಾ

ಛತ್ತೀಸ್​ಗಢ ಅಭಿವೃದ್ಧಿಗಾಗಿ ‘ಮೋದಿ ಗ್ಯಾರಂಟಿ’ ಎಂಬ ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ : ಅಮಿತ್ ಶಾ

ಛತ್ತೀಸ್​ಗಢ : ಲಕ್ಷಗಟ್ಟಲೆ ಜನರೊಂದಿಗೆ ಚರ್ಚಿಸಿ, ಅವರ ಸಲಹೆಗಳನ್ನು ಸ್ವೀಕರಿಸಿದ ನಂತರ ‘ಮೋದಿ ಗ್ಯಾರಂಟಿ’ ಎಂಬ ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಮುಂಬರುವ ಛತ್ತೀಸ್​ಗಢ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸುಳ್ಳು ಪ್ರಚಾರ ಮಾಡುವಲ್ಲಿ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್​ಗೆ ಇಡೀ ದೇಶದಲ್ಲಿ ಯಾರೂ ಸರಿಸಾಟಿ ಇಲ್ಲ. ಅವರಿಗೆ ಬೇಕಾದಂತೆ ಪರಿಸರ ನಿರ್ಮಿಸಿ 5 ವರ್ಷಗಳ ಕಾಲ ಇಲ್ಲಿ ಸರ್ಕಾರ ರಚಿಸಿದರು. ಆದರೆ, ಇದರಲ್ಲಿ ಅವರು ಕೇವಲ ಹಗರಣಗಳನ್ನು ಮಾಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಭೂಪೇಶ್ ಬಘೇಲ್ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯ ವಿಷಯದಲ್ಲಿ ವಿಫಲವಾಗಿದೆ. ಅವರು 300ಕ್ಕೂ ಹೆಚ್ಚು ಭರವಸೆಗಳನ್ನು ನೀಡಿದ್ದರು, ಅದನ್ನು ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಛತ್ತೀಸ್‌ಗಢ ಸ್ಥಾಪನೆಯಾದ ಕೆಲವೇ ದಿನಗಳಲ್ಲಿ ಈ ರಾಜ್ಯಕ್ಕಾಗಿ ಕೆಲಸ ಮಾಡಲು ನಮಗೆ ಅವಕಾಶ ಸಿಕ್ಕಿತು. ಇಲ್ಲಿ 15 ವರ್ಷಗಳ ಕಾಲ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸಿದೆ. ಈ 15 ವರ್ಷಗಳು ಅನಾರೋಗ್ಯದಿಂದ ಬಳಲುತ್ತಿದ್ದ ಛತ್ತೀಸ್‌ಗಢವನ್ನು ಉತ್ತಮ ರಾಜ್ಯವನ್ನಾಗಿ ಪರಿವರ್ತಿಸಿದೆವು ಎಂದು ಅಮಿತ್ ಶಾ ಹೇಳಿದರು.

ಬಘೇಲ್​ಗೆ ಕುರ್ಚಿ ಕಳೆದುಕೊಳ್ಳುವ ಭೀತಿ

ನಾನು ಛತ್ತೀಸ್‌ಗಢದ ಜನರಿಗೆ ಹೇಳಲು ಬಯಸುತ್ತೇನೆ. ಪ್ರಧಾನಿ ಮೋದಿ ಅವರು ಛತ್ತೀಸ್‌ಗಢವನ್ನು ಅಭಿವೃದ್ಧಿಪಡಿಸಲು ಬಯಸುತ್ತಾರೆ. ಆದರೆ, ಭೂಪೇಶ್ ಬಘೇಲ್ ಅದರಲ್ಲಿ ದೊಡ್ಡ ಅಡಚಣೆಯಾಗಿದ್ದಾರೆ. ಇಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆದರೆ ಕುರ್ಚಿ ಕಳೆದುಕೊಳ್ಳುವ ಭೀತಿ ಬಘೇಲ್ ಅವರಲ್ಲಿದೆ ಎಂದು ಚಾಟಿ ಬೀಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments