Tuesday, August 26, 2025
Google search engine
HomeUncategorizedಇಂದು ಜಿ-20 ಟೀಂ ಜೊತೆಗೆ ಪ್ರಧಾನಿ ಮೋದಿ ಭೋಜನ

ಇಂದು ಜಿ-20 ಟೀಂ ಜೊತೆಗೆ ಪ್ರಧಾನಿ ಮೋದಿ ಭೋಜನ

ನವದೆಹಲಿ : ಜಿ-20 ಶೃಂಗಸಭೆ ಯಶಸ್ವಿಯಾಗುವಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಿದ್ದ ಜಿ-20 ಟೀಂ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭಾರತ್ ಮಂಟಪದಲ್ಲಿ ಸಂವಾದ ನಡೆಸಲಿದ್ದಾರೆ.

ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಸಂವಾದದ ನಂತರ ಭೋಜನ ಸವಿಯಲಿದ್ದಾರೆ ಎಂದು ಪಿಎಂ ಕಚೇರಿ ಮಾಹಿತಿ ನೀಡಿದೆ. ಸಂವಾದದಲ್ಲಿ ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಜಿ-20 ಶೃಂಗಸಭೆಯ ಯಶಸ್ಸಿಗೆ ಕೊಡುಗೆ ನೀಡಿದ ಸುಮಾರು 3,000 ಜನರು ಸಂವಾದದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಇದು ವಿಶೇಷವಾಗಿ ಶೃಂಗಸಭೆಯನ್ನು ಸುಗಮವಾಗಿ ನಡೆಸಲು ನೆಲಮಟ್ಟದಲ್ಲಿ ಕೆಲಸ ಮಾಡಿದವರನ್ನು ಒಳಗೊಂಡಿರುತ್ತದೆ. ಇವರಲ್ಲಿ ಕ್ಲೀನರ್‌ಗಳು, ಚಾಲಕರು, ವೇಟರ್‌ಗಳು ಮತ್ತು ವಿವಿಧ ಸಚಿವಾಲಯಗಳ ಇತರ ಸಿಬ್ಬಂದಿಗಳು ಸೇರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments