ಬೆಂಗಳೂರು: ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ರಿವರ್ಸ್ ಆಪರೇಷನ್ ರೆಡಿಯಾಗಿದೆ ಎಂದು ಕಾಂಗ್ರೆಸ್ಗೆ ಬಿಜೆಪಿ ಮಾಜಿ ಶಾಸಕ ಸಿ.ಟಿ. ರವಿ ತಿರುಗೇಟು ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರು ಆಪರೇಷನ್ಗೆ ಮುಂದಾದ್ರೆ ನಾವು ಸುಮ್ಮನಿರಲ್ಲ ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡುತ್ತೇವೆ, ನಾವು ಹೊಡೆಯೋದು ಸೈನಿಕರಿಗಲ್ಲ, ರಾಜನಿಗೇ, ಅತಿರೇಕಕ್ಕೆ ಕೈ ಹಾಕಿದ್ರೆ ಏನ್ ಮಾಡಬೇಕು ಅಂತ ನಮಗೆ ಚನ್ನಾಗಿ ಗೊತ್ತು ಎಂದು ಅವರು ಹೇಳಿದರು.
ಇದನ್ನೂ ಓದಿ: ಕೋರ್ಟ್ ಆದೇಶವನ್ನು ಮಾಜಿ ಶಿಕ್ಷಣ ಸಚಿವರು ಮೊದಲು ಸರಿಯಾಗಿ ಓದ್ಲಿ: ಮಧು ಬಂಗಾರಪ್ಪ
ನಮ್ಮ ಪಕ್ಷದ ಶಾಸಕರನ್ನು ಕರೆದುಕೊಳ್ಳುವ ಅನಿವಾರ್ಯ ಏನಿದೆ? ನಮ್ಮ ಪಕ್ಷ ಉಳಿಸುವುದು, ಕಟ್ಟುವುದು ನಮಗೆ ಗೊತ್ತು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ಗರಂ ಆದರು.