Tuesday, August 26, 2025
Google search engine
HomeUncategorizedಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ : ನಟ ಉಪೇಂದ್ರ

ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ : ನಟ ಉಪೇಂದ್ರ

ಬೆಂಗಳೂರು : ಆಕ್ಷೇಪಾರ್ಹ ಪದ ಬಳಕೆಯ ಪ್ರಕರಣದಲ್ಲಿ ತನ್ನ ವಿರುದ್ಧದ ಎಫ್​ಐಆರ್​ಗೆ ನ್ಯಾಯಾಲಯ ತಡೆ ನೀಡಿದ ಬಳಿಕ ನಟ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಅನ್ಯಾಯದ ಅನುಮಾನಕ್ಕೆ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ. ಧ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹ್ರದಯಗಳು ಹಿಡಿದ ಪ್ರೀತಿಯ ಕೊಡೆ. ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹ್ರದಯ ನನಗೆ ಕೊಡೆ ತಾಯಿ.. ನನಗೆ ಕೊಡೆ. ಧನ್ಯವಾದಗಳು. Thank you all.. ಎಂದು ಹೇಳಿದ್ದಾರೆ.

ಕ್ಷಮೆ ಸ್ವೀಕರಿಸುವ ಗುಣ ಇರಲಿ

ತಪ್ಪು ಒಪ್ಪಿಕೊಳ್ಳುವುದು ದೊಡ್ಡ ಗುಣ. ಉಪೇಂದ್ರ ಅವರು ತಕ್ಷಣದಲ್ಲಿ ಕ್ಷಮೆಯನ್ನು ಕೇಳಿದ್ದಾರೆ. ಕ್ಷಮೆಯನ್ನು ಸ್ವೀಕರಿಸುವ ಗುಣ ಇರಬೇಕು. ತಪ್ಪು ಯಾರು ಮಾಡಿದ್ರು ತಪ್ಪೇ.. ಆದ್ರೆ ಸಮಯ ಸಂದರ್ಭವನ್ನು ಸ್ವಲ್ಪ ನೋಡಿ. ಹೊರಗಿರುವ ಶತ್ರುವಿಗಿಂತ ಒಳಗಿರುವ ಶತ್ರುಗಳು ಅಪಾಯಕಾರಿ ಎಂದು ನೆಟ್ಟಿಗರು ಉಪ್ಪಿ ಪರ ಬ್ಯಾಟ್ ಬೀಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments