ಕೇರಳ : ಕೇರಳ ರಾಜ್ಯದ ಹೆಸರು ಮರುನಾಮಕರಣ ಮಾಡುವಂತೆ ಕೋರಿ ಸಲ್ಲಿಸಿದ್ದ ಮಸೂದೆಗೆ ಕೇರಳ ವಿಧಾನಸಭೆ ಒಪ್ಪಿಗೆ ಸೂಚಿಸಿದೆ.
ಇದನ್ನೂ ಓದಿ: ಭ್ರಷ್ಟಾಚಾರ ವರದಿ ಪ್ರಸಾರ ಮಾಡದಂತೆ ಸ್ಟೇ ತಂದಿರುವುದು ಇದೇ ಮೊದಲು: ಕಾರಜೋಳ
ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್ ಹಾಗೂ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಕೇರಳ ಎನ್ನುವ ಹೆಸರನ್ನು ಕೇರಳಂ ರಾಜ್ಯ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರವನ್ನು ಕೋರಿ ಮಂಡಿಸಲಾದ ಮಸೂದೆಗೆ ಕೇರಳ ವಿಧಾನಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿದೆ.
ವಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮಸೂದೆಗೆ ಯಾವುದೇ ತಿದ್ದುಪಡಿ ಹಾಗೂ ಮಾರ್ಪಾಡುಗಳನ್ನೂ ಸೂಚಿಸದ ಕಾರಣ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ನಿರ್ಣಯವನ್ನೂ ಮಂಡಿಸಿದ್ದಾರೆ. ನಿಲುವಳಿಗೆ ಸರ್ವಾನುಮತದ ಒಪ್ಪಿಗೆ ನೀಡಲಾಗಿದೆ ಎಂದು ಸಭಾಧ್ಯಕ್ಷ ಎ.ಎಂ. ಶಂಶೀರ್ ಘೋಷಿಸಿದ್ದಾರೆ.


