Site icon PowerTV

ಕೇರಳ ಹೆಸರು ಬದಲಾವಣೆಗೆ ಎಡರಂಗ ಪಕ್ಷ ನಿರ್ಣಯ ಮಂಡನೆ!

ಕೇರಳ ಕೇರಳ ರಾಜ್ಯದ ಹೆಸರು ಮರುನಾಮಕರಣ ಮಾಡುವಂತೆ ಕೋರಿ ಸಲ್ಲಿಸಿದ್ದ ಮಸೂದೆಗೆ ಕೇರಳ ವಿಧಾನಸಭೆ ಒಪ್ಪಿಗೆ ಸೂಚಿಸಿದೆ.

ಇದನ್ನೂ ಓದಿ: ಭ್ರಷ್ಟಾಚಾರ ವರದಿ ಪ್ರಸಾರ ಮಾಡದಂತೆ ಸ್ಟೇ ತಂದಿರುವುದು ಇದೇ ಮೊದಲು: ಕಾರಜೋಳ

ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್ಹಾಗೂ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಕೇರಳ ಎನ್ನುವ ಹೆಸರನ್ನು ಕೇರಳಂ ರಾಜ್ಯ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರವನ್ನು ಕೋರಿ ಮಂಡಿಸಲಾದ ಮಸೂದೆಗೆ ಕೇರಳ ವಿಧಾನಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿದೆ.

ವಿಪಕ್ಷ ಕಾಂಗ್ರೆಸ್ನೇತೃತ್ವದ ಯುಡಿಎಫ್ಮಸೂದೆಗೆ ಯಾವುದೇ ತಿದ್ದುಪಡಿ ಹಾಗೂ ಮಾರ್ಪಾಡುಗಳನ್ನೂ ಸೂಚಿಸದ ಕಾರಣ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ವಿಧಾನಸಭೆಯಲ್ಲಿ ನಿರ್ಣಯವನ್ನೂ ಮಂಡಿಸಿದ್ದಾರೆ. ನಿಲುವಳಿಗೆ ಸರ್ವಾನುಮತದ ಒಪ್ಪಿಗೆ ನೀಡಲಾಗಿದೆ ಎಂದು ಸಭಾಧ್ಯಕ್ಷ .ಎಂ. ಶಂಶೀರ್ಘೋಷಿಸಿದ್ದಾರೆ.

Exit mobile version