Sunday, August 24, 2025
Google search engine
HomeUncategorized'ಗೃಹಲಕ್ಷ್ಮೀ'ಯರಿಗೆ ಗುಡ್ ನ್ಯೂಸ್ : ಇನ್ಮುಂದೆ ಎಸ್ಎಂಎಸ್ ಗೆ ಕಾಯಬೇಕಿಲ್ಲ!

‘ಗೃಹಲಕ್ಷ್ಮೀ’ಯರಿಗೆ ಗುಡ್ ನ್ಯೂಸ್ : ಇನ್ಮುಂದೆ ಎಸ್ಎಂಎಸ್ ಗೆ ಕಾಯಬೇಕಿಲ್ಲ!

ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ನಂತರ ಅರ್ಜಿ ಸಲ್ಲಿಕೆಗೆ ಜನ ಬೇಸತ್ತಿದ್ದರು. ಕಳೆದೊಂದು ವಾರದ ಹಿಂದೆ ಜಾರಿಗೆ ಬಂದ ಗೃಹಲಕ್ಷ್ಮೀ ಯೋಜನೆಯು ಹೊರತೇನಲ್ಲ. ಒಂದು ವಾರದಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಪರದಾಡುತಿದ್ದ ಜನತೆಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಬಹು ನಿರೀಕ್ಷಿತ ಯೋಜನೆಯಾಗಿದ್ದ ಗೃಹಲಕ್ಷ್ಮೀ ಯೋಜನೆಗೆ ಜುಲೈ 19ರಂದು ಸಿಎಂ ಸಿದ್ದರಾಮಯ್ಯ ಚಾಲನೆ‌ ನೀಡಿದ್ದರು. ಅದರಂತೆ‌ ಜುಲೈ 20 ರಿಂದ ಗೃಹ ಲಕ್ಮೀ ಅರ್ಜಿ ಸಲ್ಲಿಕೆಗೆ ಬೆಂಗಳೂರು ೧, ಕರ್ನಾಟಕ ೧, ಮತ್ತು ‌ಸೇವಾ ಕೇಂದ್ರಗಳಲ್ಲಿ ‌ಅರ್ಜಿ‌ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.

ಮತ್ತಷ್ಟು ಸಿಹಿ ಸುದ್ದಿ ಕೊಟ್ಟ ಸರ್ಕಾರ

ಇನ್ನೂ ಈ ಯೋಜನೆಯ ಪಲಾನುಭವಿಗಳು ಅರ್ಜಿ ಸಲ್ಲಿಕೆಗೆ ನಾ ಮುಂದು ತಾ ಮುಂದು ಎಂದು ಮುಗಿಬಿಳುತ್ತಿದ್ದಾರೆ. ಗೃಹಲಕ್ಷೀಯರಿಗೆ, ಸರ್ಕಾರದ ಕೆಲ‌ ರೂಲ್ಸ್ ಗಳು ಅರ್ಜಿ ಸಲ್ಲಿಕೆಯ ವೇಗ ಕಡಿಮೆ ಗೊಳ್ಳುವಂತೆ ಮಾಡಿತ್ತು. ಆದ್ರೆ, ಇದೀಗ ಇದರ ವೇಗವನ್ನು ಹೆಚ್ಚಿಸಿಸಲು,ಗೃಹಲಕ್ಮೀ ಯೋಜನೆಯ ಫಲನುಭಾವಿಗಳಿಗೆ ಸರ್ಕಾರ ಮತ್ತಷ್ಟು ಸಿಹಿ ಸುದ್ದಿಯನ್ನು ನೀಡಿದೆ.

ಇದನ್ನೂ ಓದಿ : ‘ಗೃಹಲಕ್ಷ್ಮೀ’ ಅರ್ಜಿ ಭರ್ತಿಗೆ ಹಣ ವಸೂಲಿ! : ಪವರ್ ಟಿವಿಗೆ ವಿಡಿಯೋ ಲಭ್ಯ

ಅರ್ಜಿ ಸಲ್ಲಿಕೆಗೆ ಕಾಯಬೇಕೆಂದಿಲ್ಲ

ಯೋಜನೆಯ ಪಲಾನುಭವಿಗಳು ಬೆಂಗಳೂರು ಒನ್ ಗ್ರಾಮ್ ಒನ್ ಕೇಂದ್ರಗಳಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲುವ ಪರಿಸ್ಥಿತಿ ಬಂದೋದಗಿತ್ತು. ಇದರಿಂದಾಗಿ ಸರ್ಕಾರದ ವಿರುದ್ದ ಜನರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಗೃಹಲಕ್ಷ್ಮೀ ಅರ್ಜಿ ಸಲ್ಲಿಸಲು ಸರ್ಕಾರ ಕೆಲವು ರೂಲ್ಸ್ ಗಳನ್ನ ನೀಡಿದ್ದು, ಇದರಿಂದ ಜನ ಅರ್ಜಿ ಸಲ್ಲಿಸಲು ಆಗದೆ ಪರದಾಟ ನಡೆಸುತ್ತಿದ್ದರು. ಸರ್ಕಾರ ಎಲ್ಲಾ ಗೊಂದಲಗಳಿಗೂ ಬ್ರೇಕ್ ಆಕಿದ್ದು, ಇನ್ಮುಂದೆ ಎಸ್ಎಂಎಸ್ ಬರುವವರೆಗೂ ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆಗೆ ಕಾಯಬೇಕೆಂದಿಲ್ಲ ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಇನ್ನೂ ಗೃಹ ಲಕ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಪಲಾನುಭವಿಗಳಿಂದ ಹಣ ಪಡೆದರೆ, ಅಸಡ್ಡೆ ತೋರಿದರೆ, ಕ್ರಿಮಿನಲ್ ಕೇಸ್ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments