Saturday, August 23, 2025
Google search engine
HomeUncategorizedಇದು ಜಿಹಾದಿಗಳ ಸರ್ಕಾರ ಎಂಬುದು ಸ್ಪಷ್ಟವಾಗ್ತಿದೆ : ಅಶ್ವತ್ಥನಾರಾಯಣ ಕಿಡಿ

ಇದು ಜಿಹಾದಿಗಳ ಸರ್ಕಾರ ಎಂಬುದು ಸ್ಪಷ್ಟವಾಗ್ತಿದೆ : ಅಶ್ವತ್ಥನಾರಾಯಣ ಕಿಡಿ

ಬೆಂಗಳೂರು : ಇದೇನು ಜಿಹಾದಿ ಪರ ಸರ್ಕಾರವಾ? ಜಿಹಾದಿ ಪೋಷಿತ ಸರ್ಕಾರವಾ? ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಕಿಡಿಕಾರಿದರು.

ಬೆಂಗಳೂರಿನಲ್ಲಿ ಪವರ್ ಟಿವಿಯೊಂದಿಗೆ ಮಾತನಾಡಿದ ಅವರು, ಇದು ಜಿಹಾದಿಗಳ ಸರ್ಕಾರ ಎಂಬುದು ಸ್ಪಷ್ಟ ವಾಗ್ತಿದೆ. ಇಂಥ ಜಿಹಾದಿಗಳು, ನರಹಂತಕರ ಜೊತೆ ನಾವು ಇದ್ದೇವೆ ಅಂತ ತೋರಿಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರದಿಂದ ತುಷ್ಟೀಕರಣ ರಾಜಕಾರಣ ಸ್ಪಷ್ಟ ವಾಗ್ತಿದೆ. ಇವರಿಗೆ ಎಷ್ಟೇ ಅವಕಾಶ ಕೊಟ್ರು ಅಧಿಕಾರ ದುರ್ಬಳಕೆಯಿಂದ ಆಚೆ ಬರೋದಿಲ್ಲ. ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದ ಬಗ್ಗೆ ಇಡೀ ನಾಡಿಗೆ ಗೊತ್ತಿದೆ. ಪೊಲೀಸರ ಮೇಲೆ ಜಿಹಾದಿಗಳ ಹಲ್ಲೆ ಬಗ್ಗೆ ಗೊತ್ತಿರುವ ವಿಷಯ ಎಂದು ಕುಟುಕಿದರು.

ಇದನ್ನೂ ಓದಿ : ಹಿಜಾಬ್ ವಿವಾದಕ್ಕೆ ಸುಪ್ರೀಂಕೋರ್ಟ್ ಹೋಗಿದ್ರು : ಸುನೀಲ್ ಕುಮಾರ್ ಕಿಡಿ

ಗೃಹ ಸಚಿವರ ನಡೆ ದುರದೃಷ್ಟಕರ

ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಆಗಲಿ, ವಿಶೇಷ ವಾಗಿ ಇಲ್ಲಿ ಭಯ ಹುಟ್ಟಿಸುವ ಪ್ರಕರಣ. ಸಮಾಜ ಘಾತುಕರು ಈ ಪ್ರಕರಣದಲ್ಲಿ ತೊಡಗಿದ್ದಂತವರು. ಇವಾಗ ಅಮಾಯಕರು ಅಂತ ಕೇಸ್ ವಾಪಸ್ ಪಡೆಯುವಂತೆ ಧೈರ್ಯವಾಗಿ ಶಾಸಕರು ಪತ್ರ ಬರೆಯುತ್ತಾರೆ. ಆ ಪತ್ರದ ಆಧಾರದ ಮೇಲೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಕ್ರಮಕ್ಕೆ ಸೂಚಿಸ್ತಾರೆ ಅಂದರೆ ಏನು ಅರ್ಥ. ಒಬ್ಬ ಶಾಸಕರ ಮನೆ ಮೇಲೆ ಹಲ್ಲೆ ಆದಾಗ ಖಂಡಿಸಿಲ್ಲ. ಒಬ್ಬ ಗೃಹ ಸಚಿವರಾಗಿ ಈ ರೀತಿಯ ಅವರ ನಡೆ ದುರದೃಷ್ಟಕರ ಎಂದು ಗುಡುಗಿದರು.

ಇದೊಂದು ಮಕ್ಕಳ ಆಟ ಅಂತೆ

ಉಡುಪಿಯಲ್ಲಿ ನಡೆದ ಘಟನೆ ದೇಶದಲ್ಲೇ ಸಂಚಲನ ಮೂಡಿಸಿರುವ ಘಟನೆ. ಅವರು ಶೌಚಾಲಯದಲ್ಲಿದ್ದಾಗ ವಿಡಿಯೋ ಚಿತ್ರೀಕರಣ ಮಾಡ್ತಾರೆ. ಆದರೆ, ಏನು ನಡೆದಿಲ್ಲ ಅಂತ ಪೊಲೀಸರು ಹೇಳ್ತಾರೆ. ಈ ಘಟನೆ ನಡೆದೇ ಇಲ್ಲ ಅಂತ ಎಸ್ಪಿ ಹೇಳ್ತಾನೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ  ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಇದೊಂದು ಮಕ್ಕಳ ಆಟ ಅಂತ ಕಾಂಗ್ರೆಸ್ ನವರು ಟ್ವೀಟ್ ಮಾಡ್ತಾರೆ ಎಂದು ಛೇಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments