Monday, August 25, 2025
Google search engine
HomeUncategorizedನಾಳೆ ಶ್ರೀ ವಿನಾಯಕ ಚತುರ್ಥಿ : ಇಲ್ಲಿದೆ ಪೂಜೆ ಸಮಯ, ವಿಧಾನ, ಮಹತ್ವ!

ನಾಳೆ ಶ್ರೀ ವಿನಾಯಕ ಚತುರ್ಥಿ : ಇಲ್ಲಿದೆ ಪೂಜೆ ಸಮಯ, ವಿಧಾನ, ಮಹತ್ವ!

ಬೆಂಗಳೂರು : ನಾಳೆ ಶ್ರೀ ವಿನಾಯಕ ಚತುರ್ಥಿ. ಶುಕ್ರವಾರದಂದು ಅಧಿಕ ಶ್ರಾವಣ ಮಾಸದ ಪ್ರಥಮ ವಿನಾಯಕ ಚತುರ್ಥಿ. ಈ ದಿನವು ಅತ್ಯಂತ ಶುಭಕರವಾಗಿರಲಿದೆ.

ವಿನಾಯಕ ಚತುರ್ಥಿ ಮಹತ್ವವೇನು? ವಿನಾಯಕ ಚತುರ್ಥಿ ವ್ರತವನ್ನು ಆಚರಿಸುವುದು ಹೇಗೆ? ಎಂಬ ಬಗ್ಗೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಪವರ್​ ಟಿವಿಗೆ ಮಾಹಿತಿ ನೀಡಿದ್ದಾರೆ.

ಯಾರ ಜೀವನದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ನಮಗೆ ಯಶಸ್ಸೇ ಸಿಗುತ್ತಿಲ್ಲ ಎಂಬ ಪ್ರಶ್ನೆ ಇದೆಯೇ? ಅಂತಹವರು ನಾಳೆ ಶ್ರದ್ಧಾ ಭಕ್ತಿ, ನಂಬಿಕೆಗಳಿಂದ ಶ್ರೀ ವಿನಾಯಕನನ್ನು ಪೂಜಿಸುವುದರಿಂದ ಸಕಲ ಸೌಭಾಗ್ಯಗಳನ್ನು ಪಡೆಯಬಹುದು ಎಂದು ಶ್ರೀಗಳು ತಿಳಿಸಿದ್ದಾರೆ.

ನೈವೇದ್ಯಕ್ಕೆ ಏನು ಇಡಬೇಕು

ಶ್ರೀ ವಿನಾಯಕನ ಪೂಜೆಗೆ ಕೆಂಪು ವಸ್ತ್ರವನ್ನು ಧರಿಸಬೇಕು. ಗುರುಗಳಿಂದ ಉಪದೇಶವನ್ನು ಪಡೆದು ಶ್ರೀ ವಿನಾಯಕ ಮೂಲ ಮಂತ್ರಗಳಿಂದ ಪೂಜಿಸಬೇಕು. ಮೋದಕ, ಕಡುಬುಗಳನ್ನು ನೈವೇದ್ಯಕ್ಕೆ ಇಡಬೇಕು. ಗರಿಕೆಯನ್ನು ಶ್ರದ್ಧಾ ಪೂರ್ವಕವಾಗಿ ಮಾಡುವುದರಿಂದ ತಮ್ಮ ಕಾರ್ಯದಲ್ಲಿ ಯಶಸ್ಸು ಪಡೆಯಬಹುದು ಎಂದು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಪೂಜಾ ಸಮಯ :

ಬೆಳಗ್ಗೆ 5.45 ರಿಂದ 9.15

ಮಧ್ಯಾಹ್ನ 12.51 ರಿಂದ 1.30

ಸಂಜೆ 5.20 ರಿಂದ 8.45

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments