Monday, August 25, 2025
Google search engine
HomeUncategorizedಪೊಲೀಸರ ಸೋಗಿನಲ್ಲಿ ವ್ಯಕ್ತಿಯ ಕಿಡ್ನಾಪ್, ನಾಲ್ವರು ಆರೋಪಿಗಳ ಬಂಧನ

ಪೊಲೀಸರ ಸೋಗಿನಲ್ಲಿ ವ್ಯಕ್ತಿಯ ಕಿಡ್ನಾಪ್, ನಾಲ್ವರು ಆರೋಪಿಗಳ ಬಂಧನ

ರಾಮನಗರ : ಪೊಲೀಸರ ಸೋಗಿನಲ್ಲಿ ಬಂದು ವ್ಯಕ್ತಿಯೋರ್ವನನ್ನು ಕಿಡ್ನಾಪ್ ಮಾಡಿ ಹಣ ದೋಚಿದ್ದ ಖದೀಮರನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.

ಚನ್ನಪಟ್ಟಣ ಮೂಲದ ಪ್ರವೀಣ್ (34), ಜಯರಾಮ್ (28), ಶರತ್ (29), ಅರುಣ್ (51) ಬಂಧಿತ ಆರೋಪಿಗಳು. ಬಂಧಿತರಿಂದ 1.90 ಲಕ್ಷ ನಗದು, 10 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ.

1.90 ಲಕ್ಷ, 10 ಗ್ರಾಂ ಚಿನ್ನ 

ಜುಲೈ 4ರಂದು ಚನ್ನಪಟ್ಟಣ ಮೂಲದ ಭೈರಪ್ಪ ಎಂಬ ವ್ಯಕ್ತಿಯನ್ನು ಮಾಗಡಿಯ ಬೆಳಗುಂಬ ಗ್ರಾಮದ ಹೊರವಲಯದಲ್ಲಿ 5 ಖದೀಮರು ಅಡ್ಡ ಹಾಕಿದ್ದರು. ನಾವು ಕುಂಬಳಗೂಡು ಪೊಲೀಸ್ ಠಾಣೆಯ ಸಿಬ್ಬಂದಿ ಎಂದು ಹೇಳಿ ಕಾರಿಗೆ ಹತ್ತಿಸಿಕೊಂಡಿದ್ದಾರೆ. ಬಳಿಕ ಬೆಂಗಳೂರಿಗೆ ಕರೆದೊಯ್ದು 1.90 ಲಕ್ಷ ನಗದು ಹಾಗೂ 10 ಗ್ರಾಂ ಚಿನ್ನ ಕಸಿದುಕೊಂಡು ಭೈರಪ್ಪ ಅವರನ್ನು ಬಿಟ್ಟು ಕಳುಹಿಸಿದ್ದರು.

ಇದನ್ನೂ ಓದಿ : ಎಟಿಎಂನಿಂದ 24 ಲಕ್ಷ ದರೋಡೆ, ಆರೋಪಿಗಳ ಬಂಧನ

ಕಿಡ್ನಾಪ್​ಗೆ ಸಂಚು ರೂಪಿಸಿದ್ದ ಪ್ರವೀಣ್

ಬಳಿಕ ಭೈರಪ್ಪ ಈ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಭೈರಪ್ಪ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಇನ್ನೂ ಪ್ರಕರಣದ ಎ1 ಆರೋಪಿಯಾಗಿರೋ ಪ್ರವೀಣ್ ಹಾಗೂ ಅಪಹರಣಕ್ಕೊಳಗಾಗಿದ್ದ ಭೈರಪ್ಪ ಒಂದೇ ಊರಿನವರಾಗಿದ್ದಾರೆ. ಭೈರಪ್ಪನ ಬಳಿ ಹಣ ಇರುವ ವಿಷಯ ಮೊದಲೇ ತಿಳಿದಿದ್ದ ಪ್ರವೀಣ್, ಕಿಡ್ನಾಪ್ ಮಾಡುವ ಫ್ಲಾನ್ ಮಾಡಿದ್ದಾನೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments