Sunday, August 24, 2025
Google search engine
HomeUncategorizedಕೈ ಕೊಟ್ಟ ಮುಂಗಾರು : ಬೆಳಗಾವಿ ಜಿಲ್ಲೆಯಲ್ಲಿ ಜಲಕ್ಷಾಮದ ಆತಂಕ

ಕೈ ಕೊಟ್ಟ ಮುಂಗಾರು : ಬೆಳಗಾವಿ ಜಿಲ್ಲೆಯಲ್ಲಿ ಜಲಕ್ಷಾಮದ ಆತಂಕ

ಬೆಳಗಾವಿ : ರಾಜ್ಯದಲ್ಲಿ ಮುಂಗಾರು ಮಳೆ ಬಾರದಿರುವ ಕಾರಣ ಎಲ್ಲೆಡೆ ಹಾಹಾಕಾರ ಎದ್ದಿರುವ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯಲ್ಲಿಯೂ ಜಲಕ್ಷಾಮದ ಆತಂಕ ಆರಂಭವಾಗಿದೆ.

ಜಿಲ್ಲೆಯ ಹಲವು ತಾಲ್ಲೂಕುಗಳ ನೀರಿನ ಬವಣೆಯನ್ನು ನೀಗಿಸುತ್ತಿದ್ದ ಜೀವನದಿ ಘಟಪ್ರಭಾ ನದಿಗೆ ನಿರ್ಮಿಸಲಾಗಿರುವ ಹಿಡಕಲ್ ಜಲಾಶಯದಲ್ಲಿ ದಿನಕಳೆದಂತೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನೀರಿನ ಚಿಂತೆ ಪ್ರಾರಂಭವಾಗಿದೆ.

ಹಿಡಕಲ್ ಜಲಾಶಯದಲ್ಲಿ ಮುಳುಗಡೆಯಾಗಿದ್ದ ಪುರಾತನ ವಿಠ್ಠಲ ದೇವಸ್ಥಾನವು ಈಗ ಜನರಿಗೆ ದರ್ಶನಕ್ಕೆ ಮುಕ್ತವಾಗಿದೆ. ಆಷಾಢ ಏಕಾದಶಿಯ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ದಂಡು ಹರಿದುಬರುತ್ತಿದೆ. ವರ್ಷದಲ್ಲಿ ಕೇವಲ 10 ರಿಂದ 15ದಿನಗಳ ಕಾಲ ಈ ದೇವರ ದರ್ಶನವಾಗುತ್ತಿತ್ತು.

ಇದನ್ನೂ ಓದಿ : ಆ.11ರಂದು ಶಿವಮೊಗ್ಗದಿಂದ ಇಂಡಿಗೋ ವಿಮಾನ ಹಾರಾಟ : ಬಿ.ವೈ ರಾಘವೇಂದ್ರ

ಅಚ್ಚರಿಯೆಂದರೆ ಆಷಾಢ ಮಾಸದಲ್ಲಿ ಎಂದೂ ಜನರಿಗೆ ವಿಠ್ಠಲನ ದರ್ಶನವಾಗಿರಲಿಲ್ಲ ಅಲ್ಲದೆ ಜೂನ್ ತಿಂಗಳಲ್ಲೆ ಈ ದೇವಸ್ಥಾನ ಮುಳುಗಡೆಯಾಗುತ್ತಿತ್ತು. ವಿಶೇಷವೆಂದರೆ ನಿರಂತರವಾಗಿ ನೀರಲಿದ್ದರೂ ಸಹ ಈ ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ ಇದೀಗ ಇದು ಪವಾಡದಂತೆ ಕಾಣುತ್ತಿದ್ದು ಜನರು ತಂಡೋಪ ತಂಡವಾಗಿ ಹರಿದು ಬರುತ್ತಿದ್ದಾರೆ.

ಅಲ್ಲದೆ ನೀರಿಲ್ಲದ ಕಾರಣ ಹಿಡಕಲ್ ಜಲಾಶಯ ಡೆಡ್ ಸ್ಟೋರೆಜ್ ಹಂತವನ್ನು ತಲುಪಿದೆ. ಆತಂಕಕಾರಿ ವಿಷಯವೇನೆಂದರೆ 10 ರಿಂದ 15 ದಿನಗಳ ವರೆಗೆ ಮಾತ್ರ ಕುಡಿಯುವ ನೀರು ಸರಬರಾಜು ಮಾಡುವಷ್ಟು  ಸಂಗ್ರಹವನ್ನು ಈ ಜಲಾಶಯ ಹೊಂದಿದ್ದು, ಇದೀಗ ಬೆಳಗಾವಿ ನಗರ ಹಾಗೂ ಹುಕ್ಕೇರಿ ತಾಲೂಕುಗಳಲ್ಲಿ ಕುಡಿಯುವ ನೀರಿ‌ನಲ್ಲಿ ವ್ಯತ್ಯಯ ಆಗುವ ಸಾಧ್ಯತೆಯಿದೆ.ಹಿಡಕಲ್ ಜಲಾಶಯ ಭರ್ತಿ ಆಗುವಂತೆ ಜನರು ಪ್ರಾರ್ಥನೆ ಮಾಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments