Monday, August 25, 2025
Google search engine
HomeUncategorizedRMD ಕದಿಯುತ್ತಿದ್ದ ಕಳ್ಳರು ಅರೆಸ್ಟ್

RMD ಕದಿಯುತ್ತಿದ್ದ ಕಳ್ಳರು ಅರೆಸ್ಟ್

ಹಾವೇರಿ: RMD ಕದಿಯುತ್ತಿದ್ದ ಕಳ್ಳರನ್ನು ಹಾವೇರಿ ಪೊಲೀಸರ ಅರೆಸ್ಟ್ ಮಾಡಿದ್ದಾರೆ. 

ಹೌದು, ನಿವೆಲ್ಲಾ ಕಳ್ಳರನ್ನ ನೋಡಿರ್ತಿರಾ ಆದರೆ ಇಂತಹಾ ಕಳ್ಳರು ಇರ್ತಾರೆ ಅಂತ ನಿಮಗೆ ಗೊತ್ತಾ? ಇಲ್ಲಿ ಕಳ್ಳರು ಕಳ್ಳತನ ಮಾಡಿದ್ದು ಚಿನ್ನ, ಬೆಳ್ಳಿನೂ ಅಲ್ಲ, ಹಣ, ವಜ್ರ ವೈಡೂರ್ಯಗಳನ್ನೂ ಅಲ್ಲ. ಬಾಯಲ್ಲಿ ಹಾಕೊಂಡು ಜಗಿಯೋ ಗುಟ್ಕಾನಾ.. ಅದು ಒಂದಲ್ಲ ಎರಡಲ್ಲ, ಹತ್ತತ್ರ ಕೋಟಿ ಮೌಲ್ಯದ ಗುಟ್ಕಾ ಕದ್ದು ಎಸ್ಕೇಪ್ ಆಗಿದ್ದರು. ಇವರನ್ನು ಹಿಡಿಯಲು ಹಾವೇರಿ ಜಿಲ್ಲಿಯ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಅದ್ರೆ ಇದೀಗ ಖದೀಮರು ಪೊಲೀಸರ ವಂಶವಾಗಿದ್ದಾರೆ.

ಇವರೆಲ್ಲಾ ಯಾವುದೋ ಒಂದು ಅಂಗಡಿ ಕಳ್ಳತನ ಮಾಡಿ ಒಂದಿಷ್ಡು ಗುಟ್ಕಾ ಪಾಕೆಟ್ ಎಗರಿಸೋ ಪ್ಲ್ಯಾನ್ ಅಲ್ಲವೇ ಅಲ್ಲ ಇವರೆಲ್ಲಾ ಪಕ್ಕದ ತಮಿಳುನಾಡಿನ ವರಗೂ ಈ ಕಳ್ಳರ ಗುಂಪು ಗುಟ್ಕಾ ಮಾರಾಟದ ಲಿಂಕ್ ಇಟ್ಟು ಕೊಂಡಿದ್ದಾರೆ.

ಇದನ್ನೂ ಓದಿ: ಹುಂಡಿ ಕಳ್ಳತನ ಬಿಟ್ಟು ಸರಗಳ್ಳತನಕ್ಕಿಳಿದ ಖತರ್ನಾಕ್ ಗ್ಯಾಂಗ್

ಇನ್ನು ಇವರು  87 ಲಕ್ಷ ಮೌಲ್ಯದ ಆರ್.ಎಂ.ಡಿ ಗುಟ್ಕಾ ಕಳ್ಳತನ ಮಾಡಿ ಕಳ್ಳರ ಗ್ಯಾಂಗ್ ಒಂದು ಪರಾರಿಯಾಗಿತ್ತು. ರಾಣೇಬೆನ್ನೂರು ನಗರದ ವಿಶಾಲ್ ಪ್ರಕಾಶ್ ಗುಪ್ತಾ ಎಂಬುದವರ ಗುಟ್ಕಾ ದಾಸ್ತಾನು ಅಂಗಡಿ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ರು.ಆರ್ ಎಂ ಡಿ ಪಾನ್ ಮಸಾಲ್ 2720 ಬಾಕ್ಸ್, ಆರ್ ಎಂಡಿ ಪಾನ್ ಮಸಾಲಾಗೆ ಬಳಸುವ ತಂಬಾಕು 6540 ಬಾಕ್ಸ್, ಎಂ ಗೋಲ್ಡ್ ತಂಬಾಕು 7520 ಬಾಕ್ಸ್ ಕದ್ದು ಪರಾರಿಯಾಗಿದ್ರು. ಇಷ್ಟೊಂದು ಗುಟ್ಕಾ ಬಾಕ್ಸ್ ಕದ್ದಿದ್ದು ಯಾರು? ಇದರಲ್ಲಿ ಯಾರ ಕೈವಾಡ ಇದೆ ಎಂದು ತನಿಖೆಗೆ ಹೊರಟ ಪೊಲೀಸರಿಗೆ ಈ ಗುಟ್ಕಾ ಕಳ್ಳರ ಗ್ಯಾಂಗ್ ಹಿಡಿಯೋದು ಸವಾಲಾಗಿತ್ತು.

ಗುಟ್ಕಾ ಕದ್ದು ಕೊಂಡೊಯ್ಯಲು ಲಾರಿ ಕೂಡಾ ಕಳ್ಳತನ ಮಾಡಿತ್ತು ಈ ಗ್ಯಾಂಗ್. ಸಾಗಿಸೋ ಲಾರಿನೂ ಕದ್ದು ಅದರಲ್ಲಿಯೇ ಗುಟ್ಕಾ ಸಾಗಿಸಿದ ಐನಾತಿ ಗ್ಯಾಂಗ್ ಇದು. ಕೊನೆಗೂ ಪೊಲೀಸರು ಈ ಗುಟ್ಕಾ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ.ಭಗವಾನ್ ರಾಮ್ ,ರತ್ನಾರಾಮ್, ಧಾನಾರಾಮ್, ಅರ್ಜುನ್ ಇವರೇ ಈ ಖತರ್ನಾಕ್ ಕಳ್ಳರು. ಎಲ್ಲರೂ ರಾಜಸ್ಥಾನ ಮೂಲದವರು. ಮೈಸೂರು ಬಳಿಯ ಭುಗತ್ ಗಲ್ಲಿಯಲ್ಲಿ ವಾಸವಾಗಿದ್ದಾರೆ.

ಬ್ಯಾಡಗಿಯಲ್ಲಿ ಲಾರಿ ಕಳ್ಳತನ ಮಾಡಿದ್ದ ಕಳ್ಳರು ನೇರವಾಗಿ ರಾಣೆಬೆನ್ನೂರಿನಲ್ಲಿ ಗುಟ್ಕಾ ಬಾಕ್ಸ್ ಗಳನ್ನು ಕದ್ದು ಲೋಡ್ ಮಾಡಿದ್ರು.ಕೋಟ್ಯಾಂತರ ರೂಪಾಯಿ ಮೌಲ್ಯದ ಗುಟ್ಕಾ ಕದ್ದು ತಮಿಳುನಾಡಿನಲ್ಲಿ ದುಪ್ಪಟ್ಟು ಲಾಭಕ್ಕೆ ಮಾರಬಹುದು ಎಂಬ ಸ್ಕೆಚ್ ಹಾಕಿದ್ರು.ಪಕ್ಕದ ತಮಿಳು ಮಾಡು ರಾಜ್ಯದಲ್ಲಿ ಗುಟ್ಕಾ ಬ್ಯಾನ್ ಆಗಿರೋ ಕಾರಣಕ್ಕೆ ಕಾನೂನು ಬಾಹಿರವಾಗಿ ಡಬಲ್ ರೇಟ್ ಗೆ ಗುಟ್ಕಾ ಮಾರಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ರು.ಈ ಕಳ್ಳರ ಗ್ಯಾಂಗ್ ಗೆ ರಾಣೆಬೆನ್ನೂರು ಪಟ್ಟಣದಲ್ಲಿದ್ದ ಪ್ರಕಾಶ್ .ಟಿ. ಡಿಪೋ ಅಂಗಡಿಯಲ್ಲಿ ಗುಟ್ಕಾ ಬಾಕ್ಸ್ ಇರೋ ಮಾಹಿತಿ ಕೊಟ್ಟಿದ್ದು ಚಂಪಾಲಾಲ್ ಎಂಬ ಮತ್ತೊಬ್ಬ ಐನಾತಿ. ಚಂಪಾಲಾಲ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಪರಾರಿಯಾಗಿರೋ ಚಂಪಾಲಾಲ್ ಗಾಗಿ ಪೋಲೀಸರು ಹುಡುಕಾಟ ನಡೆಸಿದ್ಧಾರೆ.

ಬ್ಯಾಡಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಿಂತಿದ್ದ ಐಶರ್ ಕ್ಯಾಂಟರ್ ವಾಹನ ಕದ್ದು ಅದರಲ್ಲೇ ಗುಟ್ಕಾ ಬಾಕ್ಸ್ ಸಾಗಿಸಿದ್ರು. ಮೊಬೈಲ್ , ಇಂಟರ್ನೆಟ್ ಯಾವುದನ್ನೂ ಬಳಸದೇ, ಪೊಲೀಸರಿಗೆ ಯಾವುದೇ ಸುಳಿವು ಬಿಟ್ಟು ಕೊಡದೇ ಗುಟ್ಕಾ ಕಳ್ಳರು ಪರಾರಿಯಾಗಿದ್ರು. ಒಟ್ನಲ್ಲಿ ಖರ್ತನಾಕ್ ಕಳ್ಳರನ್ನ ಹಾವೇರಿ ಪೊಲೀಸರ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments