Monday, August 25, 2025
Google search engine
HomeUncategorizedರೈತರಿಂದ ತ್ವರಿತಗತಿಯಲ್ಲಿ ಕೊಬ್ಬರಿ ಖರೀದಿ ಮಾಡಿ : ಜಿಲ್ಲಾಧಿಕಾರಿ ಶ್ರೀನಿವಾಸ .ಕೆ ಸೂಚನೆ

ರೈತರಿಂದ ತ್ವರಿತಗತಿಯಲ್ಲಿ ಕೊಬ್ಬರಿ ಖರೀದಿ ಮಾಡಿ : ಜಿಲ್ಲಾಧಿಕಾರಿ ಶ್ರೀನಿವಾಸ .ಕೆ ಸೂಚನೆ

ತುಮಕೂರು: ಜನತೆಯ ಕಲ್ಯಾಣಕ್ಕಾಗಿಯೇ ಸರ್ಕಾರವು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ರೈತರ ಶೋಷಣೆ ಬಗ್ಗೆ ದೂರು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀನಿವಾಸ .ಕೆ ಎಚ್ಚರಿಸಿದರು.

ಹೌದು, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಅನ್ಯಾಯ/ಅಕ್ರಮ ಆಗಿರುವುದು ಕಂಡುಬಂದಲ್ಲಿ ಪರಾಮರ್ಶಿಸಿ ತಕ್ಷಣ ಕ್ರಮಕೈಗೊಳ್ಳಿ, ರೈತರಿಗೆ ತೊಂದರೆ ನೀಡುವರಿಗೆ ಯಾವುದೇ ಮಣೆ ಹಾಕದೆ, ರೈತಾಪಿ ವರ್ಗದವರಿಗೆ ಸರ್ಕಾರದ ಯೋಜನೆಯ ಲಾಭ ತಲುಪುವಂತೆ ನೋಡಿಕೊಂಡು ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚುವರಿ ಖರೀದಿ ಕೇಂದ್ರ: ಚಿಕ್ಕನಾಯಕನಹಳ್ಳಿ ಹೆಚ್ಚುವರಿಯಾಗಿ ೧ ಖರೀದಿ ಕೇಂದ್ರವನ್ನು ಹಾಗೂ ತುರುವೆಕೆರೆ ತಾಲೂಕುನಲ್ಲಿ ೨ ಖರೀದಿ ಕೇಂದ್ರವನ್ನು ಹೆಚ್ಚುವರಿಯಾಗಿ ತೆರಯಲು ಜಿಲ್ಲಾಧಿಕಾರಿಗಳು ಸೂಚಿಸಿದರು

ರೈತರಿಂದ ಖರೀದಿ ಮಾಡಲು ಜಿಲ್ಲಾಧಿಕಾರಿಗಳು ಖಡಕ್​ ಸೂಚನೆ 

ಉಂಡೆ ಕೊಬ್ಬರಿ ಖರೀದಿಗಾಗಿ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ೨,೬೮,೬೧೭ ಕ್ವಿಂಟಾಲ್ ಕೊಬ್ಬರಿ ೧೭,೫೧೦ ರ‍್ಯೆತರಿಂದ ನೋಂದಣಿಯಾಗಿದ್ದು, ಇದರಲ್ಲಿ ಜೂನ್ ೧೯ ೨೦೨೩ರ ಅಂತ್ಯಕ್ಕೆ ೧೨,೦೮೦ ರೈತರಿಂದ ೧,೮೪,೫೧೪ ಕ್ವಿಂಟಾಲ್ ಕೊಬ್ಬರಿಯನ್ನು ಖರೀದಿಮಾಡಲಾಗಿದ್ದು, ಉಳಿದ ೫೪೩೦ ರೈತರಿಂದ ೮೪,೧೦೨ ಕ್ವಿಂಟಾಲ್ ಕೊಬ್ಬರಿಯನ್ನು ತ್ವರಿತಗತಿಯಲ್ಲಿ ರೈತರಿಂದ ಖರೀದಿ ಮಾಡಲು ಜಿಲ್ಲಾಧಿಕಾರಿಗಳು ಕೃಷಿ ಮಾರಾಟ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಮಂಟೇಸ್ವಾಮಿ, ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ಶಾಖಾ ವ್ಯವಸ್ಥಾಪಕರು, ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments