Saturday, August 23, 2025
Google search engine
HomeUncategorizedನನಗೆ ಯಾರ ಹೆಸರು ಗೊತ್ತಿಲ್ಲ, ಯಾರೂ ಪರಿಚಯ ಇಲ್ಲ : ಸಚಿವ ಕೆ.ಎನ್ ರಾಜಣ್ಣ

ನನಗೆ ಯಾರ ಹೆಸರು ಗೊತ್ತಿಲ್ಲ, ಯಾರೂ ಪರಿಚಯ ಇಲ್ಲ : ಸಚಿವ ಕೆ.ಎನ್ ರಾಜಣ್ಣ

ಹಾಸನ : ಶಕ್ತಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ವಿಚಾರ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಏನ್ ಶಿಷ್ಟಾಚಾರ ಉಲ್ಲಂಘನೆ ಆಗಿದೆ. ನಾನು ಯಾರೂ ಅಂತ ನೋಡೇ ಇಲ್ವಾಲ್ಲ ನಡಿ.. ಆಯ್ತಲ್ಲಾ ನೋಡೋಣ ನಡಿರಿ, ಲೋಪ ಆಗಿದ್ರೆ ಸಲಹೆ ಕೊಡಿ. ಆ ಸಲಹೆಯಂತೆ ನಾನು ಮುನ್ನಡೆಯುತ್ತೇವೆ ಎಂದು ಹೇಳಿದ್ದಾರೆ.

ನಾನು ಭಾಷಣದಲ್ಲಿ ಹೇಳಿದ್ದೀನಿ. ನನಗೆ ಯಾರ ಹೆಸರುಗಳು ಗೊತ್ತಿಲ್ಲ. ಯಾರೂ ಪರಿಚಯ ಇಲ್ಲ. ಯಾರ ಹೆಸರನ್ನು ಪ್ರಸ್ತಾಪನೂ ಮಾಡಿಲ್ಲ. ನೀವು ಹೇಳಿದ್ರಲ್ಲಾ ಯಾವ ಲೋಪಗಳಿವೆ ಅದನ್ನು ಸರಿಪಡಿಸಿಕೊಂಡು ಮುಂದೆ ನಡೆಯುತ್ತೇನೆ. ಈ ಜಿಲ್ಲೆಯಲ್ಲಿ ಒಳ್ಳೆಯ ಆಡಳಿತ ಕೊಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಏಕೈಕ ಕಾಂಗ್ರೆಸ್ ಶಾಸಕ ವಿಚಾರದ ಬಗ್ಗೆ ಮಾತನಾಡಿದ ಅವರು, ಜನಾಭಿಪ್ರಾಯ ಏನಿದೆ ಅದಕ್ಕೆ ನಾವೆಲ್ಲ ತಲೆಬಾಗಬೇಕು. ನಾಳೆ ಒಂದು ಸೀಟ್ ಇರೋದು ಹತ್ತು ಸೀಟ್ ಆಗಬಹುದು, ಏಳು ಸೀಟ್ ಆಗಬಹುದು. ಏಳು ಸೀಟ್ ಇರುವುದು ಸೊನ್ನೆ ಆಗಬಹುದು ಅದು ಬೇರೆ ವಿಚಾರ. ಆದರೂ, ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಬಲಶಾಲಿಯಾಗಿ ಮಾಡುವ ಪ್ರಯತ್ನ ನಿರಂತರವಾಗಿ ಇರುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ‘ಸ್ತ್ರೀಗೆ ಶಕ್ತಿ ತುಂಬಲು ಶಕ್ತಿ ಯೋಜನೆ’ ಅಂತಾ ಹೆಸರು ಇಟ್ಟಿದ್ದೇವೆ : ಸಿದ್ದರಾಮಯ್ಯ

ನಾನು ಆರೋಪ ಮಾಡಿಲ್ಲ

ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಸ್ವರೂಪ್‌ ಪ್ರಕಾಶ್ ಗೈರು ವಿಚಾರ ಕುರಿತು ಪ್ರತಿಕ್ರಿಯಿಸಿ, ನಾನು ಏಕೆ ಬರಬಾರದು ಅಂತ ಕೇಳಿದ್ದೀನಿ. ಅವರು ಬರಲಿಲ್ಲ ಅಂದರೆ ವಿರೋಧ ಅಂತಾ ಆರೋಪ ಮಾಡಿಲ್ಲ ನಾನು. ಬೇರೆ ಬೇರೆ ಶಾಸಕರು ಅವರವರ ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಹೋಗಿದ್ದಾರೆ ಅಂತ ಭಾವಿಸಿದ್ದೇನೆ ಎಂದಿದ್ದಾರೆ.

ನಾನು ಉತ್ತರ ಕೊಡಲು ಆಗಲ್ಲ

ಶಾಸಕ ಶಿವಲಿಂಗೇಗೌಡ, ಬಾಲಕೃಷ್ಣ ಸಿಕ್ಕಿದ್ದರು. ನಾವು ನಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮ ಚಾಲನೆ ಮಾಡಬೇಕು ಅಂತ ಹೋದರು. ಇವರು ಕೂಡ ಅದೇ ರೀತಿ ಬರ್ತಾರೆ ಅಂತ ನಿರೀಕ್ಷೆ ಮಾಡಿದ್ದೆ. ಅವರು ಭಾಗವಹಿಸಲಿಲ್ಲ ಎಂದರೆ, ಈ ರೀತಿಯ ಜನಪರ ಕಾರ್ಯಕ್ರಮಗಳಿಗೆ ವಿರೋಧ ಇದ್ದಾರಾ ಅಂತ ಜನ ಏನಾದ್ರು ಭಾವಿಸಿದ್ರೆ ನಾನು ಅದಕ್ಕೆ ಉತ್ತರ ಕೊಡಲು ಆಗಲ್ಲ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments