Sunday, August 24, 2025
Google search engine
HomeUncategorizedಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ಡಿಕೆಶಿಗೆ ಬೆಂಗಳೂರು ಹೊಣೆ, ಇಲ್ಲಿದೆ ನೋಡಿ ಪಟ್ಟಿ

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ಡಿಕೆಶಿಗೆ ಬೆಂಗಳೂರು ಹೊಣೆ, ಇಲ್ಲಿದೆ ನೋಡಿ ಪಟ್ಟಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮ್ಯಯ ಸಾರಥ್ಯದ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ನಿರೀಕ್ಷೆಯಂತೆ ಬೆಂಗಳೂರು ನಗರ ಉಸ್ತುವಾರಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪಾಲಾಗಿದೆ. ಬೆಂಗಳೂರಿಗೆ ಕೂಗಳತೆಯಲ್ಲಿರುವ ತುಮಕೂರು ಜಲ್ಲೆಗೆ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ರಾಜ್ಯ ಸರ್ಕಾರ ಅಳೆದು ತೂಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದೆ. ಬೆಂಗಳೂರು ಭಾಗದ ಐವರು ಸಚಿವರಿದ್ದರೂ ಉಸ್ತುವಾರಿ ಸ್ಥಾನ ಕೈತಪ್ಪಿದ್ದು, ಬೆಂಗಳೂರು ನಗರ ಬಿಟ್ಟು ಬೇರೆ ಜಿಲ್ಲೆಗಳ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗಿದೆ. ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ದಿನೇಶ್​ ಗುಂಡೂರಾವ್, ಜಮೀರ್ ಅಹ್ಮದ್​​, ಬೈರತಿ ಸುರೇಶ್​​​ ಗೆ ಬೆಂಗಳೂರು ಉಸ್ತುವಾರಿ ಮಿಸ್​ ಆಗಿದೆ.

ಸಚಿವ ಮುನಿಯಪ್ಪಗೆ ಸರ್ಕಾರ ಶಾಕ್

ಕೋಲಾರ ಉಸ್ತುವಾರಿ ನಿರೀಕ್ಷೆಯಲ್ಲಿದ್ದ ಕೆ.ಹೆಚ್​ ಮುನಿಯಪ್ಪಗೆ ಸರ್ಕಾರ ಶಾಕ್ ಕೊಟ್ಟಿದೆ. ಕೆ.ಎಚ್​ ಮುನಿಯಪ್ಪಗೆ ಕೋಲಾರ ಬದಲು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ತುಮಕೂರು ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಕೆ.ಎನ್ ರಾಜಣ್ಣಗೆ ತುಮಕೂರು ಬದಲು ಹಾಸನ ಜವಾಬ್ದಾರಿ ನೀಡಲಾಗಿದೆ. ತವರು ಜಿಲ್ಲೆ ಬೆಳಗಾವಿ ಉಸ್ತುವಾರಿ ನಿರೀಕ್ಷೆಯಲ್ಲಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಉಡುಪಿ ಉಸ್ತುವಾರಿ ಹೊಣೆ ನೋಡಲಾಗಿದೆ.

ಇವರೇ ನಿಮ್ಮ ಜಿಲ್ಲೆ ಉಸ್ತುವಾರಿಗಳು

  • ಬೆಂಗಳೂರು ನಗರ : ಡಿ.ಕೆ ಶಿವಕುಮಾರ್​
  • ತುಮಕೂರು : ಡಾ.ಜಿ ಪರಮೇಶ್ವರ್​
  • ಗದಗ : ಹೆಚ್​.ಕೆ.ಪಾಟೀಲ್​
  • ಬೆಂಗಳೂರು ಗ್ರಾಮಾಂತರ : ಕೆ.ಹೆಚ್​ ಮುನಿಯಪ್ಪ
  • ರಾಮನಗರ : ರಾಮಲಿಂಗಾರೆಡ್ಡಿ
  • ಚಿಕ್ಕಮಗಳೂರು : ಕೆ.ಜೆ ಜಾರ್ಜ್​
  • ವಿಜಯಪುರ : ಎಂ.ಬಿ ಪಾಟೀಲ್​
  • ದಕ್ಷಿಣ ಕನ್ನಡ : ದಿನೇಶ್​ ಗುಂಡೂರಾವ್​
  • ಮೈಸೂರು : ಡಾ.ಹೆಚ್​.ಸಿ ಮಹಾದೇವಪ್ಪ
  • ಬೆಳಗಾವಿ : ಸತೀಶ್​ ಜಾರಕಿಹೊಳಿ
  • ಕಲಬುರಗಿ : ಪ್ರಿಯಾಂಕ್​ ಖರ್ಗೆ
  • ಹಾವೇರಿ : ಶಿವಾನಂದ ಪಾಟೀಲ್​
  • ವಿಜಯನಗರ : ಬಿ.ಝಡ್ ಜಮೀರ್ ಅಹ್ಮದ್​ ಖಾನ್​
  • ಯಾದಗಿರಿ : ಶರಣ ಬಸಪ್ಪ ದರ್ಶನಾಪುರ್​
  • ಬೀದರ್​ : ಈಶ್ವರ್ ಖಂಡ್ರೆ
  • ಮಂಡ್ಯ : ಚಲುವರಾಯಸ್ವಾಮಿ
  • ದಾವಣಗೆರೆ : ಎಸ್​.ಎಸ್​ ಮಲ್ಲಿಕಾರ್ಜುನ
  • ಧಾರವಾಡ : ಸಂತೋಷ್​ ಲಾಡ್​
  • ರಾಯಚೂರು : ಡಾ.ಶರಣ ಪ್ರಕಾಶ್ ಪಾಟೀಲ್​
  • ಬಾಗಲಕೋಟೆ : ಆರ್​​.ಬಿ ತಿಮ್ಮಾಪುರ
  • ಚಾಮರಾಜನಗರ : ಕೆ.ವೆಂಕಟೇಶ್​
  • ಕೊಪ್ಪಳ : ಶಿವರಾಜ್​ ತಂಗಡಗಿ
  • ಚಿತ್ರದುರ್ಗ : ಡಿ.ಸುಧಾಕರ್​
  • ಬಳ್ಳಾರಿ : ನಾಗೇಂದ್ರ
  • ಹಾಸನ : ಕೆ.ಎನ್​ ರಾಜಣ್ಣ
  • ಕೋಲಾರ : ಬೈರತಿ ಸುರೇಶ್​
  • ಉಡುಪಿ : ಲಕ್ಷ್ಮಿ ಹೆಬ್ಬಾಳ್ಕರ್​
  • ಉತ್ತರ ಕನ್ನಡ : ಮಂಕಾಳು ವೈದ್ಯ
  • ಶಿವಮೊಗ್ಗ : ಮಧು ಬಂಗಾರಪ್ಪ
  • ಚಿಕ್ಕಬಳ್ಳಾಪುರ : ಡಾ.ಎಂ.ಸಿ ಸುಧಾಕರ್​
  • ಕೊಡಗು : ಎನ್​.ಎಸ್​ ಭೋಸರಾಜು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments