Site icon PowerTV

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : ಡಿಕೆಶಿಗೆ ಬೆಂಗಳೂರು ಹೊಣೆ, ಇಲ್ಲಿದೆ ನೋಡಿ ಪಟ್ಟಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮ್ಯಯ ಸಾರಥ್ಯದ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ನಿರೀಕ್ಷೆಯಂತೆ ಬೆಂಗಳೂರು ನಗರ ಉಸ್ತುವಾರಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪಾಲಾಗಿದೆ. ಬೆಂಗಳೂರಿಗೆ ಕೂಗಳತೆಯಲ್ಲಿರುವ ತುಮಕೂರು ಜಲ್ಲೆಗೆ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ರಾಜ್ಯ ಸರ್ಕಾರ ಅಳೆದು ತೂಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದೆ. ಬೆಂಗಳೂರು ಭಾಗದ ಐವರು ಸಚಿವರಿದ್ದರೂ ಉಸ್ತುವಾರಿ ಸ್ಥಾನ ಕೈತಪ್ಪಿದ್ದು, ಬೆಂಗಳೂರು ನಗರ ಬಿಟ್ಟು ಬೇರೆ ಜಿಲ್ಲೆಗಳ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗಿದೆ. ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ದಿನೇಶ್​ ಗುಂಡೂರಾವ್, ಜಮೀರ್ ಅಹ್ಮದ್​​, ಬೈರತಿ ಸುರೇಶ್​​​ ಗೆ ಬೆಂಗಳೂರು ಉಸ್ತುವಾರಿ ಮಿಸ್​ ಆಗಿದೆ.

ಸಚಿವ ಮುನಿಯಪ್ಪಗೆ ಸರ್ಕಾರ ಶಾಕ್

ಕೋಲಾರ ಉಸ್ತುವಾರಿ ನಿರೀಕ್ಷೆಯಲ್ಲಿದ್ದ ಕೆ.ಹೆಚ್​ ಮುನಿಯಪ್ಪಗೆ ಸರ್ಕಾರ ಶಾಕ್ ಕೊಟ್ಟಿದೆ. ಕೆ.ಎಚ್​ ಮುನಿಯಪ್ಪಗೆ ಕೋಲಾರ ಬದಲು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ತುಮಕೂರು ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದ ಕೆ.ಎನ್ ರಾಜಣ್ಣಗೆ ತುಮಕೂರು ಬದಲು ಹಾಸನ ಜವಾಬ್ದಾರಿ ನೀಡಲಾಗಿದೆ. ತವರು ಜಿಲ್ಲೆ ಬೆಳಗಾವಿ ಉಸ್ತುವಾರಿ ನಿರೀಕ್ಷೆಯಲ್ಲಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಉಡುಪಿ ಉಸ್ತುವಾರಿ ಹೊಣೆ ನೋಡಲಾಗಿದೆ.

ಇವರೇ ನಿಮ್ಮ ಜಿಲ್ಲೆ ಉಸ್ತುವಾರಿಗಳು

Exit mobile version