Saturday, August 23, 2025
Google search engine
HomeUncategorizedಗದ್ದುಗೆ 'ಗುದ್ದಾಟದಲ್ಲಿ ಗೆದ್ದ ಸಿದ್ದು', ಎರಡನೇ ಬಾರಿಗೆ ಸಿದ್ದುನೇ ಸಿಎಂ..!

ಗದ್ದುಗೆ ‘ಗುದ್ದಾಟದಲ್ಲಿ ಗೆದ್ದ ಸಿದ್ದು’, ಎರಡನೇ ಬಾರಿಗೆ ಸಿದ್ದುನೇ ಸಿಎಂ..!

ಬೆಂಗಳೂರು : ದಿ ವೆಯ್ಟ್ ಈಸ್ ಓವರ್. ಸಿದ್ದರಾಮಯ್ಯ ಈಸ್ ಬ್ಯಾಕ್. ಗದ್ದುಗೆ ಗುದ್ದಾಟದಲ್ಲಿ ಗೆದ್ದ ಸಿದ್ದು, ಎರಡನೇ ಬಾರಿ ಸಿದ್ದುನೇ ಸಿಎಂ ಆಗುವುದು ಫಿಕ್ಸ್.

ಹೌದು, ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಅವರಿಗೆ ಮಣೆ ಹಾಕಿದ್ದಾರೆ ಎಂದು ಪವರ್ ಟಿವಿಗೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಿದ್ದು, ಮುಂದಿನ ಸಿಎಂ ಯಾರು ಎಂಬ ಕುತೂಹಲ ಮೂಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ರಾಜ್ಯದ 24ನೇ ಮುಖ್ಯಮಂತ್ರಿಯಾಗುವ ಯೋಗ ಸಿದ್ದುಗೆ ಒಲಿದುಬಂದಿದೆ.

ಅತಿ ಹೆಚ್ಚು ಶಾಸಕರ ಒಲವು

ಸಿದ್ದರಾಮಯ್ಯ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗುವುದು ಬಹುತೇಕ ಫಿಕ್ಸ್ ಎಂದು ಎಐಸಿಸಿ ಮೂಲಗಳು ತಿಳಿಸಿವೆ. ವೀಕ್ಷಕರ ವರದಿಯಲ್ಲಿ ಸಿದ್ದರಾಮಯ್ಯ ಅವರ ಪರ ಅತಿ ಹೆಚ್ಚು ಶಾಸಕರು ಒಲವು ತೋರಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ‘ನನಗೆ ಹೊಟ್ಟೆ ಉರಿ’, ನಾನು ದೆಹಲಿಗೆ ಹೋಗಲ್ಲ : ಡಿಕೆಶಿಗೆ ಏನಾಯ್ತು?

ಸಿದ್ದುಗೆ ಶುಭ ‘ಮಂಗಳವಾರ

ನಾಳೆ ಸಿದ್ದರಾಮಯ್ಯ ಪಾಲಿಗೆ ಶುಭ ‘ಮಂಗಳ’ವಾರ ಆಗುವ ನಿರೀಕ್ಷೆಯಿದೆ. ಮೇ 18 ರಂದೇ ಸಿದ್ದರಾಮಯ್ಯ ಪ್ರಮಾಣ ವಚನ ಸಾಧ್ಯತೆಯೂ ಇದೆ. ನಾಳೆ ಶಿಮ್ಲಾದಿಂದ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ದೆಹಲಿಗೆ ಆಗಮಿಸಲಿದ್ದಾರೆ. ಬಳಿಕ, ಹೈಕಮಾಂಡ್​ ನಾಯಕರು ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಘೋಷಣೆ ಮಾಡಲಿದ್ದಾರೆ.

ಸುಳಿವು ಕೊಟ್ರಾ ಡಿಕೆಶಿ?

ಎಐಸಿಸಿ ಸೂಚನೆ ಮೇರೆಗೆ ಸಿದ್ದರಾಮಯ್ಯ ಅವರು ಇಂದು ದೆಹಲಿಗೆ ತೆರಳಿದ್ದಾರೆ. ಆದರೆ, ಡಿ.ಕೆ ಶಿವಕುಮಾರ್ ದೆಹಲಿಗೆ ತೆರಳಲು ಹಿಂದೇಟು ಹಾಕಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನನಗೆ ಹೊಟ್ಟೆ ಉರಿ ಇದೆ, ಸ್ವಲ್ಪ ಜ್ವರವೂ ಇದೆ. ದೆಹಲಿಗೆ ಹೋಗಲ್ಲ ಎಂದು ಕೊನೆ ಕ್ಷಣದಲ್ಲಿ ಪ್ರವಾಸ ರದ್ದು ಪಡಿಸಿದ್ದಾರೆ. ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಆ ಮೂಲಕ ಸಿದ್ದುಗೇ ಸಿಎಂ ಪಟ್ಟ ಫಿಕ್ಸ್ ಆಗಿದೆ ಎಂಬ ಸುಳಿವು ಕೊಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೊಮ್ಮಾಯಿ ಬಳಿಕಸಿದ್ದುಗೆ ಗದ್ದುಗೆ’

28 ಜುಲೈ 2021ರಂದು ಬಿಜೆಪಿ ಪಕ್ಷದ ನಾಯಕ ಬಸವರಾಜ ಸೋಮಪ್ಪ ಬೊಮ್ಮಾಯಿ ಅವರು ಕರ್ನಾಟಕದ 23ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜಭವನದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments