Tuesday, August 26, 2025
Google search engine
HomeUncategorized'ಕಮಲ ಅರಳಲಿದೆ, ಚಿಕ್ಕಬಳ್ಳಾಪುರ ಗೆಲ್ಲಲಿದೆ' : ಸಚಿವ ಡಾ.ಕೆ ಸುಧಾಕರ್ ವಿಶ್ವಾಸ

‘ಕಮಲ ಅರಳಲಿದೆ, ಚಿಕ್ಕಬಳ್ಳಾಪುರ ಗೆಲ್ಲಲಿದೆ’ : ಸಚಿವ ಡಾ.ಕೆ ಸುಧಾಕರ್ ವಿಶ್ವಾಸ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಅಲ್ಲದೆ‌ ಇಂದು ಬಹಿರಂಗ ಸಭೆಗೆ ಕೊನೆಯ ದಿನ ಆದ ಕಾರಣ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. 

ಕಳೆದ ೧೦ ವರ್ಷಗಳಲ್ಲಿ ಸಚಿವರಾಗಿ ತಾಲೂಕಿಗೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು‌ ಜನರಿಗೆ ತಿಳಿಸಿದ್ದಲ್ಲದೆ, ಇಂದು ಮುಂದಿನ ಐದು ವರ್ಷಗಳಲ್ಲಿ ಮಾಡುವ ಅಭಿವೃದ್ಧಿ ಕೆಲಸಗಳನ್ನು ಪ್ರಣಾಳಿಕೆ ಮೂಲಕ ಬಿಡುಗಡೆ ಮಾಡಿದ್ದಾರೆ.

ಪ್ರಮುಖವಾಗಿ ಹಣ್ಣು ಮತ್ತು ತರಕಾರಿ ಬೆಳೆಯುವ ಜಿಲ್ಲೆ ಆಗಿದ್ದು, ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬೆಳೆಗಳನ್ನು ಸಹ ಬೆಳೆಯಲಾಗುತ್ತಿದೆ. ಪ್ರಮುಖವಾಗಿ ಜಿಲ್ಲೆಗೆ ನೀರಾವರಿ ವ್ಯವಸ್ಥೆಯನ್ನು ತಮ್ಮ ಅವಧಿಯಲ್ಲಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆಯನ್ನು ಬೇಗ ಸಂಪೂರ್ಣಗೊಳಿಸಿ ಜನರ ಅನುಕೂಲಕ್ಕೆ ಬರುವಂತೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.

ಇದನ್ನೂ ಓದಿ : ಧರ್ಮಯುದ್ಧದಲ್ಲಿ ‘ಸತ್ಯ ಗೆಲ್ಲಬೇಕು, ಅಧರ್ಮ’ ಸೋಲಬೇಕು : ‘ಕೈ’ ವಿರುದ್ಧ ಡಾ.ಕೆ ಸುಧಾಕರ್ ಗುಡುಗು

ಪ್ರಮುಖವಾಗಿ ಎಚ್.ಎನ್ ವ್ಯಾಲಿ ನೀರನ್ನು ಜಿಲ್ಲೆಗೆ ತರುವಾಗ ಬಹಳಷ್ಟು ಜನರು ವಿರೋಧ ವ್ಯಕ್ತಪಡಿಸಿದರು. ಆದರೆ, ಜನರ ಅನುಕೂಲಕ್ಕಾಗಿ ಆ ಯೋಜನೆಯನ್ನು ಜಿಲ್ಲೆಗೆ ತಂದೆವು. ಇನ್ನೂ ನಂಧಿಗಿರಿಧಾಮಕ್ಕೆ ರೋಪ್ ವೇ, ಆದಿ ಯೋಗಿ ಪ್ರತಿಮೆ ಸೇರಿ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಕೆಲಸ ಮಾಡಲಾಗಿದೆ ಎಂದರು.

ಇನ್ನೂ ಮುಂದಿನ ಐದು ವರ್ಷಗಳಲ್ಲಿ ತಾಲೂಕಿಗೆ ಬೇಕಾದ ಅಭಿವೃದ್ಧಿ ಕೆಲಸಗಳ‌ ಪಟ್ಟಿ ಮಾಡಿ ಸಚಿವ ಡಾ.ಕೆ ಸುಧಾಕರ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ಅರಳಲಿದೆ ಕಮಲ, ಗೆಲ್ಲಲಿದೆ ಚಿಕ್ಕಬಳ್ಳಾಪುರ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments