Tuesday, August 26, 2025
Google search engine
HomeUncategorized'ಗುಡಿಸಿಲಿನಲ್ಲಿ ವಾಸ್ತವ್ಯ' ಹೂಡಿ ಗಮನ ಸೆಳೆದ ಡಾ.ಕೆ.ಕೆಂಪರಾಜ್

‘ಗುಡಿಸಿಲಿನಲ್ಲಿ ವಾಸ್ತವ್ಯ’ ಹೂಡಿ ಗಮನ ಸೆಳೆದ ಡಾ.ಕೆ.ಕೆಂಪರಾಜ್

ಬೆಂಗಳೂರು : ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಡಾ.ಕೆ.ಕೆಂಪರಾಜ್ ಅವರ ಆರ್ಭಟ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಈ ಮಧ್ಯೆ, ಗುಡಿಸಿಲಿನಲ್ಲಿ ವಾಸ್ತವ್ಯ ಹೂಡಿ ಗಮನ ಸೆಳೆದಿದ್ದಾರೆ.

ಈ ಕುರಿತು ಮಾತನಾಡಿರುವ ಡಾ.ಕೆ.ಕೆಂಪರಾಜ್ ಅವರು, 80 ವರ್ಷ ಇತಿಹಾಸವುಳ್ಳ ಹೊಸೂರು ಗ್ರಾಮದ 2ನೇ ವಾರ್ಡ್ ವ್ಯಾಪ್ತಿಯ ಗುಡಿಸಿಲಿನಲ್ಲಿ ವಾಸ್ತವ್ಯ ಹೂಡುವ ಮೂಲಕ ನನ್ನ ಜೀವನದ 40 ವರ್ಷಗಳ ಹಿಂದಿನ ನೆನಪು ಮರುಕಳಿಸಿದಂತಾಗಿದೆ ಎಂದು ಹೇಳಿದ್ದಾರೆ.

ಗುಡಿಸಲು ಮುಕ್ತ ಗೌರಿಬಿದನೂರು

ನನ್ನ ಕನಸು, ಜನತೆಯ ಆಸೆ ಗುಡಿಸಲು ಮುಕ್ತ ಗೌರಿಬಿದನೂರು. ಕ್ರ.ಸಂ. 9ರ ಉಂಗುರ ಗುರುತಿಗೆ ಮತ ನೀಡುವ ಮೂಲಕ ನನ್ನನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ. ಆ ಮೂಲಕ ಗೌರಿಬಿದನೂರು ಜನತೆಯ ಹಿತ ಕಾಪಾಡಲು ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ‘ಸೋತ್ರೆ ಸೀದಾ ಮನೆಗೆ’ ಹೋಗುತ್ತದೆ : ಸಿಎಂ ಬೊಮ್ಮಾಯಿ

ಅಭೂತಪೂರ್ವ ಬೆಂಬಲ

ಗೌರಿಬಿದನೂರು ತಾಲ್ಲೂಕಿನ ಸೊನಗಾನಹಳ್ಳಿ, ಹಾಲಗಾನಹಳ್ಳಿ,‌ದೊಡ್ಡಕುರುಗೋಡು, ಚಿಕ್ಕಕುರುಗೋಡು, ಮೇಳ್ಯ, ಬೈಚಾಪುರ‌ ಹಾಗೂ ಮುದಲೋಡು‌ ಗ್ರಾಮ ಪಂಚಾಯತಿಗಳಲ್ಲಿ ಡಾ.ಕೆಂಪರಾಜ್ ಪ್ರಚಾರ ನಡೆಸಿದರು. ‘ಕೆಂಪರಾಜ್ ಜನರ ಆಶೀರ್ವಾದದ ಕಡೆ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.

ಕೆಂಪರಾಜ್ ಅವರ ನಾಲ್ಕೂವರೆ ವರ್ಷಗಳ ಸಾಮಾಜಿಕ ಕಾರ್ಯಗಳಿಗೆ ಮನಸೋತ‌ ಗೌರಿಬಿದನೂರು ಜನ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಸಿ ಕೆಂಪರಾಜ್ ಗೆ ನೈತಿಕ ಬೆಂಬಲದ ಜೊತೆಗೆ ಗೆಲ್ಲಿಸುವ ಭರಸವೆ ನೀಡುತ್ತಿದ್ದಾರೆ. ಆರತಿ ಬೆಳಗುವ ಮಹಿಳೆಯರು ಕೆಂಪರಾಜ್ ಅವರ ಜನಪರ ಸೇವೆಗಳನ್ನ ಕೊಂಡಾಡ್ತಿದ್ದು, ಜನ ನಾಯಕನನ್ನು ಗೆಲ್ಲಿಸುವ ಭರವಸೆ ನೀಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments